ಲೋಕದರ್ಶನ ವರದಿ
ಶಿಗ್ಗಾವಿ14: ಗೊಟಗೋಡಿಯ ಬಕ್ಕೇಶ್ವರ ದೊಡ್ಡಾಟ ಮಂಡಳಿ ಪ್ರದಶರ್ಿಸಿದ ಕುರುಕ್ಷೇತ್ರ ಅಥರ್ಾತ್ ಭೀಮ-ದುಯರ್ೋಧನರ ಗದಾಯುದ್ದ ಪ್ರೇಕ್ಷಕರನ್ನು ರಂಜಿಸಲು ಯಶಸ್ವಿಯಾಯಿತು.
ದೊಡ್ಡಾಟ ಪ್ರದರ್ಶನಕ್ಕೆ ಚಾಲನೆ ನೀಡಿದ ಕಲಾವಿದ ಡಾ.ಟಿ.ಬಿ. ಸೊಲಬಕ್ಕನವರ ಮಾತನಾಡಿ, ಜಾತಿ ಮತ್ತು ಧರ್ಮದ ಆಧಾರದಲ್ಲಿ ರಾಜಕೀಯ ಜನರನ್ನು ವಿಭಜಿಸುತ್ತದೆ.
ಆದರೆ ನಮ್ಮ ಬದುಕಿನ ಭಾಗವಾಗಿರುವ ದೊಡ್ಡಾಟ ಜನರನ್ನು ಒಂದುಗೂಡಿಸುತ್ತದೆ ಎಂದರು.
ಡಾ.ಶ್ರೀಶೈಲ ಹುದ್ದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಥೆಗಾರ ಗೋವಿಂದಪ್ಪ ತಳವಾರ ನಿದರ್ೇಶನ, ಶಂಕರ ಅರ್ಕಸಾಲಿ ಪ್ರಸಾಧನ, ಭರಮಪ್ಪ ಭಜಂತ್ರಿ ಶಹನಾಯಿ, ಚನ್ನಬಸಪ್ಪ ಬೆಂಡಿಗೇರಿ ಮೃದಂಗ, ವಿರೂಪಾಕ್ಷಪ್ಪ ಪಾಲಗಣ್ಣವರ ಹಾರ್ಮೋನಿಯಂ ಸಾಥ್ ದೊಡ್ಡಾಟದ ಮೆರುಗನ್ನು ಹೆಚ್ಚಿಸಿತು.
ವಿರೂಪಾಕ್ಷಪ್ಪ ಗೊಟಗೋಡಿಮಠ, ಯಲ್ಲಪ್ಪ ಮೆಣಸಿನಕಾಯಿ, ನಿಂಗಪ್ಪ ಕುರುಬರ, ಹಜರೇಸಾಬ ಮುಲ್ಲಾನವರ, ಅಜರ್ುನ ವಾಲೀಕಾರ ಹಿನ್ನೆಲೆ ಸಂಗೀತ ಒದಗಿಸಿದರು.
ಮುಖಂಡರಾದ ಅಜರ್ುನ ಹಂಚಿನಮನಿ, ಶಿವಾನಂದ ಮ್ಯಾಗೇರಿ, ವನಹಳ್ಳಿ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು, ಗೊಟಗೋಡಿ ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.