ಮುಗಳಖೋಡ 19: ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಕೇಂದ್ರ ಶಾಲಾ ಆವರಣದಲ್ಲಿ ಕೇಂದ್ರ ಮಟ್ಟದ ಇಲಾಖಾ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಸಮಾರಂಭದಲ್ಲಿ ಕೇಂದ್ರ ಶಾಲಾ ವಿದ್ಯಾಥರ್ಿನಿಯರಿಂದ ಸ್ವಾಗತ ಗೀತೆ ಹಾಡಿದರು. ಅಧ್ಯಕ್ಷತೆಯನ್ನು ಪುರಸಭೆ ಅಧ್ಯಕ್ಷ ಮಹಾಂತೇಶ ಗೋಳಸಂಗಿ ವಹಿಸಿದ್ದರು. ಧ್ವಜ ಸ್ತಂಭದ ಪೂಜೆ ಪುರಸಭೆ ಸದಸ್ಯ ಕರೆಪ್ಪ ಮಂಟೂರ ಮಾಡಿದರು. ಧ್ವಜಾರೋಹಣವನ್ನು ಎಲ್.ಬಿ.ಮುನ್ಯಾಳ ನೆರವೇರಿಸಿದರು. ಕ್ರೀಡಾ ಜ್ಯೋತಿಯನ್ನು ಪುರಸಭೆ ಸದಸ್ಯ ಕೆಂಪಣ್ಣ ಮೂಸಿ ಸ್ವಾಗತಿಸಿದರು. ರಾಯಬಾಗ ತಾಲೂಕಿನ ಪರೀವೀಕ್ಷಕರಾದ ಡಿ.ಎಸ್.ಡಿಗ್ರಜರವರು ನಿಣರ್ಾಯಕರಾದರು. ನಿಷ್ಪಕ್ಷಪಾತ, ತಾರತಮ್ಯವಿಲ್ಲದೆ ನಿರ್ಣಯಗಳನ್ನು ನೀಡಿ ಕ್ರೀಡಾಕೂಟದ ನಿಯಮಗಳನ್ನು ಹಾಗೂ ಮಹತ್ವವನ್ನು ತಿಳಿಯಪಡಿಸಿದರು. ನಿಮ್ಮ ನಿರ್ಣಯದಿಂದ ಒಳ್ಳೆಯ ಸ್ಪಧರ್ೆಗಳನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
24 ವಿವಿಧ ಶಾಲೆಗಳಿಂದ ಬಂದ ಸ್ಪಧರ್ಾಳುಗಳಿಗೆ ದೈಹಿಕ ಶಿಕ್ಷಕ ಮಾರುತಿ ಕಳ್ಳಿಗುದ್ದಿ ಪ್ರತಿಜ್ಞಾವಿಧಿ ಬೋಧಿಸಿದರು. ಸಿ.ಆರ್.ಪಿ ಎಸ್.ಬಿ.ಹಣಸಿ, ಡಿ.ವ್ಹಿ. ನಡಹಟ್ಟಿ. ಪುರಸಭೆ ಸದಸ್ಯ ಚಂದ್ರಕಾಂತ ಗೌಲತ್ತಿನವರ, ಶಿವಬಸು ಕಾಪಸಿ, ಶ್ರೀಕಾಂತ ಶೇಗುಣಸಿ, ಕುಮಾರ ಬಾಬಣ್ಣವರ, ಎಲ್ಲಾ ಶಾಲಾ ಶಿಕ್ಷಕ ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು.
ಎಸ್.ಬಿ. ಢವಳೇಶ್ವರ ಸ್ವಾಗತಿಸಿದರು. ಎಮ್.ಎಸ್.ಕಳ್ಳಿಗುದ್ದಿ ನಿರೂಪಿಸಿದರು. ವ್ಹಿ.ಬಿ.ಗಸ್ತಿ ವಂದಿಸಿದರು. ಪುರಸಭೆ ಅಧ್ಯಕ್ಷ ಗುಂಡು ಎಸೆಯುವ ಮೂಲಕ ಹಾಗೂ ಬಲೂನ ಹಾರಿಸುವ ಮೂಲಕ ಕ್ರೀಡಾಕೂಟಗಳಿಗೆ ಚಾಲನೆ ನೀಡಿದರು.