ವಡ್ರಾಳ ಜನತಾ ಪ್ಲಾಟನಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೆ

ಚಿಕ್ಕೋಡಿ 05: ಡಿಸೆಂಬರ ಮುಗಿದು ಜನೇವರಿ ಆರಂಭವಾದರೆ ಸಾಕು ಚಿಕ್ಕೋಡಿ ತಾಲೂಕಿನ ಪೂರ್ವ ಭಾಗ ಮತ್ತು ದಕ್ಷಿಣ  ಭಾಗದ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ರಾಜ್ಯ ಸಕರ್ಾರ ಎಷ್ಟೇ ಪ್ರಯತ್ನ ಮಾಡಿದರೂ ಸಹ ಮತ್ತೆ ಈ ವರ್ಷ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಚಿಕ್ಕೋಡಿ ತಾಲೂಕು ಬರಗಾಲ ಪೀಡಿತ ಪಟ್ಟಿಯಲ್ಲಿ ಸೇರ್ಪಡೆಯಾದರೂ ಸಹ ಇಲ್ಲಿನ ನಾಗರಿಕರಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂಬ ಕೊರಗು ಅಲ್ಲಿಯ ನಿವಾಸಿಗಳನ್ನು ಕಾಡುತ್ತಿದೆ.

ಹೌದುತಾಲೂಕಿನ ವಡ್ರಾಳ ಗ್ರಾಮದ ಜನತಾ ಪ್ಲಾಟನಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೆ ಏರಿದ್ದು, ಅಲ್ಲಿಯ ನಿವಾಸಿಗಳು 2 ರಿಂದ 3 ಕಿ.ಮೀ ದೂರಕ್ಕೆ ಕ್ರಮೀಸಿ ಬಾವಿಯಿಂದ ನೀರು ತರುವ ಪ್ರಸಂಗ ಬಂದೊದಗಿದೆ. ಕಳೆದ ಹದಿನೈದು ದಿನಗಳಿಂದ ಈ ನೀರಿನ ಸಮಸ್ಯೆ ಎದುರಾದರೂ ಸಹ ಸ್ಥಳೀಯ ಗ್ರಾಮ ಪಂಚಾಯತಿ, ಗ್ರಾಮೀಣ ಕುಡಿಯುವ ನೀರು ಸರಬರಾಜ ಇಲಾಖೆ ಮತ್ತು ಕಂದಾಯ ಇಲಾಖೆ ಇತ್ತ ಕಡೆ ಗಮನ ಹರಿಸುತ್ತಿಲ್ಲ ಎಂದು ಅಲ್ಲಿಯ ನಿವಾಸಿಗಳು ರಾಜ್ಯ ಸಕರ್ಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೀಗ ಡಿಸೆಂಬ ಮುಗಿದು ಜನವೇರಿ ತಿಂಗಳು ಆರಂಭವಾಗಿದೆ. ಬೇಸಿಗೆ ಬರಲು ಇನ್ನೂ ಎರಡು ತಿಂಗಳು ಇದ್ದರೂ ಸಹ ಬೇಸಿಗೆ ಮುನ್ನವೆ ಚಿಕ್ಕೋಡಿ ತಾಲೂಕಿನ ದಕ್ಷಿಣ ಭಾಗದಲ್ಲಿ  ಕುಡಿಯುವ ನೀರಿನ ಹಾಹಾಕಾರ ಎದುರಾಗಿದೆ. ತಾಲೂಕಿನ ವಡ್ರಾಳ ಗ್ರಾಮದ ಜನತಾ ಪ್ಲಾಟದಲ್ಲಿ ಸುಮಾರು 50 ಕ್ಕೂ ಹೆಚ್ಚಿನ ಕುಟುಂಬಗಳು ವಾಸಿಸುತ್ತಿದ್ದು. ಇದೀಗ ಅಲ್ಲಿಯ ಜನರು ಹನಿ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಅಲ್ಲಿನ ನಿವಾಸಿಗಳಿಗೆ ಈಗಾಗಲೇ ಕುಡಿಯುವ ನೀರಿನ ಯೋಜನೆಯೊಂದು ಪ್ರಾರಂಭಿಸಲಾಗಿತ್ತು. ಆದರೆ, ಅದು ಸ್ಥಗಿತಗೊಂಡಿದೆ. ಮಹಿಳೆಯರು ಮತ್ತು ಶಾಲೆಗೆ ಹೋಗುವ ಹೆಣ್ಣು ಮಕ್ಕಳು ಜೀವದ ಹಂಗು ತೊರೆದು ಬಾವಿಯಲ್ಲಿ ಇಳಿದು ಒಂದು ಬಿಂದಿಗೆ ನೀರು ಮೇಲೆ ತರುವ ಪ್ರಸಂಗ ಬಂದೊದಗಿದೆ. 

ವಡ್ರಾಳ ಗ್ರಾಮದ ಜನತಾ ಪ್ಲಾಟದಲ್ಲಿ ಕಳೆದ 10 ರಿಂದ 15 ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಲೆ ಬಂದಿದೆ. ಆದರೆ ಇಲ್ಲಿನ ಗ್ರಾಮ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ಕ್ಷೇತ್ರದ ಶಾಸಕರು ನೀರಿನ ಸಮಸ್ಯೆ ಬಗೆಹರಿಸುತ್ತಿಲ್ಲ, ನೂರಾರು ಬಾರಿ ಮನವಿ ಮಾಡಿದರೂ ಸಹ ಸಮರ್ಪಕವಾಗಿ ಸ್ಪಂಧಿಸುತ್ತಿಲ್ಲ ಎಂದು ಸ್ಥಳೀಯ ಜನರು  ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಸ್ಥಳೀಯ ಮುಖಂಡರೊಬ್ಬರು ಪ್ರತಿ ದಿನ ನೀರು ಒದಗಿಸಲಾಗುತ್ತದೆಂದು ಪ್ರತಿ ಕುಟುಂಬಕ್ಕೆ ತಲಾ 50 ರೂ ದಂತೆ ಹಣ ವಸೂಲಿ ಮಾಡಿದ್ದಾರೆ. ಈಗ ಕೇಳಿದರೆ ನೀರು ಇಲ್ಲ ಹಣವನ್ನು ಸಹ ನೀಡುತ್ತಿಲ್ಲ, ಹೀಗಾಗಿ ಜನ ಜಾನುವಾರಗಳಿಗೆ ಬಾವಿಯಿಂದ ನೀರು ತಂದು ಹಾಕುವಲ್ಲಿ ಇಡೀ ದಿನವೇ ಕಳೆದು ಹೋಗುತ್ತದೆ ಎಂದು ಸ್ಥಳೀಯ ಮಹಿಳೆ ಶಿವಲೀಲಾ ಪಾಟೀಲ ಕಳವಳ ವ್ಯಕ್ತಪಡಿಸಿದರು.

ವಿಫಲವಾದ ಯೋಜನೆ: ರಾಯಬಾಗ ವಿಧಾನ ಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ ತಾಲೂಕಿನ 12 ಹಳ್ಳಿಗಳಿಗೆ ಅನುಕೂಲವಾಗಲು ಜೈನಾಪೂರ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿತ್ತು. ಆದರೆ ಈ ಯೋಜನೆಯಿಂದ ಸಮರ್ಪಕ ನೀರು ಬರದೇ ಇರುವ ಕಾರಣದಿಂದ ವಡ್ರಾಳ ಗ್ರಾಮದ ಜನತಾ ಪ್ಲಾಟದ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಕೂಡಲೇ ಅಧಿಕಾರಿಗಳು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಮರ್ಪಕ ಅನುಷ್ಠಾನ ಮಾಡಿ ಎಲ್ಲ ಗ್ರಾಮಗಳಿಗೆ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕೆಂದು ವಡ್ರಾಳ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ನಿವಾರಣೆ: 

ವಡ್ರಾಳ ಗ್ರಾಮದಲ್ಲಿ ಪ್ರತಿ ವರ್ಷ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದು ನಿಜ, ಆದ್ದರಿಂದ ತಾವು ಗ್ರಾಮದ ಜನತಾ ಪ್ಲಾಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತದೆ. ಅವಶ್ಯ ಇದ್ದರೆ ವಾರದೊಳಗೆ ಒಂದು ಕೊಳವೆ ಬಾವಿ ಕೊರೆಯಿಸಿ ನೀರಿನ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ತಾ.ಪಂ.ಚಿಕ್ಕೋಡಿ ಕಾರ್ಯನಿವರ್ಾಹಕ ಅಧಿಕಾರಿ ಕೆ.ಎಸ್.ಪಾಟೀಲ ಪ್ರತಿಕ್ರಿಯೇ ನೀಡಿದರು.