ಡಾ. ಆರ್‌. ನಾಗರಾಜು ಅವರಿಗೆ ಡಿ.ಲಿಟ್ ಪದವಿ ಪ್ರಧಾನ

Dr. R. Nagaraju has a D. Litt

ಡಾ. ಆರ್‌. ನಾಗರಾಜು ಅವರಿಗೆ ಡಿ.ಲಿಟ್ ಪದವಿ ಪ್ರಧಾನ  

 ಬಾಗಲಕೋಟೆ 04 : ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ ಆರ್ ನಾಗರಾಜು ಅವರು ಸಲ್ಲಿಸಿದ "ಕನ್ನಡ ಸಂಗೀತ ಕ್ಷೇತ್ರಕ್ಕೆ ಶರಣ ಸಾಹಿತ್ಯ ಮತ್ತು ದಾಸ ಸಾಹಿತ್ಯದ ಕೊಡುಗೆ" ಒಂದು ತೌಲನಿಕ ಅಧ್ಯಯನ ಎಂಬ ಪ್ರೌಢ ಪ್ರಬಂಧಕ್ಕೆ  ಮೈಸೂರಿನ, ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ಡಿ.ಲಿಟ್ ಪದವಿಯನ್ನು ನೀಡಿದೆ ಎಂದು ಕುಲಪತಿಗಳಾದ ಪ್ರೊ. ನಾಗೇಶ ವಿ ಬೆಟ್ಟಕೋಟೆಯವರು ತಿಳಿಸಿದ್ದಾರೆ.ಮೂಲತಹ ತುಮಕೂರು ಜಿಲ್ಲೆಯವರಾದ ಇವರು ಕಳೆದ ಎರಡು ದಶಕಗಳಿಂದ ಬಾಗಲಕೋಟೆ ಜಿಲ್ಲೆಯಲ್ಲಿರುವ ಬಿ ವಿ ವಿ ಸಂಘದ ಪದವಿ ಮಹಾವಿದ್ಯಾಲಯಗಳಲ್ಲಿ  ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಪಾರವಾಗಿ ಸೇವೆ ಸಲ್ಲಿಸಿರುವ ಇವರು ಹತ್ತಾರು ಕೃತಿಗಳನ್ನು ಬರೆದಿದ್ದಾರೆ, ಇವರ ನೂರಾರು ಲೇಖನಗಳು ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹತ್ತಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಡಿಲಿಟ್ ಪದವಿ ಪಡೆದ ಮೊದಲಿಗರಾಗಿದ್ದಾರೆ. ಅಭಿನಂದನೆ: ಡಾ ಆರ್ ನಾಗರಾಜ್ ಅವರು ಡಿಲಿಟ್ ಪದವಿ ಪಡೆದಿರುವುದಕ್ಕೆ  ಬಾಗಲಕೋಟೆ ಬಿವಿವಿ ಸಂಘದ ಕಾರ್ಯಾಧ್ಯಕ್ಷರಾದ ಡಾ ವೀರಣ್ಣ ಚರಂತಿಮಠ ಗೌರವ ಕಾರ್ಯದರ್ಶಿಗಳಾದ ಶ್ರೀ ಮಹೇಶ ಎನ್ ಅಥಣಿ. ಕಾಲೇಜುಗಳ  ಆಡಳಿತ ಮಂಡಳಿ ಕಾರ್ಯಧ್ಯಕ್ಷರಾದ ಶ್ರೀ ಗುರುಬಸವ ಸುಳಿಭಾವಿ, ಹಾಗೂ ಪದನಿಮಿತ್ತ ಕಾರ್ಯದರ್ಶಿಗಳಾದ ಡಾ, ಎಸ್  ಎಂ ಗಾವ್ಕರ್,  ಬಿ. ವಿ.ವಿ. ಸಂಘದ ಆಡಳಿತಾಧಿಕಾರಿಗಳಾದ ಡಾ ವಿಜಯಕುಮಾರ ಎಸ್ ಕಟಗಿಹಳ್ಳಿ  ಮಠ, ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಎಸ್‌. ಆರ್ ಮೂಗನೂರು ಮಠ  ಮತ್ತು ಸಿಬ್ಬಂದಿ ವರ್ಗ ಹಾಗೂ  ಸಹೋದರ ಪದವಿ ಕಾಲೇಜುಗಳ ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಹಾಗೂ ತುಮಕೂರು ವಲಯದ  ಸಾಹಿತಿಗಳು ಮತ್ತು ಪತ್ರಕರ್ತರು, ಬಾಗಲಕೋಟೆ ವಲಯದ ಸಾಹಿತಿಗಳು ಮತ್ತು ಪತ್ರಕರ್ತರು ಅಭಿನಂದನೆ ಸಲ್ಲಿಸಿದ್ದಾರೆ.