ತಳ ಸಮುದಾಯಗಳಿಗೆ ನಿವೇಶನ ನೀಡಿ ಸಭಾ ಭವನ ನಿರ್ಮಾಣಕ್ಕೆ ಅನುಧಾನ
Support for the construction of assembly halls by providing land to the grassroots communities
ಶಿಗ್ಗಾವಿ 10 : ಹಡಪದ ಸಮಾಜ ಸೇರಿದಂತೆ ತಳ ಸಮುದಾಯಗಳಿಗೆ ಮುಂದಿನ ದಿನಗಳಲ್ಲಿ ನಿವೇಶನ ನೀಡಿ ಸಭಾ ಭವನ ನಿರ್ಮಾಣಕ್ಕೆ ಅನುಧಾನ ನೀಡಲಾಗುವುದು ಎಂದು ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಬರವಸೆ ನೀಡಿದರು.
ಪಟ್ಟಣದ ಅಂಬೇಡ್ಕರ್ ನಗರದ ಅಂಬೇಡ್ಕರ್ ಸಭಾಭವನದಲ್ಲಿ ಹಡಪದ ಸಮಾಜದ ವತಿಯಿಂದ ಹಮ್ಮಿಕೊಂಡ ವಲಯ ಮಟ್ಟದ ಸಮಾವೇಶ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ತಳ ಸಮುದಾಯದ ಏಳಿಗೆಗೆ ಪಣ ತೊಟ್ಟಿದ್ದೇನೆ, ಅವರ ಬೇಡಿಕೆಗಳನ್ನ ಈಡೇರಿಸಲಾಗುವುದು, ನಾನೂ ಸಹಿತ ಬಡ ಕುಟುಂಬದಲ್ಲಿ ಜನಿಸಿದ್ದು ಅವರ ಬೇಡಿಕೆಗಳ ಬಗ್ಗೆ ಗಮನಕ್ಕೆ ಇದೆ, ಸಣ್ಣವನಿದ್ದಾಗ ನಾನೂ ಸಹಿತ ಹಡಪದ ಸಮುದಾಯದ ಮನೆಯಲ್ಲಿ ಬೆಳೆದಿದ್ದೇನೆ, ಶ್ರಮಿಕ ವರ್ಗದ ಬಗ್ಗೆ ಖಾಳಜಿ ಇದ್ದು, ಕಾಯಕ ನಂಬಿ ಬದುಕುವ ಶ್ರಮಿಕ ಸಮಾಜಗಳ ಶ್ರೇಯೋಭಿವೃದ್ದಿ ನನ್ನ ಗುರಿಯಾಗಿದೆ ಎಂದರು.
ದಿವ್ಯ ಸಾನಿದ್ಯ ವಹಿಸಿ ಆಶೀರ್ವಚನ ನೀಡಿದ ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು, ಕಾಯಕ ನಿಷ್ಟೇಯ ಸಮಾಜ ಹಡಪದ ಸಮಾಜವಾಗಿದೆ, ನೊಂದವರ ದ್ವನಿಯಾಗಿದ್ದ ಶರಣ ಬಸವಣ್ಣನವರು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ಹಡಪದ ಅಪ್ಪಣ್ಣನವರನ್ನ ನೇಮಿಸಿಕೊಂಡಿದ್ದರು, ಜನಪ್ರತಿನಿಧಿಗಳು ವಿವಿಧ ಸಮುದಾಯಗಳ ಕೆಲಸಗಳನ್ನ ಮಾಡಿ ಕೊಡುವ ಶಾಸಕರಿದ್ದಾರೆ, ಸಮುದಾಯಗಳು ಕೆಲಸಗಳನ್ನ ಕೇಳುವ ಹಕ್ಕು ಇದೆ, ಪಠಾಣ್ ಅವರು ಸಣ್ಣ ಸಣ್ಣ ಸಮುದಾಯಗಳ ಬಗ್ಗೆ ಖಾಳಜಿಯುಳ್ಳವರಾಗಿದ್ದಾರೆ ಸಮುದಾಯಗಳ ಮೂಲಬೂತ ಸೌಲಭ್ಯಗಳನ್ನ ಮಾಡಿಕೊಡುತ್ತಾರೆ ಎಂದರು.
ಹಡಪದ ಸಮಾಜದ ರಾಜ್ಯ ಮಾದ್ಯಮ ಪ್ರತಿನಿಧಿ ಮಲ್ಲಿಕಾರ್ಜುನ ಹಡಪದ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ತಾಲೂಕಾ ಹಡಪದ ಸಮಾಜದ ವತಿಯಿಂದ ಶಾಸಕ ಯಾಸೀರ್ ಖಾನ್ ಪಠಾಣ್ ಅವರನ್ನ ಸನ್ಮಾನಿಸಲಾಯಿತು. ಶಿಗ್ಗಾವಿ ತಾಲೂಕಾ ನೂತನ ಹಡಪದ ಸಮಾಜದ ಅದ್ಯಕ್ಷ ಮಂಜುನಾಥ ಕ್ಷೌರದ ಅದ್ಯಕ್ಷತೆ ವಹಿಸಿದ್ದರು.
ತಾಲೂಕ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಶೇಕಪ್ಪ ಮನಕಟ್ಟಿ, ತಾಲೂಕಾ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಗುಡ್ಡಪ್ಪ ಜಲದಿ, ಗುತ್ತಿಗೆದಾರ ಮಂಜುನಾಥ ತಿಮ್ಮಾಪೂರ, ಗೌಸಖಾನ್ ಮುನಶಿ, ಶಂಬು ನೆರ್ತಿ, ಅಶೋಕ ಕಾಳೆ, ಸಮಾಜದ ಗೌರವಾದ್ಯಕ್ಷ ಗುರುಬಸಪ್ಪ ಹಡಪದ, ಕಾರ್ಯಾದ್ಯಕ್ಷ ಕೋಟೆಪ್ಪ ಹಡಪದ, ಸಮಾಜದ ಮಾಜಿ ಉಪಾದ್ಯಕ್ಷ ಮುತ್ತಪ್ಪ ಕ್ಷೌರದ, ಹಡಪದ ಅಪ್ಪಣ್ಣ ಕ್ರೆಡಿಟ್ ಕೋ ಅಪ್ ಸೊಸೈಟಿ ಅಧ್ಯಕ್ಷ ಮಹಾಲಿಂಗಪ್ಪ ಹಡಪದ, ಶಿವಕುಮಾರ ಮಡ್ಲಿಕರ, ಶಿವರಾಜ ಕ್ಷೌರದ, ಈರಣ್ಣ ಹಡಪದ, ಈರ್ಪ ಹಡಪದ, ಮಂಜುನಾಥ ಓಣಿಮನಿ, ರುದ್ರ್ಪ ಹಡಪದ ಸೇರಿದಂತೆ ಹಡಪದ ಸಮಾಜದ ಮುಖಂಡರು, ತಾಲೂಕಿನ ಹಡಪದ ಸಮಾಜದ ವಲಯಮಟ್ಟದ ಅದ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು, ಮಾಜಿ ಅದ್ಯಕ್ಷ ಬಡವರಾಜ ಹಡಪದ ಸ್ವಾಗತಿಸಿದರು, ಖಜಾಂಚಿ ಅಶೋಕ ಹಂಪಣ್ಣವರ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 