ಎಸ್.ಬಿ.ನಾಯ್ಕಗೆ ಡಾ.ದ.ರಾ.ಬೇಂದ್ರೆ ಸದ್ಭಾವನಾ ಸೇವಾರತ್ನ ಪ್ರಶಸ್ತಿ
ಅಥಣಿ 17: ತಾಲೂಕಿನ ಅವರಕೋಡ ಗ್ರಾಮದವರು ಮತ್ತು ಕುಡಚಿ ಪೋಲಿಸ್ ಠಾಣೆಯಲ್ಲಿ ಪೊಲೀಸ್ ಕಾನ್ಸಟೇಬಲ್ ಆಗಿರುವ ಎಸ್.ಬಿ.ನಾಯ್ಕ ಇವರಿಗೆ ಹಗರಿಬೊಮ್ಮನಹಳ್ಳಿಯ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗಕಲಾವಿದರ ಸಾಧಕರ ಮಾತಾ ಪ್ರಕಾಶನದಿಂದ ಧಾರವಾಡ ರಂಗಾಯಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ದ.ರಾ.ಬೇಂದ್ರೆ ಸದ್ಭಾವನಾ ಸೇವಾರತ್ನ ಪ್ರಶಸ್ತಿ ಲಭಿಸಿದೆ. ಎಸ್.ಬಿ.ನಾಯ್ಕ ಅವರ ಕನ್ನಡ ನಾಡು ನುಡಿಗೆ ಸಲ್ಲಿಸಿದ ಅಪಾರ ಸೇವೆ ಪರಿಗಣಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಸಂಘಟಕ ಡಾ.ನಾಗರಾಜ ತಂಬ್ರಹಳ್ಳಿ ತಿಳಿಸಿದ್ದಾರೆ.