ಮೂಡಲಗಿ :ಗೋರಕ್ಷಕ ಶಿವು ಉಪ್ಪಾರ ಅನುಮಾನಾಸ್ಪದ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸಿ ವಿವಿಧ ಹಿಂದೂಪರ ಸಂಘಟನೆ ಕಾರ್ಯಕರ್ತರ ಪ್ರತಿಭಟನೆ

ಮೂಡಲಗಿ 04: ಹಿಂದೂ ಸಂಘಟನೆಯ ಕಾರ್ಯಕರ್ತ ಹಾಗೂ ಗೋರಕ್ಷಕ ಶಿವು ಉಪ್ಪಾರ ಅವರ ಅನುಮಾನಾಸ್ಪದ ಸಾವನ್ನು ಖಂಡಿಸಿ ಮತ್ತು ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ವಿವಿಧ ಹಿಂದೂಪರ ಸಂಘಟನೆ ಹಾಗೂ ಭಗೀರಥ ಉಪ್ಪಾರ ಸಮಾಜ ಸೇವಾ ಸಂಘದ ಕಾರ್ಯಕರ್ತರು ಮಂಗಳವಾರದಂದು ಪ್ರತಿಭಟನೆ ನಡೆಸಿದರು.

    ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಸೇರಿದ ವಿವಿಧ ಹಿಂದೂಪರ ಸಂಘಟನೆಯ ನೂರಾರು ಕಾರ್ಯಕರ್ತರು  ಮಾನವ ಸರಪಳಿ ನಿಮರ್ಿಸಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿ ತಾಲೂಕು ದಂಡಧಿಕಾರಿ ಮುರಳಿಧರ ತಳ್ಳಿಕೇರಿ ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. 

ಮನವಿ ಸಲ್ಲಿಸಿ ಭಗೀರಥ ಉಪ್ಪಾರ ಸಮಾಜ ಸೇವ ಸಂಘದ ಅಧ್ಯಕ್ಷ ಶಿವಬಸು ಹಂದಿಗುಂದ ಮಾತನಾಡಿ, ರಾಜ್ಯದಲ್ಲಿ ವ್ಯಾಪಕವಾಗಿ ಸಂವಿಧಾನದ ಪರಿಧಿಯನ್ನು ಮೀರಿ ಸಮಾಜದ ಸ್ವಾಸ್ಥ್ಯ  ಕದಡುವಂತಹ ಕೃತ್ಯಗಳು ನಡೆಯುತ್ತಿವೆ. ಸಂವಿಧಾನದ 48ನೇ ಕಲಂನಲ್ಲಿ ನಮೂದಿಸಿರುವ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಗಾಳಿಗೆ ತೂರಿ ಕೆಲ ಮತಾಂಧರು ಹಿಂದು ಧರ್ಮದ ಧಾಮರ್ಿಕ ನಂಬಿಕೆಗಳಿಗೆ ದ್ರೋಹ ಮಾಡುತ್ತಿದ್ದಾರೆ ಇಂತವರ ಮೇಲೆ ಸಕರ್ಾರ ಸೂಕ್ತ ಕ್ರಮ ಜರುಗಿಸಬೇಕು ಎಂದರು.

 ಹಿಂದೂ ಸಂಘಟನೆಯ ಕಾರ್ಯಕರ್ತ ಸುಧೀರ ನಾಯರ್ ಮಾತನಾಡಿ, ಹಿಂದೂ ಕಾರ್ಯಕರ್ತರ ಕೊಲೆ ಹಾಗೂ ಮಾರಣಂತಿಕ ಹಲ್ಲೆ  ಕೇವಲ ಕರಾವಳಿ ಭಾಗದಲ್ಲಿ ನಡೆಯುತ್ತಿತ್ತು ಆದರೆ ಈಗ ನಮ್ಮ ಉತ್ತರ ಕನರ್ಾಟಕ ಭಾಗದಲ್ಲಿಯೂ ಇಂತಹ ಹೇಯ ಕೃತ್ಯ ನಡೆಯುತ್ತಿರುವುದು ಖಂಡನೀಯ. ಹೀಗೆ ಮುಂದುವರಿದಲ್ಲಿ ಸಮಾಜದ ಶಾಂತಿ ಕೆಡುವುದರಲ್ಲಿ ಎರಡು ಮಾತಿಲ್ಲ. ಗೋ ರಕ್ಷಕ ಶಿವು ಉಪ್ಪಾರ ಸಾವು ಸಂಶಯಾಸ್ಪದವಾಗಿದ್ದು ಈ ಸಾವಿನ ಹಿಂದೆ ಕಾಣದ ಕೈಗಳ ಕೈವಾಡ ಎದ್ದು ಕಾಣುತ್ತಿದ್ದು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ರಾಜ್ಯದಲ್ಲಿ ಈ ಹಿಂದೆಯೂ ಪರೇಶ ಮೇಸ್ತ, ದೀಪಕ ರಾವ್ರಂತಹ ಅನೇಕ ಹಿಂದು ಯುವಕರ ಕೊಲೆಯ ಪ್ರಕರಣಗಳು ಮುಚ್ಚಿ ಹೋಗಿದ್ದು ಈ ಪ್ರಕರಣವನ್ನು  ಸಿಬಿಐ ಅಥವಾ ಎನ್ಆಯ್ಎಗೆ ವಹಿಸಬೇಕು ಎಂದು ಆಗ್ರಹಿಸಿದರು.

 ಗುರುನಾಥ ಗಂಗನ್ನವರ ಮಾತನಾಡಿ, ರಾಜ್ಯದಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು.  ಶಿವು ಉಪ್ಪಾರ ಸಾವಿನ ಹಿಂದೆ ಬೈಲಹೊಂಗಲ ಮತ್ತು ಕಿತ್ತೂರಿನ ಪ್ರಭಲ ವ್ಯಕ್ತಿಗಳ ಕೈವಾಡವಿರುವ ಹಾಗೂ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಮೌನವಹಿಸಿರುವುದು ಹಲವೂ ಸಂಶಯಕ್ಕೆ ಎಡೆಮಾಡಿದೆ. ಈ ಯುವಕನ ಕೊಲೆಯ ಸಮಗ್ರ ತನಿಖೆ ನಡೆಸಿ ದುಷ್ಕಮರ್ಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದರು.

ಮನವಿ ಸ್ವೀಕರಿಸಿದ ಮೂಡಲಗಿ ತಾಲೂಕು ದಂಡಧಿಕಾರಿ ಮುರಳಿಧರ ತಳ್ಳಿಕೇರಿ ಮಾತನಾಡಿ, ತಾವುಗಳೂ ನೀಡಿರುವ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಕಳಿಸಿಕೊಡಲಾಗುವುದು ಎಂದರು.

ಜಯ ಕನರ್ಾಟಕ ತಾಲೂಕಾಧ್ಯಕ್ಷ ಶಿವರೆಡ್ಡಿ ಹುಚರೆಡ್ಡಿ, ಸಿದ್ದಣ್ಣ ದುರದುಂಡಿ, ಚಂದ್ರಶೇಖರ ತೇಲಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಶ್ರೀರಾಮ ಸೇನೆಯ ಅಧ್ಯಕ್ಷ ಮಂಜು ಚಿನ್ನಕಟ್ಟಿ, ಯ.ಯ. ಸುಲ್ತಾನಪೂರ, ಹನುಮಂತ ಸತರಡ್ಡಿ, ಲಕ್ಷ್ಮಣ ಅಡಿಹುಡಿ, ಚೇತನ ನಿಶಾನಿಮಠ, ಜಗದೀಶ ಗಾಣಿಗೇರ, ವಿಶಾಲ ಸಿ.ಕೆ. ಸುಭಾಸ ಗೊಡ್ಯಾಗೋಳ, ಯಲ್ಲಾಲಿಂಗ ವಾಳದ, ಸಿದ್ದು ಹಂದಿಗುಂದ, ಈಶ್ವರ ಮಗದುಮ್, ನವೀನ ನಿಶಾನಿಮಠ, ಬಸವರಾಜ ಹುಚ್ಚನ್ನವರ, ಶಾನೂರ ಉಪ್ಪಾರ, ಮಹೇಶ ಮಲ್ಲಗೌಡರ, ಈಶ್ವರ ಢವಳೇಶ್ವರ, ರಾಘವೇಂದ್ರ ಕಂಕಣವಾಡಿ, ವಿನೋದ ಎಮ್ಮಿ, ಭೀಮಶಿ ಸೋರಗಾಂವಿ, ಚೇತನ ಹೊಸಕೋಟಿ, ಮಲ್ಲು ಯಾದವಾಡ, ಸಿದ್ಲಿಂಗ ಯರಗಟ್ಟಿ, ಶಿವೂ ಫಿರೋಜಿ,ಸಂತೋಷ ಪತ್ತಾರ, ಶಿವೂ ಗಾಡವಿ, ಕುಮಾರ ಗಿರಡ್ಡಿ ಹಾಗೂ ವಿವಿಧ ಹಿಂದೂಪರ ಸಂಘಟನೆಯ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.