ಮತ್ತೊಂದು ಜೀವ ಉಳಿಸಲು ಸ್ವಯಂ ರಕ್ತದಾನ ಮಾಡಿ: ಶ್ರೀಗಳು
ಸಿಂದಗಿ 24: ರಕ್ತ ಕೊರತೆಯಿಂದ ಹಲವಾರು ರೋಗಿಗಳು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದು ರಕ್ತದಾನದಿಂದ ಮನುಷ್ಯನಿಗೆ ಮರು ಜೀವ ನೀಡಿದಂತಾಗುತ್ತದೆ. ದೇಶದಲ್ಲಿ ಪ್ರತಿವರ್ಷ 41ದಶ ಲಕ್ಷ ಯೂನಿಟ್ ರಕ್ತದ ಕೊರತೆ ಉಂಟಾಗುತ್ತದೆ. ಸಮಯಕ್ಕೆ ಸರಿಯಾಗಿ ರಕ್ತ ದೊರೆಯದೆ ವಿವಿಧ ಕಾಯಿಲೆಗಳಿಂದ ಬಳಲುವ ರೋಗಿಗಳು, ಅಪಘಾತದ ಗಾಯಾಳುಗಳು ಮೃತಪಟ್ಟಿದ್ದಾರೆ. ಅಮೂಲ್ಯವಾದ ಜೀವ ಉಳಿಸಲು ಸ್ವಯಂ ಪ್ರೇರಣೆಯಿಂದ ಎಲ್ಲರೂ ರಕ್ತದಾನ ಮಾಡುವುದು ಅತೀ ಅವಶ್ಯಕ ಎಂದು ರಾಂಪೂರ ಪಿಎ ಗ್ರಾಮದ ಆರೂಢ ಮಠದ ಸಮರ್ಥ ಸದ್ಗುರು ಆರೂಢ ನಿತ್ಯಾನಂದ ಶಿವಯೋಗಿಗಳು ಹೇಳಿದರು.
ತಾಲೂಕಿನ ರಾಂಪೂರ ಪಿಎ ಗ್ರಾಮದ ಸಮರ್ಥ ಸದ್ಗುರು ಆರೂಢ ಸಂಗನಬಸವೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ನಿಮಿತ್ಯ ಹಮ್ಮಿಕೊಂಡ ನಿಜಗುಣ ಶಿವಯೋಗಿಗಳ ವಿರಚಿತ ಕೈವಲ್ಯ ಪದ್ಧತಿ ಪ್ರವಚನ ಕಾರ್ಯಕ್ರಮದಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ಜರುಗಿದ ರಕ್ತದಾನ ಶಿಬಿರವನ್ನು ಉದ್ದೇಶಿಸಿ ಮಾತನಾಡಿ, ರಕ್ತದಾನದಿಂದ ರಕ್ತದೊತ್ತಡ, ಮಧುಮೇಹದಂತಹ ರೋಗಗಳು ನಿಯಂತ್ರಣಕ್ಕೆ ಬರುವುದರ ಜೊತೆಗೆ ಆತ್ಮತೃಪ್ತಿ ದೊರೆಯುತ್ತದೆ ಎಂದರು.
ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಹರಿ ಕುಲಕರ್ಣಿ ಮಾತನಾಡಿದರು.
ಸ್ವಯಂ ಪ್ರೇರಿತರಾಗಿ 35ಕ್ಕೂ ಅಧಿಕ ಜನರು ರಕ್ತದಾನ ಮಾಡಿದರು. ರಕ್ತದಾನ ಶಿಬಿರದಲ್ಲಿ ಮಹಾಂತ ಮಹಾರಾಜರು, ಶಂಕರಾನಂದ ಮಹಾರಾಜರು, ಡಾ.ಮಹಾಂತೇಶ ಹಿರೇಮಠ, ರಾಜು ನರಗೋದಿ, ಬಿ.ಕೆ.ಮೈಸೂರ, ಡಾ.ವಿನಾಯಕ ಕಟ್ಟಿ, ಅರುಣ ಕಾಂಬ್ಳೆ, ನಬಿಸಾಬ, ಪ್ರಿಯಾಂಕ, ಜ್ಯೋತಿ, ಪ್ರಕಾಶ ಕವಲಗಿ, ಮಹೇಶ, ಯಲ್ಲಾಲಿಂಗ ಕಟಕದೊಂಡ, ಭಗವಂತ ಮಹೇಂದ್ರಕರ, ದಾನಮ್ಮ ಮಠ, ಫಿರಜಾನ್ ಮುಜಾವರ, ಮಹಾಲಕ್ಷ್ಮಿ ನಾಯ್ಕೋಡಿ, ನಾಗರತ್ನ ಪರೀಟ್, ಭೋಜರಾಜ ದೇಸಾಯಿ, ಬಸಮ್ಮ ಅಂಗಡಿ, ಸುನಂದಾ ಅಂಗಡಿ, ಶಕುಂತಲಾ ದೇಸಾಯಿ, ರುಕ್ಮಿಣಿ, ಅರ್ಿತಾ ಕುಳಗೇರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.