ಲೋಕದರ್ಶನ ವರದಿ
ಶಿರಹಟ್ಟಿ 03: ಪ್ರಸ್ತುತ ದಿನಮಾನದಲ್ಲಿ ಸಾಕಷ್ಟು ತಾಂತ್ರಿಕತೆಯಲ್ಲಿ ಬೆಳವಣಿಗೆಯಾಗಿದ್ದರೂ ಸಹಿತ ಧನಾತ್ಮಕವಾಗಿ ಬಳಕೆಯಾಗದೆ ಇರುವುದರಿಂದ ನೆಮ್ಮದಿಯನ್ನು ಹಾಳುಮಾಡಿಕೊಳ್ಳುತ್ತಿದ್ದೇವೆ. ಅದಕ್ಕಾಗಿ ಮೌಲ್ಯಯುತ ಜೀವನಕ್ಕಾಗಿ ಶರರ ತತ್ವಗಳನ್ನು ಅಳವಡಿಸಿಕೊಳ್ಳಿ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸಪ್ಪ ಕಂಠಿ ಹೇಳಿದರು.
ಅವರು ಪಟ್ಟಣದ ಸಿಸಿಎನ್ ಸರಕಾರಿ ಪ್ರೌಢ ಶಾಲೆಯಲ್ಲಿ ಶರಣ ಸಾಹಿತ್ಯ ಪರಿಷತ್ ತಾಲೂಕ ಘಟಕದ ವತಿಯಿಂದ ಶ್ರಾವಣ ಶರಣ ಸಂದೇಶ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವಕರು ನಾಳಿನ ನಾಡಿನ ಜವಾಬ್ದಾರಿಯುತ ಪ್ರಜೆಯಾಗುವದರಿಂದ ಅವರಿಗೆ ಮೌಲ್ಯಗಳನ್ನು ತಿಳಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮೌಲ್ಯಯುತವಾದ ಜೀವನ ನಡೆಸುವ ಸನ್ಮಾರ್ಗಗಳನ್ನು ತಿಳಿದುಕೊಳ್ಳಬೇಕಾದರೆ ಶರಣರ ಜೀವನ ಚರಿತೆ ಮತ್ತುಸಂದೇಶಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. ಆದ್ದರಿಂದ ಮಕ್ಕಳು ದಿನನಿತ್ಯ ಶರಣರ ವಚನಗಳನ್ನು ಹೇಳುವ ಪರಿಪಾಠವನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.
ಶ್ರಾವಣ ಶರಣ ಸಂದೇಶ ಕಾರ್ಯಕ್ರಮದಲ್ಲಿ ವಚನ ದಿನ ಜರುಗಿಸುವುದಕ್ಕೆ ಮಲ್ಲಪ್ಪ ಬಸಪ್ಪ ದೇವಗಿರಿ ಇವರ ದತ್ತಿ ನಿಧಿ ದಾನಿಗಳಾದ ಹೆಚ್.ಎಮ್.ದೇವಗೇರಿ ಮಾತನಾಡಿ, ಶ್ರಾವಣ ಮಾಸದಲ್ಲಿ ಪ್ರತಿ ಸೋಮವಾರ ಮತ್ತು ಗುರುವಾರದಂದು ಪಟ್ಟಣದ ಮನೆಮನೆಯಲ್ಲಿ ಕಾರ್ಯಕ್ರಮ ಜರುಗಿಸ ಸಮಾರೋಪ ಸಮಾರಂಭ ಶಾಲಾ ಮಕ್ಕಳಿಗೆ ಮೀಸಲಿಡಲಾಗಿದ್ದು, ಮಕ್ಕಳು ಶರಣ ಸಂದೇಶಗಳನ್ನು ಆಲಿಸಿ ಜಾಗೃತರನ್ನಾಗಿಸುವ ಮೂಲ ಉದ್ದೇಶವನ್ನು ಹೊಂದಿದೆ ಎಂದು ಹೇಳಿದರು.
ಕಸಾಪ ತಾಲೂಕ ಅಧ್ಯಕ್ಷ ಫ್ರೋ.ಫಕ್ಕಿರೇಶ ಅಕ್ಕಿ ಮಾತನಾಡಿ, ಶರಣ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕ ಮಟ್ಟದ ವಚನ ಗಾಯನ ಸ್ಪಧರ್ೆಯನ್ನು ಏರ್ಪಡಿಸಲಾಗಿದೆ. ಈ ಸ್ಪಧೆರ್ೆಯಲ್ಲಿ ಪ್ರಥಮ ರಕ್ಷಿತಾ ಹೂಗಾರ, ದ್ವಿತೀಯ ಯಲ್ಲಮ್ಮ ಇಟಗಿ, ತೃತೀಯ ಸ್ಥಾನ ಚಂದನಾ ಮೂರಶಿಳ್ಳಿ ಮತ್ತು ಚಿನ್ನಪ್ಪ ಅಂಗಡಿ, ಆಯ್ಕೆಯಾಗಿದ್ದಾರೆ. ಇಂತಹ ಸ್ಪದರ್ೆಗಳನ್ನು ಏರ್ಪಡಿಸುವದರಿಂದ ಮಕ್ಕಳಲ್ಲಿ ಸ್ಪದರ್ಾ ಮನೋಭಾವ ಏರ್ಪಟ್ಟು, ವಚನಗಳ ಅರ್ಥ ತಿಳಿದುಕೊಳ್ಳಲಾಗುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೆ.ಎ.ಬಳಿಗೇರ ಉಪನ್ಯಾಸ ಮಾಡಿದರು. ವಚನ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಡಾ. ರಾಜೇಂದ್ರ ಗಡಾದ ಮಾತನಾಡಿದರು.ಶಾಲಾ ಮಯೋಪಾದ್ಯಾಯ ವಿ.ಎಸ್.ಚಟವಾದಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಮ್.ಕೆ.ಲಮಾಣಿ, ಬಸವರಾಜ ಭೋರಶೆಟ್ಟರ, ಶಿವಪ್ಪ ಬೋಳಶೆಟ್ಟಿ, ಜೆ.ಆರ್.ಕದಂ, ಸಂಗಪ್ಪ ಪೂಜಾರ, ಹಡಪದ, ಹಾಲಪ್ಪ ಬಿಡನಾಳ, ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.