ಮರಳು ದಂಧೆ ನಿಯಂತ್ರಣ ಹೊಣೆ ಗ್ರಾಮಲೆಕ್ಕಾಧಿಕಾರಿಗಳಿಗೆ ಬೇಡ

ಲೋಕದರ್ಶನ ವರದಿ

ಹೂವಿನಹಡಗಲಿ 27:ತಾಲೂಕಿನ ತುಂಗಭದ್ರಾ ನದಿ ತೀರದದಲ್ಲಿ ಮರಳು ದಂಧೆ ಮಾಫಿಯಾ ಸ್ವರೂಪ ಪಡೆದಿದೆ.ಮರಳು ಅಕ್ರಮ ನಿಯಂತ್ರಣದ ಹೊಣೆಗಾರಿಕೆಯಿಂದ ಗ್ರಾಮ ಲೆಕ್ಕಾಧಿಕಾರಿಗಳನ್ನು ಮುಕ್ತಿಗೊಳಿಸಬೇಕು ಎಂದು ಗ್ರಾಮಲೆಕ್ಕಾಧಿಕಾರಿಗಳ ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.

ಇಲ್ಲಿನ ತಹಶೀಲ್ದಾರ ಕೆ.ರಾಘವೇಂದ್ರರಾವ್ ಅವರ ಮೂಲಕ ಸಕರ್ಾರಕ್ಕೆ ಮನವಿ ಸಲ್ಲಿಸಿದರು. ಈಚಗೆ ಅಕ್ರಮ ಮರಳು ತಡೆಯಲು ಹೋದ ಮಾನ್ವಿ ತಾಲೂಕಿನ ಚೀಕಲಪವರ್ಿಯ ಗ್ರಾಮಲೆಕ್ಕಾಧಿಕಾರಿ ಸಾಹೇಬ್ ಪಾಟೀಲ ಮೇಲೆ ಲಾರಿ ಹರಿಸಿ ಸಾಯಿಸಲಾಗಿದೆ.ಆರೋಪಿಗಳನ್ನು ಕೂಡಲೇ ಕಠಿಣ ಶಿಕ್ಷೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ತಾಲೂಕಿನ ಹರವಿಯಿಂದ ಪೂರ್ವ ಕಾಲುವೆಯ 80 ಕಿ.ಮೀ ವ್ಯಾಪ್ತಿಯ ನದಿಪಾತ್ರ ಇದೆ. ಎಡದಂಡೆಯ ಹಾವೇರಿ, ಗದಗ ಭಾಗದ ದಂಧೆಕೋರರು ಬಿಹಾರ, ಉತ್ತರ ಪ್ರದೇಶ ಕಾಮರ್ಿಕರನ್ನು ಬಳಸಿಕೊಂಡು ಮರಳು ಸಾಗಣೆ ದಂಧೆ ಮಾಡುತ್ತಿರುವುದರಿಂದ ತಾಲೂಕಿನಲ್ಲಿ ಭಯದ ವಾತಾವರಣವಿದೆ. ಅಕ್ರಮ ದಂಧೆ ತಡೆಯಲು ಹೋದ ಸಿಬ್ಬಂದಿಯ ಮೇಲೆ ಈ ಹಿಂದೆ ಸಾಕಷ್ಟು ಬಾರಿ ಹಲ್ಲೆ ಮಾಡಿದ್ದಾರೆ. ಕಂದಾಯ ಇಲಾಖೆ ಕೆಲಸಗಳ ಜತೆಗೆ ಪಡೆತರ ಚೀಟಿ, ಪರಿಶೀಲನೆ, ಕೃಷಿ, ಗಣತಿ, ಬೆಳೆ ಸಮೀಕ್ಷೆ, ಡಾಟಾ ಎಂಟ್ರಿ, ನೀರಾವರಿ ಗಣತಿ, ಆಮ್ ಆದ್ಮಿ ಯೋಜನೆ, ಪ್ರಕೃತಿ ವಿಕೋಪ, ಮುಜರಾಯಿ ದೇವಸ್ಥಾನಗಳ ಹುಂಡೆ ಎಣಿಕೆ ಇವೆಲ್ಲವುಗಳ ಕಾಯರ್ಾಭಾರದ ಜತೆಗೆ ಅಕ್ರಮ ಮರಳು ಸಾಗಣೆ ಜವಾಬ್ದಾರಿಯನ್ನು ನಮಗೆ ವಹಿಸಲಾಗಿದೆ. ಈ ರೀತಿ ಒತ್ತಡದ ಕೆಲಸಗಳಿಂದ ಗ್ರಾಮಲೆಕ್ಕಾಧಿಕಾರಿಗೆ ಕೆಲಸದ ಕಡಿಮೆಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಗ್ರಾಮಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ವಿಜಯಕುಮಾರ, ಸದಸ್ಯರಾದ ವೀರೇಶ, ನಾಗೇಂದ್ರನಾಯ್ಕ, ಮನೋಹರ, ಎಂ.ಬಸವರಾಜ, ಮಂಜುನಾಥ, ಬಿ.ಜಗದೀಶ, ಮಲ್ಲೇಶನಾಯ್ಕ, ಅಬ್ದುಲ್ ಸಲೀಂ, ಮಮ್ಮೀನ್, ನಾಗರತ್ನಮ್ಮ ಇದ್ದರು.