ರಾಯಬಾಗ 14: ರಾಮ ಮಂದಿರದ ನಿಮರ್ಾಣಕ್ಕಾಗಿ ಹಿಂದೂಗಳ ನಿರಂತರ ಮೂವತ್ತು ವರ್ಷಗಳ ತ್ಯಾಗ ಬಲಿದಾನ ಹಾಗೂ ಹೋರಾಟದ ಫಲವಾಗಿ ಇಂದು ಮೋದಿಯವರು ದೇಶದ ಪ್ರಧಾನಿಯಾಗಿರುವದನ್ನು ಮರೆಯದೇ ರಾಮ ಮಂದಿರದ ನಿಮರ್ಾಣದ ಕನಸು ಕಾಣುತ್ತಿರುವ ಯುವಕರ ನಂಬಿಕೆಯನ್ನು ಹುಸಿಗೊಳಿಸಬೇಡಿ ಎಂದು ಶ್ರೀರಾಮ ಸೇನಾ ರಾಷ್ಟ್ರಾಧ್ಯಕ್ಷ ಪ್ರಮೋದ ಮುತಾಲಿಕ ಪ್ರಧಾನಿ ಮೋದಿಯವರಿಗೆ ಎಚ್ಚರಿಕೆ ನೀಡಿದರು.
ರವಿವಾರ ಸಾಯಂಕಾಲ ಪಟ್ಟಣದ ಮಹಾವೀರ ಶಾಲೆಯ ಆವರಣದಲ್ಲಿ ಏರ್ಪಡಿಸಿದ ಹಿಂದೂ ರಾಷ್ಟ್ರ ಜನಜಾಗೃತಾ ಸಭೆಯಲ್ಲಿ ಹಿಂದೂಗಳನ್ನುದ್ದೇಶಿಸಿ ಮಾತನಾಡಿ, ಸನಾತನ ಸಂಸ್ಥೆಯವರ ಹೋರಾಟದಿಂದ ಕೊಲ್ಹಾಪೂರದ ಮಹಾಲಕ್ಷ್ಮೀ ಗುಡಿಯ ಹತ್ತಿರವಿದ್ದ ತೀರ್ಥಕೊಂಡವನ್ನು ದೇವಸ್ಥಾನ ಕಮೀಟಿಯವರು ನಾಶಪಡಿಸಿ ಅಲ್ಲಿ ಶೌಚಾಲಯ ಕಟ್ಟಿಸಿದ್ದರು. ಅದನ್ನು ಪ್ರತಿಭಟಿಸಿ ಶೌಚಾಲಯವನ್ನು ಹೊರಗಡೆ ಮಾಡಿಸಲಾಯಿತು. ಅದರಂತೆ ಫಂಡರಪುರದ ವಿಠ್ಠಲ ದೇವಸ್ಥಾನದ 200 ಎಕರೆ ಜಮೀನನ್ನು ಬೇರೆಯವರು ಕಬಳಸಿದ್ದರು, ಹೋರಾಟ ಮಾಡಿಯೇ ಪುನಃ ಜಮೀನನ್ನು ದೇವಸ್ಥಾನಕ್ಕೆ ಒಪ್ಪಿಸಲಾಯಿತು. ಹೀಗಾಗಿ ಹಿಂದೂ ಏಕತೆಗಾಗಿ ಹೋರಾಟ ಮಾಡಬೇಕಾದುದು ಅನಿವಾರ್ಯವಾಗಿದೆ. ಪ್ರಪಂಚದಲ್ಲಿ ಅನ್ಯಧಮರ್ಿಯರಿಗೆ ಅವರದೇ ಆದ ಪ್ರತ್ಯೇಕ ರಾಷ್ಟ್ರವಿರುವಾಗ ಬಹುಸಂಖ್ಯಾತ ಹಿಂದೂಗಳಿಗೆ ನಮ್ಮದೇ ಆದ ಒಂದೂ ರಾಷ್ಟ್ರವಿಲ್ಲ. ಹಾಗಾಗಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಣೆ ಮಾಡಬೇಕೆಂದರು.
ರಾಮಾಯಣದಂತಹ ಮಹಾ ಕಾವ್ಯದ ರಚನೆಕಾರ ಮಹಷರ್ಿ ವಾಲ್ಮೀಕಿ ಹಾಗೂ ರಾಮಜನ್ಮ ಭೂಮಿಯಂತಹ ದಾಖಲೆಗಳನ್ನು ತಿರುಚ ಹೊರಟಿರುವ ದುರುಳರಿಗೆ ಹಿಂದೂಗಳು ಪಾಠ ಕಲಿಸಬೇಕಿದೆ. ವಾಲ್ಮೀಕಿ ನಾಯಕರಾದ ಮಾಜಿ ಸಚಿವ ರಮೇಶ ಜಾರಕಿಹೊಳಿ, ಶಾಸಕ ಶ್ರೀರಾಮುಲು ಮಹಷರ್ಿ ವಾಲ್ಮೀಕಿಗಾದ ಅವಮಾನವನ್ನು ತೀವ್ರವಾಗಿ ಪ್ರತಿಭಟಿಸಲು ಮುಂದಾಗಬೇಕೆಂದು ಒತ್ತಿ ಹೇಳಿದರು.
ಸಭೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಗುರುಪ್ರಸಾದ ಗೌಡ, ವಿದುಲಾ ಹಲದಿಪುರ ಮಾತನಾಡಿ, ಸನಾತನ ಸಂಸ್ಥೆಯು ಕಳೆದ 25 ವರ್ಷದಿಂದ ಹಿಂದೂ ವಿರೋಧಿಯಂತಹ ಅನೇಕ ಕಹಿ ಅನುಭವಗಳನ್ನು ಪ್ರತ್ಯಕ್ಷವಾಗಿ ಅನುಭವಿಸುತ್ತಿದೆ ಸನಾತನ ಸಂಸ್ಥೆಯು ವಾಸ್ತವದಲ್ಲಿ ಅಧ್ಯಾತ್ಮದ ಪ್ರಚಾರ ಹಾಗೂ ಹಿಂದು ಸಮಾಜಕ್ಕೆ ಧರ್ಮಶಿಕ್ಷಣವನ್ನು ನೀಡುವ ಉದ್ದೇಶದಿಂದ ಸ್ಥಾಪನೆ ಗೊಂಡಿದೆ ಆದರೆ ಇತ್ತಿಚೆಗೆ "ಸನಾತನ" ಎಂಬ ಶಬ್ದವನ್ನು ಭಯೋತ್ಪಾದನೆಯೊಂದಿಗೆ ಸೇರಿಸಲಾಗುತ್ತಿರುವುದು ಖೇದಕರವಾಗಿದೆ ಸಮಾಜಕ್ಕೆ ಈ ಆರೋಪದ ಹಿಂದಿನ ಸತ್ಯ ಹಾಗೂ ಸನಾತನದ ವಿರೋದಕರ ಉದ್ದೇಶವನ್ನು ತಮಗೆಲ್ಲ ತಿಳಿಸುವುದು ನಮ್ಮ ಕರ್ತ್ಯವ್ಯವೇ ಆಗಿದೆ ಹಾಗೂ ರಾಷ್ಟ ಮತ್ತು ಧರ್ಮದ ಮೇಲಿನ ಸಂಕಟವೂ ಬೇಗನೆ ದೂರವಾಗಿ ಬೇಗನೆ ಭಾರತವು ಹಿಂದೂ ರಾಷ್ಟ್ರವಾಗಲಿ ಎಂದು ಹಾರೈಸುತ್ತೇನೆಂದು ಸನಾತನ ಸಂಸ್ಥೆಯ ಹೇಳಿದರು.
ಕಾರ್ಯಕ್ರಮದಲ್ಲಿ ಉಜ್ವಲಾ ಗಾವಡೆ, ಜಯದೀಪ್ ದೇಸಾಯಿ, ಸಿದ್ದು ದೇಸಾಯಿ, ರಾಖಿ ಬೆಳಗಾಂವಕರ್, ಗಜಾನನ ಲೋಲ್ಸೂರೆ, ಲತಾ ಬಡಿಗೆಕರ್ ಹಾಗೂ ಸನಾತನ ಸಂಸ್ಥೆ, ಹಿಂದೂ ಜನ ಜಾಗೃತಿ ಸಮಿತಿ ಹಾಗೂ ಶ್ರೀರಾಮ ಸೇನೆಯ ಕಾರ್ಯಕರ್ತರು ಇದ್ದರು.
ಹಿಂದೂ ಜನ ಜಾಗೃತಿ ಸಮಿತಿಯ ಸರಿತಾ ಸ್ವಾಗತಿಸಿ, ನಿರೂಪಿದರು.