ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ ಕಾರ್ಯಕ್ರಮ

District tour program of the District In-charge Minister

ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಗದಗ 14: ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್‌.ಕೆ.ಪಾಟೀಲ ಅವರು ಮಾರ್ಚ 15  ಮತ್ತು 16 ರಂದು ಜಿಲ್ಲೆಯಲ್ಲಿ  ಪ್ರವಾಸ ಕೈಗೊಳ್ಳಲಿದ್ದು ಕಾರ್ಯಕ್ರಮದ ವಿವರ ಇಂತಿದೆ: ಮಾರ್ಚ 15 ರಂದು  ಹುಬ್ಬಳ್ಳಿಯಿಂದ ರಸ್ತೆ ಮೂಲಕ ಹೊರಟು ಬೆಳಿಗ್ಗೆ 9.30 ಗಂಟೆಗೆ  ಗದುಗಿಗೆ ಆಗಮಿಸುವರು. ಬೆಳಿಗ್ಗೆ 10.30 ಗಂಟೆಗೆ ಹುಲಕೋಟಿಯ ಕೆ.ಎಚ್‌.ಪಾಟೀಲ ಕ್ರಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಡಿ.ಪಿ.ಆರ್‌.ಸಿ. ಬಿಲ್ಡಿಂಗ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಬೆ 11 ಗಂಟೆಗೆ ಹುಲಕೋಟಿ ಗ್ರಾಮದ ಶ್ರೀ ಕರಿಯಮ್ಮ ದೇವಿ ತೇರಿನ ಮಂಟಪ ಕಟ್ಟಡದ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವರು.  ಮಾರ್ಚ 16 ರಂದು  ಬೆ 8.45 ಗಂಟೆಗೆ  ಹುಲಕೋಟಿಯ ಎಂ.ಕೆ.ಬಿ.ಎಸ್‌. ಶಾಲೆಯ ನವೀಕೃತಗೊಂಡ ಕಟ್ಟಡದ ಉದ್ಘಾಟನೆ, ಬೆ 9 ಗಂಟೆಗೆ ಹುಲಕೋಟಿ ಗ್ರಾಮ ಪಂಚಾಯತಿ ಕಟ್ಟಡದ ಉದ್ಘಾಟನೆ, ಬೆ 9.15 ಗಂಟೆಗೆ ಬಿಂಕದಕಟ್ಟಿ ಗ್ರಾಮ ಪಂಚಾಯತಿ ಕಟ್ಟಡದ ಉದ್ಘಾಟನೆ , ಬೆ 10 ಗಂಟೆಗೆ ಗದಗ ಬಿಂಕದಕಟ್ಟಿ ರಸ್ತೆ ಗದಗ ಮೃಗಾಲಯದ ಹತ್ತಿರದಲ್ಲಿ ಗದಗ ಮೃಗಾಲಯದ ಅಭಿವೃದ್ಧಿಗಾಗಿ ಭೂಸ್ವಾಧೀನಪಡಿಸಿಕೊಂಡ ಭೂಮಿಯ ಶಂಕುಸ್ಥಾಪನೆ , ವಲಯ ಅರಣ್ಯ ಅಧಿಕಾರಿಗಳ ನೂತನ ಕಚೇರಿ, ನೂತನ ವಸತಿ ಗೃಹ  ಹಾಗೂ  ಶಿಶುಗಳಿಗೆ ಹಾಲುಣಿಸುವ ಕೊಠಡಿ ಉದ್ಘಾಟನೆ  ಹಾಗೂ ಕಪ್ಪತ್ತಗುಡ್ಡ ಪ್ರಕೃತಿ ಶಿಬಿರದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.  ಬೆ 10.15 ಗಂಟೆಗೆ ನಗರದ ಗಾಂಧೀ ವೃತ್ತದಲ್ಲಿನ ಶ್ರೀ ಅನ್ನಪೂರ್ಣೆಶ್ವರಿ ಪ್ರಸಾದ ನಿಲಯದ ನೂತನ ಕಟ್ಟಡದ ಉದ್ಘಾಟನೆ,  ಬೆ 11 ಗಂಟೆಗೆ  ಗದಗ ಕಾಟನ್ ಸೇಲ್ ಸೊಸೈಟಿಯಲ್ಲಿ ಕೆ.ಎಚ್‌.ಪಾಟೀಲ ಜನ್ಮ ಶತಮಾನೋತ್ಸವ ಆಚರಣೆ ಹಾಗೂ ದಿ ಗದಗ ಕೋ ಆಪರೇಟಿವ್ ಕಾಟನ್ ಸೇಲ್ ಸೊಸೈಟಿ ನವೀನ ಕಟ್ಟಡದ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವರು. ರಾತ್ರಿ 10.30 ಗಂಟೆಗೆ  ಹುಬ್ಬಳ್ಳಿಯಿಂದ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.