ಜನರ ಬಳಿಗೆ ಜಿಲ್ಲಾಡಳಿತ: ಕಡಕೋಳದಲ್ಲಿ ಗ್ರಾಮ ವಾಸ್ತವ್ಯ

ಗದಗ 11: ಜನರ ಬಳಿಗೆ ಜಿಲ್ಲಾಡಳಿತವೇ ಹೋಗಿ ಅವರ ಕುಂದುಕೊರತೆ ಅಹವಾಲು ಆಲಿಸುವ ರಾಜ್ಯ ಸಕರ್ಾರದ ಉದ್ದೇಶದ ಅನುಗುಣವಾಗಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳಕ್ಕಿಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ವಾಯವ್ಯ ಸಾರಿಗೆ ಬಸ್ಸಿನಲ್ಲಿ ಗ್ರಾಮಕ್ಕೆ ಆಗಮಿಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ವಿರುಪಾಕ್ಷಪ್ಪ ಗವಳಿ ಜಿಲ್ಲಾಧಿಕಾರಿಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಬರಮಾಡಿಕೊಂಡರು.

                ಕಡಕೋಳ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಸ್ಥರಿಂದ ಕುಂದುಕೊರತೆ, ಅಹವಾಲು ಸ್ವೀಕಾರಕ್ಕೂ ಮುನ್ನ ಜಿಲ್ಲಾಧಿಕಾರಿಗಳು ಗ್ರಾಮ ಪ್ರದಕ್ಷಿಣೆ ಮಾಡಿದರು, ರಸ್ತೆಗಳ ಸ್ಥಿತಿಗತಿ, ವಿದ್ಯುದೀಪ, ಕುಡಿಯುವ ನೀರಿನ ಪೂರೈಕೆ, ಸ್ವಚ್ಛತೆ ವಿಷಯಗಳ ಕುರಿತು ವಾಸ್ತವವನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಗ್ರಾಮಸ್ಥರೊಂದಿಗೆ ಆಗಬೇಕಾದ ಕೆಲಸಗಳ ಕುರಿತು ಸಂವಾದ ನಡೆಸಿದರುಗ್ರಾಮ ಪಂಚಾಯತ, ಪಶುಚಿಕಿತ್ಸಾಲಯದ ವ್ಯವಸ್ಥೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ವಿಕಲಚೇತನರೊಬ್ಬರು ನೀಡಿದ ಅಹವಾಲನ್ನು ಸ್ವೀಕರಿಸಿದರು.

                ತದನಂತರ ಗ್ರಾಮದ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರುಗಿದ ಸಾರ್ವಜನಿಕ ಕುಂದುಕೊರತೆ, ಅಹವಾಲು ಸ್ವೀಕಾರ ಸಭೆಯಲ್ಲಿ ಶಾಸಕರಾದ ರಾಮಣ್ಣ ಲಮಾಣಿ, ಜಿ.ಪಂ. ಸದಸ್ಯೆ ರೇಖಾ ಅಳವಂಡಿ, ತಾ.ಪಂ. ಸದಸ್ಯ ತಿಪ್ಪಣ್ಣ ಕೊಂಚಿಗೇರಿಗ್ರಾಮ ಪಂಚಾಯತ ಉಪಾಧ್ಯಕ್ಷೆ ಶ್ರೀಮತಿ ಸೀತವ್ವ ಅಕ್ಕಿ, ಉಪವಿಭಾಗಾಧಿಕಾರಿ ಪಿ.ಎಸ್.ಮಂಜುನಾಥ,  ಕೃಷಿ ಇಲಾಖೆ ಜಂಟಿ ನಿದರ್ೇಶಕ ಸಿ.ಬಿ.ಬಾಲರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ. ಎಸ್. ಹೊನಕೇರಿ, ಭೂ.ದಾಖಲೆಗಳ ಉಪನಿದರ್ೇಶಕ ರವಿಕುಮಾರ ಎನ್. ಸಮಾಜ ಕಲ್ಯಾಣ ಇಲಾಖೆ ಉಪನಿದರ್ೇಶಕ ಖಾಜಾ ಹುಸೇನ ಮುಧೋಳ, ಆಹಾರ ಇಲಾಖೆ ಉಪನಿದರ್ೇಶಕ ಅಶೋಕ ಕಲಘಟಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿದರ್ೇಶಕ ರಾಮಕೃಷ್ಣ ಪಡಗಣ್ಣವರ, ಶಿರಹಟ್ಟಿ ತಹಶೀಲ್ದಾರ . ಡಿ. ಅಮರವಾದಗಿ, ತಾ.ಪಂ. ಕಾರ್ಯನಿವಾಹಕ ಅಧಿಕಾರಿ ಆರ್. ವೈ. ಗುರಿಕಾರವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು, ಗುರು ಹಿರಿಯರು, ಕಡಕೋಳ ಸೇರಿದಂತೆ ಅದರ ವ್ಯಾಪ್ತಿಯ ವಿವಿಧ ಗ್ರಾಮಗಳಿಂದ ಆಗಮಿಸಿದ ಗ್ರಾಮಸ್ಥರು ಭಾಗವಹಿಸಿದ್ದರು.