30ಕುಟುಂಬಗಳಿಗೆ ದವಸ ಧಾನ್ಯ ವಿತರಣೆ

ಲೋಕದರ್ಶನ ವರದಿ

ಕೊಪ್ಪಳ 15: ಭಾಗ್ಯನಗರದಲ್ಲಿ ನಡೆದ ದಿ. 15ರಂದು ಡಾ. ಬಿ.ಆರ್ ಅಂಬೇಡ್ಕರ್ ಅವರ 129ನೇ ಜಯಂತಿಯ ಪ್ರಯುಕ್ತ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸರಳವಾಗಿ ಹೂವಿನ ಮಾಲಾರ್ಪಣೆ ಸಲ್ಲಿಸಿ, ನಂತರ ಈ ಮಹಾಮಾರಿ ಕೊರೊನಾ ರೋಗವು ಹರಡಿ ಭಾರತ ದೇಶದಲ್ಲಿ ಬಡವರಿಗೆ ಹಾಹಾಕಾರ ಉಂಟಾಗಿದ್ದು ಇಂತಹ ದುಃಸ್ಥಿತಿಯಲ್ಲಿ ಡಾ . ಬಿ. ಆರ್ ಅಂಬೇಡ್ಕರ್ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಭಾಗ್ಯನಗರ ಇವರವತಿಯಿಂದ 30ಕುಟುಂಬಗಳಿಗೆ ದವಸ ಧಾನ್ಯಗಳನ್ನು ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ಶ್ರೀ ಬಾಬಣ್ಣ ಹಾಗೂ ಮುಖಂಡರಾದ ಶ್ರೀ ಕೃಷ್ಣ ಇಟ್ಟಂಗಿ, ಸುರೇಶ್ ದರಗದಕಟ್ಟಿ, ಮಲ್ಲಪ್ಪ ಬುಲ್ಟಿ, ಸೋಮಣ್ಣ ದೇವರಮನಿ, ಯಮನಪ್ಪ ತಂಬ್ರಳ್ಳಿ, ಹಾಗೂ ಸಂಘದ ಅಧ್ಯಕ್ಷರಾದ ಮಾರುತಿ ಬುಲ್ಟಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು .