ಲೋಕದರ್ಶನ ವರದಿ
ಅಥಣಿ 17: ಅಸಹಾಯಕ ನಿರ್ಗತಿಕ ಮಕ್ಕಳನ್ನು ಪೋಷಿಸುವುದು ಮಹಾನ್ ಘಣಕಾರ್ಯ. ಇಂತಹ ವಿಕಲಚೇತನ ಮಕ್ಕಳ ಸೇವೆಯನ್ನು ಮಾಡುವುದು ಸಾಕ್ಷಾತ ದೇವರ ಸೇವೆಯನ್ನು ಮಾಡಿದಂತೆ. ಸಮಾಜ ಸೇವಾಕಾರ್ಯದಲ್ಲಿ ಮನಸಿಗೆ ಮುದ ಹಾಗು ನೆಮ್ಮದಿ ನೀಡುವ ಸೇವೆ ಅಪರೂಪವಾದದ್ದು. ಎಂದು ವಿಧಾನ ಪರಿಷತ್ ಸದಸ್ಯ ಪಿ ಆರ ರಮೇಶ ಅವರು ಹೇಳಿದರು.
ಸ್ಥಳೀಯ ಶಾರದಾ ದೇವಿ ಬುದ್ದಿಮಾಂದ್ಯ ಮಕ್ಕಳ ವಸತಿ ನಿಲಯಕೆ ್ಕ, ಬೆಳಗಾವಿ ಅಧಿವೇಶನದ ರವಿವಾರ ಬಿಡುವಿನ ಸಮಯದಲ್ಲಿ ಭೇಟಿ ನೀಡಿ ಪರೀಶಿಲಿಸುತ್ತಾ ಹಾಗೂ ಅಲ್ಲಿರುವಂತಹ ನೌಕರರ ಹಾಗೂ ಮಕ್ಕಳಿಗೆ ಬರಬೇಕಿರುವಂತಹ ಅನುದಾನದ ಸಮಸ್ಯೆಗಳನ್ನು ಆಲಿಸಿ ಮತ್ತು ಅದಕ್ಕೆ ಸರಕಾರದ ವತಿಯಿಂದ ಬರಬೇಕಾದ ಪರಿಹಾರವನ್ನು ಸೂಚಿಸುತ್ತಾ ಮಾತನಾಡಿದರು. ಮುಂದುವರೆದು ಸರಕಾರದ ಪರವಾಗಿ ನಾನು ಮೇಲಾಧಿಕಾರಿಗಳಿಗೆ ಈಗಾಗಲೇ ಈ ವಿಷಯವನ್ನು ಮುಟ್ಟಿಸಿದ್ದು ಶೀಘ್ರದಲ್ಲಿ ಇಲ್ಲಿ ಉಂಟಾದ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಹೇಳಿದರು.
ಈ ಸಮಯದಲ್ಲಿ ಮಾಜಿ ಜಿ ಪಂ ಸದಸ್ಯ ಬಸವರಾಜ ಬುಟಾಳಿ, ಕನರ್ಾಟಕ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಕೊಕಟನೂರ ಮಾತನಾಡಿದರು ಹಾಗೂ ರವಿ ಬಡಕಂಬಿ, ಮಹಾಂತೇಶ ಮಾಳಿ, ಸುಭಾಷ ಮಾಳಿ, ರಮೇಶ ಮಾಳಿ, ಪ್ರಶಾಂತ ತೋಡಕರ, ಮಲ್ಲಿಕಾಜರ್ುನ ಬಾಳಿಕಾಯಿ, ಮಹಾದೇವ ಚಮಕೇರಿ ಹಾಗೂ ಬುದ್ದಿಮಾಂದ್ಯ ಶಾಲೆಯ ನಿವರ್ಾಹಕರು ಮತ್ತು ನೂರಾರು ಮಕ್ಕಳು ಉಪಸ್ಥಿತರಿದ್ದರು.