ಬಾಗಲಕೋಟೆ 29: ಜಿಲ್ಲಾ ಉದ್ಯೋಗ ವಿನಿಯ ಕಚೇರಿಯಲ್ಲಿ ಗುರುವಾರ ವಿವಿಧ ಹುದ್ದೆಗಳಿಗೆ ನಡೆದ ನೇರ ಸಂದರ್ಶನದಲ್ಲಿ ಒಟ್ಟು 67 ಜನರಿಗೆ ಉದ್ಯೋಗ ದೊರೆಯಿತು.
ಈ ನೇರ ಸಂದರ್ಶನದಲ್ಲಿ ಬೆಂಗಳೂರಿನ ಅಥರ್ವ ಅಗ್ರಿಕಲ್ಚರ ಪ್ರೈ. ಲಿ, ಬ್ಲೋಸಾಮ್ ಗ್ರೂಪ್ ಪ್ರೈ.ಲಿ, ಗ್ರೀತ್ ಟೆಕ್ನೋಲಾಜಿ ಪ್ರೈ.ಲಿ, ಬಾಗಲಕೋಟೆಯ ಮಣಪುರಂ ಪೈನಾನ್ಸ್ ಪ್ರೈ.ಲಿ, ಬೆಳಗಾವಿಯ ಸ್ಪೂತರ್ಿ ಹರ್ಬಲ್ಸ್, ಹುಬ್ಬಳ್ಳಿಯ ಶ್ರೀ ಸಾಯಿ ಬಯೋ ಪಟರ್ಿಲೈಸರ್ ಹಾಗೂ ಸನ್ ಇಂಡಿಯಾ ಸೇರಿ ಒಟ್ಟು 7 ಕಂಪನಿಗಳು ಭಾಗವಹಿಸಿದ್ದವು.
ನೇರ ಸಂದರ್ಶನದಲ್ಲಿ 166 ಪುರುಷರು ಹಾಗೂ 41 ಮಹಿಳೆಯರು ಸೇರಿ ಒಟ್ಟು 207 ಜನರು ನೋಂದಾಯಿಸಿದ್ದರು.
ಈ ಪೈಕಿ 56 ಪುರುಷರು ಮತ್ತು 11 ಮಹಿಳೆಯರು ಸೇರಿ ಒಟ್ಟು 67 ಜನರಿಗೆ ಉದ್ಯೋಗ ನೀಡಲಾಯಿತು. ಅಲ್ಲದೇ 62 ಅಭ್ಯಥರ್ಿಗಳನ್ನು ಶಾರ್ಟ ಲಿಸ್ಟನಲ್ಲಿ ಇಡಲಾಯಿತು.