ಲೋಕದರ್ಶನ ವರದಿ
ಧಾರವಾಡ
14: ಇತ್ತಿಚೀನ ದಿನಗಳಲ್ಲಿ ಉದ್ಯೋಗವಕಾಶಗಳು ಕೌಶಲ್ಯ ಆಧಾರಿತವಾಗಿವೆ. ಆದ್ದರಿಂದ ವಿದ್ಯಾಥರ್ಿಗಳು
ವಿವಿಧ ಪ್ರಕಾರದ ಕೌಶಲ್ಯಗಳನ್ನು ತಮ್ಮಲ್ಲಿ ಬೆಳೆಸಿಕೊಳ್ಳಬೇಕು. ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ
ವಿಭಿನ್ನ ಕೌಶಲ್ಯಗಳನ್ನು ಹೊಂದಿರುವ ವಿದ್ಯಾಥರ್ಿಗಳು ಉತ್ತಮ ಉದ್ಯೋಗ ಅವಕಾಶಗಳನ್ನು ಪಡೆಯುವ ಸಾಧ್ಯತೆಯಿದೆ.
ಆದ್ದರಿಂದ ಸಂವಹನ ಕೌಶಲ್ಯಗಳು, ಬರವಣಿಗೆ ಕೌಶಲ್ಯಗಳು, ಸಂದರ್ಶನ ಎದುರಿಸುವ ಕೌಶಲ್ಯಗಳು, ಸಮಯ ಮತ್ತು
ಒತ್ತಡ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವ ತಂತ್ರಗಳನ್ನು ಒಳಗೊಂಡಂತೆ ಅನೇಕ ಕೌಶಲ್ಯಗಳನ್ನು ವಿದ್ಯಾಥರ್ಿಗಳು
ಪಡೆಯಬೇಕೆಂದು ಕವಿವಿ ವ್ಯವಹಾರ ನಿರ್ವಹಣೆ ವಿಭಾಗ ಪ್ರಾಧ್ಯಾಪಕ ಡಾ. ವಿನೋದ ವಿದ್ಯಾಥರ್ಿಗಳಿಗೆ ಸಲಹೆ
ನೀಡಿದರು.
ದಿ.
11 ಮತ್ತು 12 ರಂದು "ಉದ್ಯೋಗವಕಾಶಗಳ ಕೌಶಲ್ಯಗಳು" ಕುರಿತಾಗಿ ಕೌಶಲ್ಯ ಅಭಿವೃದ್ಧಿ ತರಬೇತಿ
ಕೇಂದ್ರ ಮತ್ತು ಅರ್ಥಶಾಸ್ತ್ರ ವಿಭಾಗ ಜಂಟಿಯಾಗಿ ಆಯೋಜಿಸಿರುವ ಎರಡು ದಿನದ ಕಾರ್ಯಗಾರದ ಸಮಾರೋಪ ಕಾರ್ಯಕ್ರಮದಲ್ಲಿ
ಅವರು ಮಾತನಾಡುತ್ತಿದ್ದರು.
ಡಾ.
ಗುರುರಾಜ್ ಪಾಟೀಲ ಮಾತನಾಡಿ ವ್ಯಕ್ತಿತ್ವ ಅಭಿವೃದ್ಧಿ ಮತ್ತು ಸಂವಹನ ಕೌಶಲ್ಯದ ಮೂಲಕ ಜೀವನ ರೂಪಿಸಿಕೊಳ್ಳುವ
ಮಹತ್ವವನ್ನು ಎತ್ತಿ ತೋರಿಸಿದರು. ಉತ್ತಮ ಕೌಶಲ್ಯ ಹೊಂದಿರುವವರು ಉತ್ತಮ ಜೀವನವನ್ನು ಯಶಸ್ವಿಯಾಗಿ
ನಡೆಸಬಹುದು ಎಂದು ಗುರುರಾಜ್ ಹೇಳಿದರು.
ಆಸ್ಕರ್
ಫನರ್ಾಂಡಿಸ್ ಮತ್ತು ಪ್ರೀಯಾ ಕುಲಕಣರ್ಿ ಅವರು ಜೀವನದ ವಿಭಿನ್ನ ಕೌಶಲ್ಯಗಳ ಬಗ್ಗೆ ಮಾತನಾಡುತ್ತಾ,
ಜೀವನದಲ್ಲಿ ಯಾವುದೇ ಅನಿರಿಕ್ಷೀತ ಸಂಕಷ್ಟಗಳು ಅಥವಾ ಸಮಸ್ಯೆಗಳು ಎದುರಾದಾಗ, ಅವುಗಳನ್ನು ಯಶಸ್ವಿಯಾಗಿ
ಎದುರಿಸಲು ವಿದ್ಯಾಥರ್ಿಗಳಲ್ಲಿ ಶಕ್ತಿ ಸಾಮಥ್ರ್ಯವನ್ನು ವೃದ್ಧಿಸಬೇಕೆಂಬ ಮಾತನ್ನು ಹೇಳಿದರು. ಕೌಶಲ್ಯ
ಅಭಿವೃದ್ಧಿ ಮತ್ತು ತರಬೇತಿ ಕೇಂದ್ರದ ಸಂಘಟನಾಕಾರರು ಡಾ. ಆರ್. ಆರ್. ಕುಲಕಣರ್ಿ ಅವರು ತರಬೇತಿ ಕೇಂದ್ರದ
ಪ್ರಮುಖ ಉದ್ದೇಶ ಮತ್ತು ಚಟುವಟಿಕೆಗಳನ್ನು ವಿವರಿಸುತ್ತಾ, ವಿದ್ಯಾಥರ್ಿಗಳು ಎದುರಿಸುವ ಸಮಸ್ಯೆಗಳನ್ನು
ಸೂಕ್ತವಾಗಿ ಇತ್ಯರ್ಥ ಪಡಿಸಿಕೊಳ್ಳುವ ಸಾಮಥ್ರ್ಯಗಳನ್ನು ನಿಮರ್ಿಸುವುದು ಅಗತ್ಯವಾಗಿದೆ ಎಂದರು.
ಪ್ರಾಧಾಪಕ
ಡಾ. ಆರ್. ಆರ್. ಬಿರಾದಾರ ಅಧ್ಯಕ್ಷತೆ ವಹಿಸಿದ್ದು, ಉತ್ತಮ ಸಂವಹನ ಕೌಶಲ್ಯಗಳನ್ನು ಹೊಂದಿರುವ ಜನರು
ಈ ದೇಶದ ಸಕ್ರೀಯ ನಾಯಕರಾಗಬಲ್ಲದಲ್ಲದೆ ಇಡೀ ವಿಶ್ವದಲ್ಲಿಯೇ ಪ್ರಭಾವಿ ವ್ಯಕ್ತಿಯಾಗಿ ಹೊರಹೊಮ್ಮಬಹುದಾಗಿದೆ
ಎಂದರು. ಉನ್ನತ ಶಿಕ್ಷಣದ ಹೆಚ್ಚಿನ ವಿದ್ಯಾಥರ್ಿಗಳು ಉತ್ತಮ ಸಂವಹನ ಕೌಶಲ್ಯಗಳನ್ನು ಹೊಂದದೆ ಅವರ ಜೀವನ
ಯಶಸ್ವಿಯಾಗುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಉತ್ತಮ ವ್ಯಕ್ತಿತ್ವವನ್ನು ನಿಮರ್ಿಸಿಕೊಳ್ಳಲು ಅನೇಕ
ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ಡಾ. ಆರ್. ಆರ್. ಬಿರಾದಾರ ರವರು ವಿದ್ಯಾಥರ್ಿಗಳಗೆ ಸಲಹೆ ನೀಡಿದರು.
ಡಾ.
ಎನ್. ಎಸ್. ಮುಗದುರ ರವರು ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ವಿದ್ಯಾಥರ್ಿನಿ ಬಸಮ್ಮ ಹಿರೇಮಠ
ಸ್ವಾಗತ ಗೀತೆಯನ್ನು ಹಾಡಿದರು. ಸುಮಲತಾ ಕಾರ್ಯಕ್ರಮವನ್ನು ನಡೆಸಿದರು. ಡಾ. ಆರ್. ಆರ್. ಕುಲಕಣರ್ಿ
ಕಾರ್ಯಗಾರದ ಸಂಘಟನಾಕಾರರು ವಂದನಾರ್ಪಣೆ ಮಾಡಿದರು. ಡಾ. ಪಿ. ಎಮ್. ಹೊನಕೇರಿ, ಡಾ. ಎಚ್. ಎಚ್. ಭರಡಿ,
ಡಾ. ಎಚ್. ಎಚ್. ಗಡವಾಲೆ, ಮಧು ಪುರೋಹಿತ ಮತ್ತು ಇತರರು ಉಪಸ್ಥಿತರಿದ್ದರು.