ಪಾಶ್ಚಾತ್ಯ ಸಂಸ್ಕೃತಿಯನ್ನು ಶಮನಗೋಳಿಸಲು ಧರ್ಮಸಭೆ ಮೊರೆಹೋಗಬೇಕು : ಯಾಶೀರಖಾನ ಪಠಾಣ
ಶಿಗ್ಗಾವಿ 03 : ಭಾರತ ದೇಶ ಸಂಸ್ಕಾರ ಹೊಂದಿದ ದೇಶ ಇಂದಿನ ದಿನಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಗೆ ಮೊರೆ ಹೊಗುತ್ತಿರುವುದು ಖೇದಕರ ಇಂತಹ ಸಂಸ್ಕೃತಿ ಶಮನಗೋಳಿಸಲು ಧರ್ಮಸಭೆ ಮೊರೆಹೋಗಬೇಕು ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು.
ಪಟ್ಟಣದ ಶ್ರೀ ಮೈಲಾರಲಿಂಗೇಶ್ವರ ನೂತನ ಶಿಲಾಮೂರ್ತಿ ಕಳಸಾರೋಹಣ ಧರ್ಮಸಭೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಮೈಲಾರಲಿಂಗೇಶ್ವರ ಸಮಾಜದಲ್ಲಿ ಆರಾಧ್ಯದೈವವಾಗಿ ಮಾರ್ಪಟಟಿದ್ದು, ತಂದೆ ತಾಯಿಗಳನ್ನು ನಾವೆಲ್ಲರೂ ಚೆನ್ನಾಗಿ ನೋಡಿಕೊಳ್ಳಬೇಕು. ಮನೆಯಲ್ಲಿ ತಂದೆ ತಾಯಿಯರ ಸೇವೆ ಮಾಡಿದರೆ ಅಲ್ಲಿಯೇ ನಮಗೆ ನಿಜವಾದ ದೇವರು ಕಾಣುತ್ತಾನೆ ಅಲ್ಲದೇ ನಮಗೆ ನೆಮ್ಮದಿ ಮತ್ತು ಶಾಂತಿ ಸಿಗುತ್ತದೆ. ಶಾಸಕರ ಅನುದಾನದಲ್ಲಿ 25 ಲಕ್ಷ ದೇವಸ್ಥಾನ ಜೀರ್ಣೋದ್ದಾರಕ್ಕೆ ಹಣ ನೀಡುತ್ತೇನೆ ಎಂದರು.
ದಿವ್ಯ ಸಾನಿಧ್ಯವಹಿಸಿ ಶ್ರೀ ಶಂಭುಲಿಂಗ ಪಟ್ಟಾದ್ಯಕ್ಷರು ಹೋತನಹಳ್ಳಿ ಮಾತನಾಡಿ 7 ಕೋಟಿ ಜನ ಎಲ್ಲಿಯವರೆಗೂ ಮೈಲಾರದಲ್ಲಿ ಸೇರುವುದಿಲ್ಲವೋ ಅಲ್ಲಿಯವರೆಗೂ ಶನಿ ಮುಕ್ತವಾಗುವುದಿಲ್ಲ, ಧಾನ ದರ್ಮ ಹಾಗೂ ಪರೋಪಕಾರ ಗುಣಗಳನ್ನು ಬೆಳೆಸಬೇಕು, ಸ್ತ್ರೀಯರಿಗೆ ಎಲ್ಲಿ ಗೌರವ ಸಿಗುತ್ತದೆ ಅಲ್ಲಿ ದೇವರು ಇರುತ್ತಾನೆ. ಯಾರು ದೇವರನ್ನು ಪೂಜಿಸುತ್ತಾರೆ, ಪ್ರಾರ್ಥಿಸುತ್ತಾರೆ ಅವರಲ್ಲಿ ನಾನು ಯಾವಾಗಲೂ ವಿರಾಜಮಾನವಾಗಿರುತ್ತೇನೆ ಎಂದು ಆರ್ಶಿವದಿಸಿದರು.
ರಮೇಶ ಸ್ವಾಮಿಗಳು ಗೋನಾಳ ಆರ್ಶಿವದಿಸಿದರು. ಸಮಿತಿ ಖಜಾಂಚಿ ನಿಂಗಪ್ಪ ಇಂಗಳಗಿ ಅದ್ಯಕ್ಷತೆವಹಿಸಿ, ಗ್ಯಾರಂಟಿ ಅಧ್ಯಕ್ಷ ಎಸ್.ಎಫ್.ಮಣಕಟ್ಟಿ ಮಾತನಾಡಿದರು, ಸುಶಿಲೇಂದ್ರ ಬೆಳಗಲಿ ಆದ್ಯಾತ್ಮಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಲತೇಶ ಕಂಕನವಾಡ, ಗುಡ್ಡಪ್ಪ ಜಲದಿ, ಗೌಸಖಾನ ಮುನಶಿ, ಜಾಫರಖಾನ ಪಠಾಣ, ಮಹಾರುದ್ರಾ್ಪ ಕೊಡ್ಲಿವಾಡ, ಪರ್ವಿಜಾಹ್ಮದ ಮುಲ್ಲಾ , ಮುನ್ನಾ ಮಾಲ್ದಾರ, ಮಹಾಲಿಂಗಪ್ಪ ಮುಳಕೇರಿ, ಮಲ್ಲೇಶಪ್ಪ ನೆವರದ, ಶಿವಾಜಿ ಶಿಂಧೆ, ಶಿವಾನಂದ ದೇವಗೇರಿ, ಮಂಜುನಾಥ ಅಸ್ವಾಲೇಕರ, ಪರುಶರಾಮ ಕುದರಿ, ಮಂಜುನಾಥ ತಿಮ್ಮಾಪೂರ, ನಾಮದೇವ ಅಂಚಲಕರ, ಮಾಲತೇಶ ಸಾಲಿ, ಶಂಭು ನೆರ್ತಿ, ಸಿದ್ದರಾಮಗೌಡ ಮೆಳ್ಳಾಗಟ್ಟಿ, ಚೆನ್ನವೀರ ನೀರಲಗಿ, ನೂರಂದಪ್ಪ ಯಲಿಗಾರ ಸೇರಿದಂತೆ ಸದ್ಬಕ್ತರು ಉಪಸ್ಥಿತರಿದ್ದರು. ಸುಭಾಸ ಚವ್ಹಾಣ ಸ್ವಾಗತಿಸಿದರು, ಸುರೇಶ ಯಲಿಗಾರ ವಂದಿಸಿದರು, ಪ್ರೋ ಶಶಿಕಾಂತ ರಾಠೋಡ, ಶಿಕ್ಷಕಿ ಗಂಗೂಬಾಯಿ ದೇಸಾಯಿ ಕಾರ್ಯಕ್ರಮ ನಿರ್ವಹಿಸಿದರು.