ಘಟಪ್ರಭಾ: ಮಲ್ಲಾಪೂರ ಪಿ.ಜಿ ಪಟ್ಟಣದ ಲಕ್ಷ್ಮೀದೇವಿ ಗುಡಿಯ ಅರ್ಚಕರಾಗಿ ಕಳೆದ 9 ವರ್ಷದಿಂದ ಒಂದೇ ಸಮುದಾಯದವರು ಕಾರ್ಯ ನಿರ್ವಹಿಸುತ್ತಿರುವುದರಿಂದ ಅದನ್ನು ಪುನಃ ಲಿಂಗಾಯಿತರಿಗೆ ನೀಡಬೇಕೆಂದು ಆಗ್ರಹಿಸಿ ಇಂದು ನಡೆಸುತ್ತಿದ್ದ ಅನಿಧರ್ಿಷ್ಠ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಗುಬ್ಬಲಗುಡ್ಡ ಮಠದ ಮಲ್ಲಿಕಾಜರ್ುನ ಮಹಾಸ್ವಾಮಿಗಳು ಬೇಟಿ ನೀಡಿ ಹಿತವಚನ ನೀಡಿ ದೇವರ ವಿಷಯದಲ್ಲಿ ಜಗಳ ಮಾಡುವುದು ಯಾರಿಗೂ ಒಳಿತಾಗುವುದಿಲ್ಲ ದೇವರನ್ನು ಜಗಳದವಿಷಯವಾಗಿ ಇಟ್ಟುಕೊಳ್ಳುವುದು ಸರಿಯಲ್ಲ ಆದ್ದರಿಂದ ಊರಿನ ಹಿರಿಯರು ಈ ಸಮಸ್ಯೆಯನ್ನು ಎರಡು ಸಮುದಾಯದವರು ಕೂಡಿಕೊಂಡು ಸೌಹರ್ದಯುತ್ತವಾಗಿ ಮುಕ್ತಾಯ ಮಾಡಿಕೊಳ್ಳಲು ಸೂಚಿಸಿದ್ದರಿಂದ ಧರಣಿ ಸತ್ಯಾಗ್ರಹವನ್ನು ಹಿಂಪಡೆಯಲಾಯಿತು.
ಹಿನ್ನೆಲೆ:ಕಳೆದ 9 ವರ್ಷಗಳಿಂದ ವಿವಾದದ ಕೇಂದ್ರವಾಗಿ ಎರಡು ಸಮುದಾಯದ ಮಧ್ಯೆ ಬೂದಿ ಮುಚ್ಚಿದ ಕೆಂಡದಂತೆ ಇರುವ ಮಲ್ಲಾಪೂರ ಪಿ.ಜಿ ಲಕ್ಷ್ಮೀ ದೇವರ ಗುಡಿಗೆ 100 ವರ್ಷಗಳ ಇತಿಹಾಸವಿದೆ. ಆಗಿನಿಂದಲೂ ಈ ಗುಡಿಗೆ ಒಂದು ವರ್ಷ ಲಿಂಗಾಯಿತರು ಪೂಜೆ ಮಾಡಿದರೆ ಇನ್ನೊಂದು ವರ್ಷ ಉಪ್ಪಾರರು ಸಮುದಾಯದವರು ಪೂಜೆ ಮಾಡುತ್ತಾ ಅದ್ದೂರಿಯಾಗಿ ಜಾತ್ರೆಯನ್ನು ಮಾಡುತ್ತಾ ಸೌಹರ್ದಯುತವಾಗಿ ಇದ್ದರು. ಆದರೆ ಕಳೆದ 9 ವರ್ಷಗಳಹಿಂದೆ ದೇವರ ಗುಡಿಯ ಮುಂದೆ ಟಗರ ಮೂತರ್ಿ ಕುಡ್ರಿಸಬೇಕೆಂದು ಒಂದು ಸಮುದಾಯದವರು ಆಗ್ರಹಿಸಿದ್ದರಿಂದ ಎರಡು ಸಮೂದಯದ ಮಧ್ಯೆ ವೈಮನಸ್ಸು ಉಂಟಾಗಿ ಪೋಲಿಸ್ ಠಾಣೆ ಮೇಟ್ಟೆಲೇರಿ ನಂತರ ಗುಡಿಯನ್ನು ಕಂದಾಯ ಇಲಾಖೆಯವರು ವಶ ಪಡಿಸಿಕೊಂಡು ಒಂದು ವರ್ಷ ಸರಕಾರದಿಂದಲೆ ಅರ್ಚಕನನ್ನು ನೇಮಿಸಿ ಪೂಜೆ ಮಾಡಲಾಗಿತ್ತು. ನಂತರ ಈ ಜಗಳ ಜಾರಕಿಹೊಳಿ ಸಹೋದರರ ಕಡೆ ಹೋಗಿದ್ದಾಗ ಅವರು ಉಪ್ಪಾರ ಸಮುದಾಯದವರೆಗೆ ಪೂಜೆ ಮಾಡಲು ಸೂಚಿಸಿ ಗುಡಿಯನ್ನು ಅವರಿಗೆ ಒಪ್ಪಿಸಲಾಗಿತ್ತು. ಇಲ್ಲಿ ತನಕವೂ ಉಪ್ಪಾರ ಸಮಾಜದವರೆ ಪೂಜೆ ಮಾಡುತ್ತಿರುವುದರಿಂದ ಈಗ ಲಿಂಗಾಯಿತ ಸಮಾಜದವರು ಗುಡಿಯ ಪೂಜೆಗೆ ಹಿಂದೆ ಇದ್ದ ನಿಯಮದಂತೆ ನಮಗೂ ಒಂದು ವರ್ಷ ಅವಕಾಶ ನೀಡಬೇಕೆಂದು ಕೇಳಿದ್ದರು ಇನ್ನು ತನಕ ಪೂಜೆ ಅವಕಾಶ ಸಿಗದ ಕಾರಣ ಇಂದು ಸಮಾಜಿಕ ಕಾರ್ಯಕರ್ತರಾದ ಬಸವರಾಜ ಹುದ್ದಾರ ನೇತೃತ್ವದಲ್ಲಿ ಊರಿನ ಹಿರಿಯರು ಸೇರಿ ಕೊಂಡು ಧರಣಿ ಸತ್ಯಾಗ್ರಹಕ್ಕೆ ಲಕ್ಷ್ಮೀದೇವಿಯ ಗುಡಿಯ ಮುಂದೆ ಇಂದು ಕುಳಿತ್ತಿದ್ದರು ಅಲ್ಲಿಗೆ ಬೇಟಿ ನೀಡಿದ ಮಲ್ಲಿಕಾಜರ್ುನ ಮಹಾಸ್ವಾಮಿಗಳು ಇನ್ನಷ್ಟು ಗ್ರಾಮದ ಹಿರಿಯರನ್ನು ಸ್ಥಳಕ್ಕೆ ಕರೆಯಿಸಿಕೊಂಡು ವಿವಾದವನ್ನು ಬೆಳೆಸಿದರೆ ಅದು ಹೆಚ್ಚಾಗಿ ವೈಷಮ್ಯಕ್ಕೆ ಕಾರಣವಾಗುತ್ತದೆ ಎಂದು ಎಲ್ಲರಿಗೂ ತಿಳುವಳಿಕೆ ಹೇಳಿದ್ದರಿಂದ ಅದಕ್ಕೆ ಒಪ್ಪಿದ ಹಿರಿಯರು ನಾವೇ ಎರಡು ಸಮುದಾಯದವರು ಸೇರಿಕೊಂಡು ಇತ್ಯರ್ಥ ಮಾಡಿಕೊಳ್ಳುತ್ತೇವೆ ಎನ್ನುವ ಭರವಸೆಯನ್ನು ನೀಡಿ ಮಲ್ಲಿಕಾಜರ್ುನ ಮಹಾಸ್ವಾಮೀಜಿಯವರ ಮುಂದೇನೆ ಧರಣಿ ಸತ್ಯಾಗ್ರಹವನ್ನು ಹಿಂಪಡೆಯಲಾಯಿತ್ತು.
ಊರಿನ ಹಿರಿಯರಾದ ಶಂಕರಪ್ಪ ಹತ್ತರವಾಟ, ಸುಭಾಸ ಹುಕ್ಕೇರಿ, ಕೆಂಪಣ್ಣಾ ನಾಯಿಕ, ಅಪ್ಪಯ್ಯಪ್ಪಾ ಬಡಕುಂದ್ರಿ, ಬಸವರಾಜ ಹುದ್ದಾರ, ಬಸವರಾಜ ಹತ್ತರವಾಟ, ಬೀಮಶೆಪ್ಪಾ ಕಮತ, ಗೋವಿಂದ ತುಕ್ಕಾನಟ್ಟಿ, ಕಲ್ಲಪ್ಪ ಕೊಂಕಣಿ, ರಮೇಶ ತುಕ್ಕಾನಟ್ಟಿ, ಕಾಡಪ್ಪ ನಂದಗಾಂವಿ, ಶಂಕರ ನಂದಗಾಂವಿ, ಕೆಂಚಪ್ಪ ಪಾಟೀಲ, ನಿಂಗಣ್ಣ ನೇಲರ್ಿ, ಗೋವಿಂದ ಕಮನೂರೆ, ಸುರೇಶ ಪಾಟೀಲ ಇದ್ದರು.