ಲೋಕದರ್ಶನರವದಿ
ರಾಣೇಬೆನ್ನೂರ09: ಇಲ್ಲಿನ ಮೃತ್ಯುಂಜಯ ನಗರದ ಚೆನ್ನೇಶ್ವರ ಮಠದಲ್ಲಿ ಇತ್ತೀಚಿಗೆ ಜಂಗಮ ವಟುಗಳ ಇಷ್ಟಲಿಂಗ ದೀಕ್ಷೆ ಮತ್ತು ಲಿಂಗಧಾರಣಾ ಧಾಮರ್ಿಕ ಕಾರ್ಯಕ್ರಮವು ನಡೆಯಿತು. ನೆಗಳೂರು ಹಿರೇಮಠದ ಶ್ರೀಗುರು ಶಾಂತ ಶಿವಯೋಗಿ ಶಿವಾಚಾರ್ಯರು 25 ಜಂಗಮ ವಟುಗಳಿಗೆ ಲಿಂಗದೀಕ್ಷಾ ಧಾರಣೆ ಮಾಡಿಸುವುದರ ಮೂಲಕ ಜಂಗಮ ದೀಕ್ಷೆಯನ್ನು ದಯಪಾಲಿಸಿದರು.
ಶಿವಮೊಗ್ಗದ ವೇ||. ವಿಧ್ಯಾಧರ ಶಾಸ್ತ್ರೀಗಳು ಮತ್ತು ಚೆನ್ನೇಶ್ವರ ಮಠದ ವೇ|| ಹಾಲಸಿದ್ದಯ್ಯ ಶಾಸ್ತ್ರೀಗಳು ಲಿಂಗಧಾರಣೆಗೆ ಧಾಮರ್ಿಕ ವಿದಿವಿಧಾನಗಳನ್ನು ಅನುಸರಿಸಿ ಕಾರ್ಯ ನೆರವೇರಿಸಿದರು.
ಈ ಸಂಧರ್ಭದಲ್ಲಿ ಕಾರ್ಯದಶರ್ಿ ಅ.ಸಿ.ಹಿರೇಮಠ, ಕಸ್ತೂರಿ ಪಾಟೀಲ, ವಿ.ವಿ.ಹರಪನಹಳ್ಳಿ ಸೇರಿದಂತೆ ಮತ್ತಿತರೆ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.