ಇಂದಿನಿಂದ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ


ಲೋಕದರ್ಶನ ವರದಿ

ತಾಳಿಕೋಟೆ 19:  ಸುಕ್ಷೇತ್ರ ತಾಳಿಕೋಟೆ ಪಟ್ಟಣದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಜರಗುತ್ತಾ ಸಾಗಿ ಬಂದಿರುವ ಗ್ರಾಮದೇವಿ ಜಾತ್ರಾ ಮಹೋತ್ಸವವು ಈ ಸಲ ಜುಲೈ 20 ಶುಕ್ರವಾರದಿಂದ ಪ್ರಾರಂಭಗೊಂಡು 24 ಮಂಗಳವಾರದ ವರೆಗೆ ವಿಜೃಂಭಣೆಯಿಂದ ಜರುಗಲಿದೆ.

ದಿ. 20 ರಂದು ಪಟ್ಟಣದ ಅಂಬಾಭವಾನಿ ಮಂದಿರದಿಂದ ಗ್ರಾಮದೇವಿ ಮಹಾಮೂತರ್ಿಯ ರಥೋತ್ಸವವು ಡೊಳ್ಳಿನ ಮೇಳ ಹಾಗೂ ಡೊಳ್ಳಿನ ವಾದ್ಯದ ಕುಣಿತ, ಆಲಮೇಲ ಬ್ಯಾಂಡನವರಿಂದ ವಾದ್ಯ ಸಂಗೀತ, ಕರಡಿ ಮಜಲು, ಕುದುರೆ ಕುಣಿತ, ವಿವಿಧ ವಾದ್ಯಗಳ ವೈಭವದೊಂದಿಗೆ ರಾಜವಾಡೆಯ ದೇವಿಯ ಪಾದಗಟ್ಟೆಯ ವರೆಗೆ ಮೆರವಣಿಗೆ ಜರುಗುವದು.

ಈ ರಥೋತ್ಸವ ಚಾಲನೆ ಸಮಯದಲ್ಲಿ ಸಾನಿದ್ಯವನ್ನು ಖಾಸ್ಗತೇಶ್ವರ ಮಠದ ಪಟ್ಟಾದೀಶರಾದ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸುವರು. ಮಹಾ ರಥೋತ್ಸವಕ್ಕೆ ಚಾಲನೆಯನ್ನು ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ನೆರವೇರಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರು ಆಗಮಿಸುವರು. ಅಧ್ಯಕ್ಷತೆಯನ್ನು ಮಾಜಿ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ವಹಿಸುವರು. ಅತಿಥಿಗಳಾಗಿ ಪುರಸಭಾ ಅಧ್ಯಕ್ಷೆ ಅಕ್ಕಮಹಾದೇವಿ ಕಟ್ಟಿಮನಿ, ಮೊದಲಾದವರು ಆಗಮಿಸುವರು.

ಅಂದೇ ರಾತ್ರಿ 10-30 ಘಂಟೆಗೆ ಬಸವೇಶ್ವರ ನಾಟ್ಯ ಸಂಘದವರಿಂದ ದೇವಿಯ ಮಹಾತ್ಮೆ(ಅಥರ್ಾರ್ತ ಶುಂಭ-ನಿಶುಂಬರ ಮರ್ದನ) ಎಂಬ ಬಯಲಾಟ ಜರುಗಲಿದೆ.

ದಿ. 21 ರಂದು ಬೆಳಿಗ್ಗೆ 10 ಘಂಟೆಯಿಂದ 2 ಘಂಟೆಯವರೆಗೆ ಗೀಗಿ ಪದಗಳು ಜರುಗುವದು, ಮದ್ಯಾಹ್ನ 3 ಘಂಟೆಗೆ ಹೊಳೆ ಆಲೂರಿನ ಜ್ಞಾನಸಿಂಧು ಅಂದ ಮಕ್ಕಳ ವಸತಿ ಶಾಲೆಯ ಮಕ್ಕಳಿಂದ ಮಲ್ಲಕಂಬ ಪ್ರದರ್ಶನ ಜರುಗುವದು. ಸಂಜೆ 7-30 ಘಂಟೆಗೆ ವಿನೋದಕುಮಾರ ಹಾಗೂ ವಿದ್ಯಾಥರ್ಿಗಳಿಂದ ಭರತನಾಟ್ಯ ಕಾರ್ಯಕ್ರಮ ಜರುಗುವದು. ಸಂಜೆ 9-00 ಘಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ ಇವರ ವತಿಯಿಂದ ಮಂಜುಳಾ ಹಿಪ್ಪರಗಿ ಇವರಿಂದ ರಸಮಂಜರಿ ಕಾರ್ಯಕ್ರಮ ಜರುಗುವದು.

ದಿ. 22 ರಂದು ಬೆಳಿಗ್ಗೆ 7 ಘಂಟೆಯಿಂದ ಮದ್ಯಾಹ್ನ 12 ಘಂಟೆಯವರೆಗೆ ರಾಜವಾಡೆಯ ಗ್ರಾಮದೇವಿಯ ಪಾದಗಟ್ಟೆ ಮುಂಭಾಗದಲ್ಲಿ ಚಂಡಿಕಾ ಹೋಮ-ಹವನ, ಪೂಣರ್ಾಹುತಿ ಕಾರ್ಯಕ್ರಮವು ವೇ.ವಿಶ್ವನಾಥ ಆಚಾರ್ಯ ವೃಂದದವರಿಂದ ಜರುಗುವದು. ಸಾಯಂಕಾಲ 6 ಘಂಟೆಗೆ ಸನ್ಮಾನ ಸಮಾರಂಭವು ಜರುಗಲಿದೆ. ರಾತ್ರಿ 9 ಘಂಟೆಗೆ ನಗೆ ಹಬ್ಬ ಕಾರ್ಯಕ್ರಮವನ್ನು ಖ್ಯಾತ ಟಿವಿ ಕಲಾವಿದೆ ಇಂಧುಮತಿ ಸಾಲಿಮಠ, ಮಹಾದೇವಪ್ಪ ಸತ್ತಿಗೇರಿ, ಸಂಗಡಿಗರಿಂದ ಜರುಗುವದು. 

ದಿ. 23 ರಂದು ಬೆಳಿಗ್ಗೆ 10 ಘಂಟೆಯಿಂದ ಮದ್ಯಾಹ್ನ 2 ಘಂಟೆಯವರೆಗೆ ಗೀಗಿ ಪದ, ಮಧ್ಯಾಹ್ನ 3 ಘಂಟೆಗೆ ಭಾರ ಎತ್ತುವ ಸ್ಪಧರ್ೆ, ಜೋಳದ ಚೀಲ ಎತ್ತುವ ಸ್ಪಧರ್ೆ, ಜರುಗಲಿದ್ದು ಇದರಲ್ಲಿ ವಿಜೇತರಾದ ಪ್ರಥಮ ಬಹುಮಾನ 10 ತೋಲೆ ಬೆಳ್ಳಿ ಕಡೆ, ದ್ವಿತೀಯ ಬಹುಮಾನ 2 ಸಾವಿರ ರೂ. ಗುಂಡು ಎತ್ತುವ ಸ್ಪಧರ್ೆಯಲ್ಲಿ ವಿಜೇತರಾದವರಿಗೆ ಪ್ರಥಮ ಭಹುಮಾನ 5 ತೋಲೆ ಬೆಳ್ಳಿ ಕಡೆ, ದ್ವಿತೀಯ ಬಹುಮಾನ 1500 ರೂ. ಸಂಗ್ರಾಣಿ ಕಲ್ಲು ಎತ್ತುವ ಸ್ಪಧರ್ೆಯಲ್ಲಿ ವಿಜೇತರಾದವರಿಗೆ ಪ್ರಥಮ ಭಹುಮಾನ 3 ತೋಲೆ ಬೆಳ್ಳಿ ಕಡೆ, ದ್ವಿತೀಯ ಬಹುಮಾನ 1000 ರೂ. ನೀಡಲಾಗುವದು.

ದಿ. 24 ರಂದು ಬೆಳಿಗ್ಗೆ 10 ಘಂಟೆಯಿಂದ ಮದ್ಯಾಹ್ನ 2 ಘಂಟೆಯವರೆಗೆ ಗೀಗಿ ಪದ, ಮದ್ಯಾಹ್ನ 3 ಘಂಟೆಗೆ ರಾಜವಾಡೆಯ ಗ್ರಾಮದೇವಿಯ ಪಾದಗಟ್ಟೆಯಿಂದ  ಗ್ರಾಮದೇವಿಯ ಮಹಾ ಮೂತರ್ಿಯ ಭವ್ಯ ಮೆರವಣಿಗೆಯು ವಿವಿಧ ವಾದ್ಯ ವೈಭವಗಳೊಂದಿಗೆ ದೇವಿಯ ಮಂದಿರ ತಲುಪಿ ದೇವಿಯು ಮಂದಿರ ಪ್ರವೇಶಿಸುವ ಕಾರ್ಯಕ್ರಮ ಜರುಗುವದು. ಅಂದೇ ರಾತ್ರಿ 10-30 ಘಂಟೆಗೆ ಬಸವೇಶ್ವರ ನಾಟ್ಯ ಸಂಘದವರಿಂದ ದೇವಿಯ ಮಹಾತ್ಮೆ ಬಯಲಾಟ ಜರುಗಲಿದೆ. ಜಾತ್ರಾ ಉತ್ಸವದ ನಿಮಿತ್ಯವಾಗಿ ಪ್ರತಿದಿನ ಅನ್ನ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ದ್ಯಾವಮ್ಮದೇವಿ/ ಗ್ರಾಮದೇವಿ ದೇವಸ್ಥಾನ ಸೇವಾ ಸಮಿತಿ ಪ್ರಕಟನೆ ಮೂಲಕ ತಿಳಿಸಿದೆ.