ತಾಲೂಕಿನ ಅಭಿವೃದ್ಧಿ ಕುಂಟಿತವಾಗಿದೆ: ರಾಯರಡ್ಡಿ

ಯಲಬುಗರ್ಾ 04: ಹಿಂದಿನ ಸರಕಾರದಲ್ಲಿ ಮಂಜೂರಾದ ಕೆಲಸಗಳಿಗೆ ಶಂಕುಸ್ಥಾಪನೆ ಮಾಡಿದ್ದೆನೆ. ಮುಂದೆ ಕಾಮಗಾರಿಗಳನ್ನು ಮಾಡಿಕೊಂಡು ಹೋಗಬೇಕೆಂಬುದು ಜನಪ್ರತಿನಿಧಿಗೆ ಕಾಳಜಿ ಇರಬೇಕು. ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

 ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೊಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಮ್ಮ ತಾಲೂಕಿನಲ್ಲಿ ಬಹಳಷ್ಟು ಕೆಲಸಗಳು ಪ್ರಾರಂಭವಾಗದೆ ಹಾಗೆ ಉಳಿದಿದ್ದು ಹೊಸ ಶಾಸಕರು ಆರು ತಿಂಗಳಾದರು ಬಹಳಷ್ಟು ಕೆಲಸ ಅರ್ಧಕ್ಕೆ  ನಿಂತಿವೆ ವಣಗೇರಿ ಹೈಸ್ಕೂಲ್ ಮಂಜೂರು ಮಾಡಿಸಿದ್ದು ಕೆಲಸ ನಿಂತು ಹೋಗಿದೆ ನಮ್ಮ ಸರಕಾರ ಅಧಿಕಾರದಲ್ಲಿ ಇದ್ದಾಗ ಎಲ್ಲಾ ಕೆಲಸ ಕಾರ್ಯಗಳು ಪ್ರಾರಂಭದಲ್ಲಿ ಇದ್ದವು. ಈಗ ಅವುಗಳು ನಿಂತಿದ್ದು ಅವುಗಳನ್ನು ಪುನಃ ಪ್ರಾರಂಭಿಸಬೆಕೆಂದರು. ರಾಜೂರ ಗ್ರಾಮಕ್ಕೆ ಬುದ್ದ ಬಸವ ಅಂಬೇಡ್ಕರ ಭವನಕ್ಕೆ 1 ಕೋಟಿ ಹಣವನ್ನು ಮಂಜೂರು ಮಾಡಿದರು ಇನ್ನೂ ಕೂಡ ಕೆಲಸ ಪ್ರಾರಂಭಗೊಂಡಿಲ್ಲ ಮತ್ತು 12 ಲಕ್ಷ ರೂ ವಾಲ್ಮಿಕಿ ಭವನಕ್ಕೆ ಮಂಜೂರು ಆಗಿದೆ ಆದರು ಕೂಡ ಎಲ್ಲಾ ಕೆಲಸಗಳು ಪ್ರಾರಂಭವಾಗದೆ ಇದ್ದರೆ ಮುಂದಿನ ದಿನಗಳಲ್ಲಿ ತಾಲೂಕಿನ ಭವಿಷ್ಯ ಹೆಗೆ ಎಂಬುದು  ನನ್ನ ಪ್ರಶ್ನೆಯಾಗಿದೆ. ಅಧಿಕಾರ ಇದ್ದಾಗ ಮಾತ್ರ ಕೆಲಸ ಮಾಡಬೆಕು ಎಂಬುದು ಇಲ್ಲ ಅಧಿಕಾರ ಇಲ್ಲದಿದ್ದರು ಕೆಲಸಗನ್ನು ಮಾಡಬಹುದು ಎಂದು ತೋರಿಸುತ್ತೇನೆ. ಈಗಿನ ಶಾಸಕರಾದ ಹಾಲಪ್ಪ ಅವರು ನನ್ನಿಂದ ರಾಜಕೀಯ ಕಲಿತವರು  ಗೊತ್ತಿಲ್ಲದ ಮಾಹಿತಿಗಳನ್ನು ನನ್ನ ಹತ್ತಿರ ಕೆಳಿ ತಿಳಿದು ಕೊಳ್ಳಬೇಕು. ಏಕೆಂದರೆ ಅಭಿವೃದ್ಧಿ ಕಾರ್ಯಗಳು ನಿಂತು ಹೊಗಿವೆ ಕೆಲಸದ ಬಗ್ಗೆ ಕೆಳಿದರೆ ಸರಕಾರ ಇಲ್ಲ ಎಂದು ಮಾತನಾಡುತ್ತಾರೆ. ರೈಲ್ವೆ ಕೆಲಸ ನಿಂತಿದ್ದು ಈಗಾಗಲೆ ನಾನು 2 ತಿಂಗಳ ಹಿಂದೆ ಇದರ ಬಗ್ಗೆ ಪ್ರಸ್ತಾಪಿಸಿ ತಳಕಲ್ಲ ನಿಂದ ಕುಷ್ಟಗಿ ವರೆಗೆ ಒಟ್ಟು 58 ಕೀಮಿ ಈಗಾಗಲೆ ರೈಲ್ವೆ ಕೆಲಸ ಪ್ರಾರಂಭವಾಗುತ್ತಿದೆ. ಮತ್ತು ತಳಕಲ್ ಇಂದ ಕುಷ್ಟಗಿ ವರೆಗೆ ಒಟ್ಟು 16 ಅಡ್ಡ ರಸ್ತೆ ಗಳಿಗೆ 146 ಕೋಟಿ ರೂ ಮಂಜೂರು ಆಗಿದ್ದು ಅವುಗಳ ಕೆಲಸ ಕೂಡ ಈಗಾಗಲೆ ಪ್ರಾರಂಭವಾಗಿದೆ. ಮತ್ತು ತಳಕಲ್. ಕುಕನೂರ. ಸಂಗನಹಾಳ .ಯಲಬುಗರ್ಾ. ಹನಮಾಪುರ.ಲಿಂಗನಬಂಡಿ.ಕುಷ್ಟಗಿ ಒಟ್ಟು 7 ನಿಲ್ದಾಣಗಳು ಇವೆ ಇನ್ನು 1ವರ್ಷ 3ತಿಂಗಳಲ್ಲಿ ಎಲ್ಲಾ ಕೆಲಸ ಕಾರ್ಯಗಳು ಮುಗಿದು ಸಂಚಾರ ಆರಂಭವಾಗಲಿದೆ ಎಂದು ಹೇಳಿದರು. ನಾನು ಈ ಹಿಂದೆ 285 ಕೊಟಿ ರೂಪಾಯಿ ವೆಚ್ಚದಲ್ಲಿ ಕೆರೆ ತುಂಬಿಸುವ ಕೆಲಸ ಪ್ರಾರಂಭ ಮಾಡಿಸಿದೆ ಈಗಲೂ ಕೂಡಾ ಅದು ಪ್ರಾರಂಭವಾಗಿಲ್ಲ ಒಟ್ಟು 36 ಕೆರೆ ತುಂಬಿಸುವ ವಿಚಾರ ಮಾಡಿದ್ದೆ ಎಂದು ಹೆಳಿದರು. 

ತಾಲೂಕಿನ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬಾರದು ಎನ್ನುವದು ನನ್ನ ಇಂಗಿತವಾಗಿದೆ ಅದನ್ನು ಅರಿತುಕೊಂಡು ಹಾಲಿ ಶಾಸಕರು ಅಭಿವೃದ್ಧಿ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಜಿಪಂ ಸದಸ್ಯ ಹನುಮಂತಗೌಡ ಚಂಡೂರು, ಮುಖಂಡರಾದ ಕೇರಿಬಸಪ್ಪ ನಿಡಗುಂದಿ, ಬಿ ಎಮ್ ಶಿರೂರು, ಕಳಕಪ್ಪ ಕಂಬಳಿ, ರಿಯಾಜ್ ಖಾಜಿ, ಅಕ್ತರಸಾಬ ಖಾಜಿ,ಯಂಕಣ್ಣ ಯರಾಸಿ, ನಾರಾಯಣಪ್ಪ ಹರಪನಹಳ್ಳಿ, ಮಾಬುಸಾಬ ಮಕಾಂದರ, ಮೈಬುಸಾಬ ವಣಗೇರಿ, ರೇವಣೆಪ್ಪ ಹಿರೇಕುರುಬರ, ರೇವಣೆಪ್ಪ ಸಂಗಟಿ, ಶರಣಪ್ಪ ಗಾಂಜಿ, ಡಾ, ಶಿವನಗೌಡ ದಾನರಡ್ಡಿ, ಮಹಾಂತೇಶ ಗಾಣಿಗ, ವಿಜಯ ದಾಸರ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.