ಲೋಕದರ್ಶನ ವರದಿ
ಕುಮಟಾ: ದೇವತಾ ಅನುಗ್ರಹದಿಂದ ಸುವರ್ಣಕಾರರ ಕೋ-ಆಪರೇಟಿವ್ ಸೊಸೈಟಿ ಅಭಿವೃದ್ಧಿ ಪಥದತ್ತ ಮುನ್ನೆಡೆದಿದೆ. ತನ್ನ ಉತ್ತಮ ಸೇವೆ, ಸ್ನೇಹ, ಸೌಹಾರ್ದತೆ, ಆರ್ಥಿಕ ಭದ್ರತೆ ಜೊತೆಗೆ ಉತ್ತಮ ವ್ಯಾಪಾರಿ ಧೋರಣೆಯಿಂದಿ ಇಂದು ಪ್ರಥಮ ಶಾಖೆ ಯಶಸ್ಸಿನ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ಈ ಬ್ಯಾಂಕ್ ಮುಂದಿನ ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಆಗಿ ಹೊರಹಮ್ಮಲಿ ಎಂದು ಶ್ರೀ ಕ್ಷೇತ್ರ ಕಕರ್ಿ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರಿ ಭಾರತೀ ಮಹಾಸ್ವಾಮಿಜಿ ನುಡಿದರು.
ಶ್ರೀಗಳು ರವಿವಾರ ಪಟ್ಟಣದ ನೆಲ್ಲೀಕೇರಿಯ ಹೊಸ ಬಸ್ಸ್ಟ್ಯಾಂಡ್ ಎದುರು ಉಪ್ಪಾರಕೇರಿ ರಸ್ತೆಯಲ್ಲಿರುವ ಸುವರ್ಣಕಾರರ ಕೋ-ಆಪರೇಟಿವ್ ಸೊಸೈಟಿಯ ಮೊದಲ ಶಾಖೆಯನ್ನು ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ಜಿಲ್ಲೆಯಲ್ಲಿಯೇ ಹೆಸರು ಮಾಡಿರುವ ಕುಮಟಾದ ಸುವರ್ಣಕಾರರ ಕೋ-ಆಪರೇಟಿವ್ ಸೊಸೈಟಿ ಜನಸಾಮಾನ್ಯರಿಗೆ ಆರ್ಥಿಕ ಸೇವಾ ಸೌಲಭ್ಯಗಳ ಜೊತೆ ಹಣ ಉಳಿತಾಯ ಹಾಗೂ ಅದರ ಬಡ್ಡಿಯಿಂದ ಪ್ರಾಪ್ತಿಯಾಗುವ ಹಣದಿಂದ ಜೀವನ ನಿರ್ವಹಿಸಲು ಉಪಕಾರವಾಗುತ್ತದೆ. ಅಲ್ಲದೇ ಔದ್ಯೋಗಿಕರಣ ಅಭಿವೃದ್ಧಿಯಲ್ಲಿ ಹಣಕಾಸು ಸಂಸ್ಥೆಗಳ ಪಾತ್ರ ಬಹುಮುಖ್ಯವಾಗಿದೆ. ಅದರಂತೆ ಸುವರ್ಣಕಾರರ ಕೋ-ಆಪರೇಟಿವ್ ಸೊಸೈಟಿ ಕೂಡ ಹಲವಾರು ಸಣ್ಣ-ಪುಟ್ಟ ಉದ್ಯಮಗಳಿಗೆ ಆರ್ಥಿಕ ನೆರವು ಒದಗಿಸುವ ಮೂಲಕ ಅಭಿವೃದ್ಧಿ ಪಥದತ್ತ ಮುನ್ನೆಡಿದಿದೆ. ಕುಮಟಾ ಪಟ್ಟಣ ಬ್ಯಾಂಕ್ ವ್ಯವಹಾರಕ್ಕೆ ಸೂಕ್ತ ಸ್ಥಳವಾಗಿದೆ. ಉದ್ಯಮವನ್ನು ಪ್ರಾರಂಭಿಸಲು ಸಾಲ ಪಡೆಯವವರ ಸಂಖ್ಯೆಯೂ ಇಲ್ಲಿ ಸಾಕಸ್ಟು ಇದೆ. ಜನರು ಗಳಿಸಿದ ಹಣವನ್ನು ಬ್ಯಾಂಕ್ ಮೂಲಕ ವ್ಯವಹರಿಸಿ ಲಾಭ ಪಡೆದುಕೊಳ್ಳಬೇಕು. ಬ್ಯಾಂಕ್ ಎಂದರೆ ಠೇವಣಿ ಇಡುವವರು ಹಾಗೂ ಸಾಲ ಪಡೆಯುವವರು ಸಮಾನವಾಗಿ ಇರುತ್ತಾರೆ. ಸಾಲ ಪಡೆದುಕೊಂಡ ಸಾಲಗಾರರು ಸಕಾಲದಲ್ಲಿ ಸಾಲ ತುಂಬಿ ಹೆಚ್ಚಿನ ಹೊರೆಯನ್ನು ತಗ್ಗಿಸಿಕೊಂಡು ಸಭ್ಯ ಗ್ರಾಹಕರಾಗಿ ವ್ಯವರಿಸಬೇಕು. ಹಣಕಾಸಿನ ಸಂಸ್ಥೆಗಳನ್ನು ನಡೆಸುವವರ ಹಸ್ತ ಸ್ವಚ್ಚವಾಗಿರಬೇಕು. ಗ್ರಾಹಕರು ಬ್ಯಾಂಕಿನ ಪಾರದರ್ಶಕ ವ್ಯವಹಾರವನ್ನು ಮೆಚ್ಚಿಕೊಂಡು ಬ್ಯಾಂಕಿನಡೆ ವಲವು ತೋರಬೇಕು. ಹೀಗಾದಾಗ ಬ್ಯಾಂಕಿನ ವ್ಯವಹಾರಿಕ ಸಮತೋಲನಕ್ಕೆ ಧಕ್ಕೆ ಬರಲಾರದು. ಇಲ್ಲಿನ ಸುವರ್ಣಕಾರರ ಕೋ-ಆಪರೇಟಿವ್ ಸೊಸೈಟಿಯ ಅಭಿವೃದ್ಧಿ ಪಥದತ್ತ ಮುನ್ನೆಡೆದು ಉತ್ತರೋತ್ತರ ಅಭಿವೃದ್ಧಿಸಾಧಿಸಲಿ. ಅಲ್ಲದೇ ಹೆಚ್ಚಿನ ಗ್ರಾಹಕರು ಈ ಬ್ಯಾಂಕಿನ ಸೌಲಭ್ಯವನ್ನು ಪಡೆಯುವಂತಾಗಿಲಿ ಎಂದು ಶುಭಹಾರೈಸಿದರು.
ಸುವರ್ಣಕಾರರ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಮಧುಸೂದನ ಶೇಟ ಮಾತನಾಡಿ, 16 ವರ್ಷದ ತನ್ನ ಅಧ್ಯಕ್ಷ ಅಧಿಕಾರ ಅವಧಿಯಲ್ಲಿ ಬ್ಯಾಂಕ್ ಅಸಾಧಾರಣ ಪ್ರಗತಿ ಸಾಧಿಸಿದೆ. ಬ್ಯಾಂಕಿನ ಪ್ರಗತಿನಪಥದಲ್ಲಿ ಸಮಾಜದ ಕೆಲವರು ಪರ್ಯಾಯ ಸಂಸ್ಥೆಯನ್ನು ಹುಟ್ಟುಹಾಕಲು ಪ್ರಯತ್ನಿಸಿದರು. ಕೆಲ ಸಮಯ ಬ್ಯಾಂಕ್ ನಡೆಸುವುದು ಒಂದು ಸವಾಲಾಗಿ ಸ್ವೀಕರಿಸಿ ಬ್ಯಾಂಕ್ ಆರ್ಥಿಕವಾಗಿ ಸಬಲಗೊಳಿಸಿದ ಅಭಿಮಾನ ನನಗಿದೆ. ಸಮಾಜದವರಲ್ಲದೇ ಇತರೇ ಸಮಾಜದವರು ಬ್ಯಾಂಕ್ನಲ್ಲಿ ಹಣತೊಡಗಿಸಿದ್ದಾರೆ. ಅವರಿಗೆ ಅಭಿನಂಧಿಸುತ್ತೇನೆ. ಸಮಾಜದಲ್ಲಿ ಟೀಕಿಸುವವರ ಸಂಖ್ಯೆ ಕಡಿಮೆಯೇನು ಇಲ್ಲ. ಇಂತವರು ಇದ್ದರೆ ನಮಗೆ ಎಚ್ಚರಿಕೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ ಇಂದು ಬ್ಯಾಂಕ್ ಶೇರುದಾರರ ಸಂಖ್ಯೆ 20,08,250 ಇದ್ದು, ಕಾದಿಟ್ಟ ನಿಧಿ ಮತ್ತು ಇತರೇ ನಿಧಿಗಳು 4,92,45,287 ಕೋಟಿ ರೂಪಾಯಿ ಇದೆ. 29,09,48,308 ಕೋಟಿ ಠೇವುಗಳನ್ನು ಹೊಂದಿದ್ದೇವೆ. ಸಾಲ ಮತ್ತು ಮುಂಗಡ 22,26,71,572 ಕೋಟಿ ಇದೆ. ದುಡಿಯುವ ಬಂಡವಾಳ 34,45,70,395 ಕೋಟಿ ಇದೆ. ಬ್ಯಾಂಕ್ ಒಟ್ಟೂ 1,13,46,490 ಕೋಟಿ ಲಾಭಗಳಿಸಿದೆ. ಇದೊಂದು ಹೆಮ್ಮೆ ಪಡುವ ಸಾಧನೆ ಎಂದು ಮಧುಸೂದನ ಶೇಟ ಹರ್ಷ ವ್ಯಕ್ತಪಡಿಸಿದರು. ನನ್ನ ಅವಧಿಯಲ್ಲಿ ಇನ್ನೂ 4 ಹೊಸ ಶಾಖೆಗಳನ್ನು ಪ್ರಾರಂಭಿಸಿ ಆರ್ಥಿಕ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲನ್ನು ಸ್ತಾಪಿಸಲು ಯೋಜನೆ ಹೊಂದಲಾಗಿದೆ. ಆಡಳಿತ ಸಮಿತಿ ಸದಸ್ಯರ ಹಾಗೂ ಸಿಬ್ಬಂಧಿ ವರ್ಗದ ಸಹಕಾರದಿಂದ ಬ್ಯಾಂಕ್ ಇಷ್ಟೊಂದು ಉನ್ನತ ಮಟ್ಟಕ್ಕೇರಲು ಸಾಧ್ಯವಾಗಿದೆ ಎಂದರು. ಅಲ್ಲದೇ ಬ್ಯಾಂಕಿನ ಅಭಿವೃದ್ಧಿಗೆ ಈ ಹಿಂದೆ ಶ್ರಮಿಸಿದ ಮಹನೀಯರನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಸುರೇಶ ಶ್ರೀನಿವಾಸ ಶೇಟ ಅವರು ನಿಧನರಾದ ಹಿನ್ನೆಲೆಯಲ್ಲಿ ಎಲ್ಲರು ಮೌನಾಚರಣೆ ಮೂಲಕ ಶೃದ್ದಾಂಜಲಿ ಸಲ್ಲಿಸಿದರು. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಸುವರ್ಣಕಾರರ ಕೋ-ಆಪರೇಟಿವ್ ಸೊಸೈಟಿಯ ಮೊದಲ ಶಾಖೆಯ ಉದ್ಘಾಟನೆಗೆ ಆಗಮಿಸಿದ ಶ್ರೀಗಳನ್ನು ಪೂರ್ಣ ಕುಂಭ ಹೊತ್ತ ಮಹಿಳೆಯರಿಂದ ಭವ್ಯ ಸ್ವಾಗತ ದೊರೆಯಿತು. ಸಹಕಾರ ಸಂಘಗಳ ಹಿರಿಯ ಅಧಿಕಾರ ಜಿ ಕೆ ಭಟ್, ಕಟ್ಟಡ ಮಾಲಕ ಮಹಾಭಲೇಶ್ವರ ಶೇಟ, ಜ್ಯುವೆಲ್ಲರಿ ಮಾಲಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ದೈವಜ್ಞ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಸೊಸೈಟಿಯ ಮಾಜಿ ವ್ಯವಸ್ಥಾಪಕ ಉಲ್ಲಾಸ ಶೇಟ ಸ್ವಾಗತಿಸಿದರು, ಸೊಸೈಟಿಯ ಉಪಾಧ್ಯಕ್ಷ ಶ್ರೀಧರ ವಿ ಶೇಟ ನಿರೂಪಿಸಿದರು, ವ್ಯವಸ್ಥಾಪಕ ವಸಂತ ಶೇಟ ವಂದಿಸಿದರು. ಸುವರ್ಣಕಾರರ ಕೋ-ಆಪರೇಟಿವ್ ಸೊಸೈಟಿ ನಿದರ್ೇಶಕರಾದ ಶ್ರೀಧರ ಎಂ ಶೇಟ, ವಿನಾಯಕ ಆರ್ ಶೇಟ, ಪ್ರವೀಣ ಆರ್ ಶೇಟ, ಮಾರುತಿ ಎಚ್ ಶೇಟ, ರತ್ನಾಕರ ಡಿ ಶೇಟ, ನಾಗರಾಜ ಎಂ ಶೇಟ, ಪ್ರಶಾಂತ ಪಿ ಶೇಟ, ಗಣೇಶ ಎಂ ಶೇಟ, ಪ್ರಶಾಂತ ಎನ್ ಶೇಟ, ಸುಬ್ರಹ್ಮಣ್ಯ ಆರ್ ಶೇಟ, ಮಂಜುನಾಥ ಎನ್ ಶೇಟ, ಕಾವೇರಿ ಎನ್ ಶೇಟ, ಜಯಾ ಪ್ರಕಾಶ ಶೇಟ ಹಾಗೂ ಬ್ಯಾಂಕ್ನ ಸಿಬ್ಬಂದಿ ವರ್ಗದವರು ಸಹಕರಿಸಿದರು.