ವೃಂದಾವನವನ್ನು ಧ್ವಂಸ: ಐವರು ಅಂತರ್ ರಾಜ್ಯ ನಿಧಿಗಳ್ಳರ ಬಂಧನ

ಲೋಕದರ್ಶನ ವರದಿ

ಗಂಗಾವತಿ 21: ತಾಲ್ಲೂಕಿನ ಆನೇ ಗುಂದಿಯಲ್ಲಿರುವ  ನವವೃಂದಾವನ ವ್ಯಾಸರಾಜ ತೀರ್ಥರ ಮೂಲ ವೃಂದಾವನವನ್ನು ಧ್ವಂಸಗೊಳಿಸಿದ ಆಂಧ್ರ್ರ ರಾಜ್ಯದ ನಿಧಿ ಕಳ್ಳರನ್ನು ಬಂಧಿ ಸುವಲ್ಲಿ  ಕೊಪ್ಪಳ ಪೋಲೀ ಸರ ಮಿಂಚಿನ ಕಾರ್ಯಾಚರಣೆಯ ಬಲೆಗೆ ಸಿಕ್ಕಿ ಹಾಕಿಕೊಂಡಿದ್ದಾರೆ.

ಆರೋಪಿಗಳ ಪತ್ತೆಗಾಗಿ ರಚಿಸಲಾಗಿದ್ದ ವಿಶೇಷ ತನಿಖಾದಳವು ಆಂದ್ರ ಪ್ರದೇಶದ ತಾಡಪತ್ರಿಯ ವಿವಿಧ ಸ್ಥಳಗಳಲ್ಲಿ ಅತ್ಯಂತ ಜಾಗೂರೂಕತೆಯಿಂದ ಬಂಧಿಸಿ ಕರೆತಂದಿದ್ದಾರೆ. 

ಈ ಬಗ್ಗೆ ನಗರದ ಡಿವೈಎಸ್ಪಿ ಕಛೇರಿಯಲ್ಲಿ ಭಾನುವಾರದಂದು ಐಜಿಪಿ ನಂಜುಂಡಸ್ವಾಮಿ, ಎಸ್ಪಿ ರೇಣುಕಾ ಸುಕುಮಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ನಿಧಿಯಾಸೆಗಾಗಿ ಆಂಧ್ರ ಮೂಲದ ಅಂತರ ರಾಜ್ಯದ ಕಳ್ಳರಾಗಿದ್ದಾರೆ. ಇವರಲ್ಲಿ ಪೊಲ್ಲಾರಿ ಮುರಳಿ ಮನೋ ಹರರೆಡ್ಡಿ, ಡಿ. ಮನೋಹರ  ಕೆ.ಕುಮ್ಮಟಕೇಶವ, ಬಿ. ವಿಜಯಕುಮಾರ, ಟಿ. ಬಾಲನರಸಯ್ಯ  ತಂಗಲಿ ಅರ್ಚಕ, ಶ್ರೀನಿವಾಸ ರೆಡ್ಡಿ ಈ 6 ಜನ ರನ್ನು ದಸ್ತಗಿರಿ ಮಾಡಲಾಗಿದೆ. ಇನ್ನೊಬ ಆರೋಪಿ ತಲೆ ಮರೆಸಿಕೊಂಡಿದ್ದು,  ಆರೋಪಿ ಗಾಗಿ ಶೋಧಕಾರ್ಯ ಕಾರ್ಯ ನಡೆಸಲಾಗಿದೆ. ಈ ಆರೋಪಿಗಳು ವೃಂದಾವನದ ಶಿಲಾ ಕಲ್ಲುಗಳನ್ನು ಕಿತ್ತು ಹಾಕಿದ್ದು, ಆದರೆ ಮೂಲ ವೃಂದಾವನ ಕಿತ್ತಲು ಸಾಧ್ಯವಾ ಗಿಲ್ಲ. ನಿಧಿಗಳಿಗಾಗಿ ಆರೋಪಿ ಗಳು ಈ ಕೃತ್ಯ ನಡೆಸಿರುವುದು ಬಯಲಾಗಿದ್ದು, ಇನ್ನೂ ತನಿಖೆಯನ್ನು ನಡೆಸಲಾಗುತ್ತಿದೆ ಎಂದರು.

  ಐತಿಹಾಸಿಕ ಶ್ರದ್ಧಾ ಕೇಂದ್ರವಾಗಿರುವ ನವವೃಂದಾವನದ ವ್ಯಾಸರಾಜ ತೀರ್ಥರ ದ್ವಂಸ ಗೊಳಿಸಿದ  ಆರೋಪಿಗಳ ಪತ್ತೆ ಕಾರ್ಯ ಚರಣೆಗೆ ವೈಜ್ಞಾನಿಕವಾಗಿ ಮತ್ತು ವೃತ್ತಿಪರವಾಗಿ ತನಿಖೆ ನಡೆಸುವ ಮೂಲಕ ಪ್ರಕರಣದ ಆರೋ ಪಿಗಳನ್ನು ಹಿಡಿಯಲಾಗಿದೆ. 

ಸಾಮಾನು ವಶಕ್ಕೆ: ಧ್ವಂಸಕ್ಕೆ ಬಳಸಲಾಗಿದ್ದ 2 ಹಾರಿಗಳು, 3 ಕಬ್ಬಿಣದ ಚಾಣ, ಸಲಾಕೆ, ಸುತ್ತಿಗೆ, ಬುಟ್ಟಿ ಹಾಗೂ ಪಿಕಾಸಿ ಇನ್ನೋವಾ ಕಾರು (ಎಪಿ 21/ ಬಿಜೆ 6129) ಬಳಸಿದ್ದರು. ಇವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದರು.

ಐದು ತಂಡಗಳ ನೇತೃತ್ವ: ಆರೋಪಿಗಳ ಪತ್ತೆಗಾಗಿ ಐದು ವಿಶೇಷ ತಂಡಗಳನ್ನು ರಚನೆ ಮಾಡಿ, ತನಿಖೆಯನ್ನು ನಡೆಸ ಲಾಯಿತು, ತನಿಖಾಧಿಕಾರಿ ಗಂಗಾವತಿ ಸಿಪಿಐ ಸುರೇಶ ತಳವಾರ, ಕುಷ್ಟಗಿ ಸಿಪಿಐ ಚಂದ್ರಶೇಖರ, ಕಾರಟಗಿಯ ಪಿಎಸ್ಐ ಶರತ್ಚಂದ್ರ, ಕನಕಗಿರಿ ಪಿಎಸ್ಐ ವೀರಾರೆಡ್ಡಿ, ಕುಷ್ಟಗಿ ಪಿಎಸ್ಐ ವಿಶ್ವನಾಥ ಹಿರೇಗೌಡ್ರು, ಗಂಗಾವತಿ ಗ್ರಾಮೀಣ ಪಿಎಸ್ಐ ಪ್ರಕಾಶ ಮಾಳೆ ಸೇರಿದಂತೆ 46 ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

ತಂಡಗಳ ಯಶಸ್ವಿ ಕಾರ್ಯಚರಣೆಗೆ ಐಜಿಪಿ ನಂಜುಂಡಸ್ವಾಮಿ  ಮತ್ತು ಎಸ್ಪಿ ರೇಣುಕಾ ಸುಮಾರ್  ಶ್ಲಾಘನೀಯ ಜೊತೆಗೆ ವಿಶೇಷ ಬಹುಮಾನವನ್ನು ಘೋಷಿಸುತ್ತಾರೆ.