ಮೂಡಲಗಿ 10: 'ಉತ್ತಮ ಆರೋಗ್ಯ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆಗಳು ಅವಶ್ಯವಿದ್ದು, ಶಾಲೆ, ಕಾಲೇಜುಗಳಲ್ಲಿ ಕ್ರೀಡೆಗಳಿಗೆ ಆದ್ಯತೆ ನೀಡಬೇಕು' ಎಂದು ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆರ್.ಎ. ಶಾಸ್ತ್ರೀಮಠ ಹೇಳಿದರು.
ಇಲ್ಲಿಯ ಎಂಇಎಸ್ ಬಿ.ಪಿ.ಇಡಿ. ಹಾಗೂ ಎಂ.ಪಿ.ಇಡಿ ಸ್ನಾತಕೋತ್ತರ ಕೇಂದ್ರದ ಶಾಲಾ ಅಂತರ್ಗತ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾಥರ್ಿಗಳು ಮೊಬೈಲ್, ಫೇಸ್ಬುಕ್ ಚಾಟಿಂಗ್ಗಳಲ್ಲಿ ಕಾಲಹರಣ ಮಾಡುವ ಮೂಲಕ ಕ್ರೀಡೆಗಳಿಂದ ವಿಮುಖರಾಗುತ್ತಿರುವುದು ವಿಷಾದಿಸುವ ಸಂಗತಿಯಾಗಿದೆ. ಯುವಕರಲ್ಲಿ ಉತ್ಸಾಹ ಮತ್ತು ಕ್ರೀಯಾಶೀಲತೆ ಬೆಳೆಯಲು ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ದೈಹಿಕ ಬಲ, ಮಾನಸಿಕ ಆತ್ಮವಿಶ್ವಾಸ ವೃದ್ಧಿಸುವ ಕ್ರೀಡೆ ಮಾನವನಿಗೆ ಅತ್ಯುತ್ತಮ ವ್ಯಾಯಾಮ. ನಮ್ಮ ಹಿರಿಯರು ದೈಹಿಕ ಪರಿಶ್ರಮದಿಂದಲೇ ಗಟ್ಟಿ, ಜಟ್ಟಿಗಳಾಗಿದ್ದರು ಎಂದರು.
ಪ್ರಶಿಕ್ಷಣಾಥರ್ಿಗಳು ಕಲಿಕಾ ಅವಧಿಯಲ್ಲಿ ಶ್ರದ್ಧೆಯಿಂದ ಕಾರ್ಯನಿರ್ವಹಿಸಿ ವೃತ್ತಿ ಬದುಕಿನಲ್ಲಿ ಶಾಲಾ ಮಕ್ಕಳಲ್ಲಿ ಕ್ರೀಡೆಗಳ ಬಗ್ಗೆ ಆಸಕ್ತಿಯನ್ನು ಬೆಳೆಸಬೇಕು ಎಂದರು.
ಮುಖ್ಯ ಅತಿಥಿ ಬಾಲಶೇಖರ ಬಂದಿ ಮಾತನಾಡಿ ಕ್ರೀಡಾ ಸಂಘಟನೆಗಳಿಂದ ಸೌಹಾರ್ದತೆ ಮತ್ತು ಏಕತೆ ಬೆಳೆಯುತ್ತದೆ. ಕ್ರೀಡೆಗಳು ಸಹ ಮನುಷ್ಯನಿಗೆ ಒಳ್ಳೆಯ ಗುಣಗಳನ್ನು ಬೆಳೆಸುತ್ತವೆ ಎಂದರು.
ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯ ಎಂ.ಕೆ. ಕಂಕಣವಾಡಿ ವಿದ್ಯಾಥರ್ಿಗಳಿಗೆ ಸಲಹೆಗಳನ್ನು ನೀಡಿದರು.
ವೇದಿಕೆಯಲ್ಲಿ ಬಿ.ಕೆ. ಬಡಗನ್ನವರ, ಎಲ್.ಬಿ. ಮನ್ನಾಪುರ, ವೈ.ಎಸ್. ಭರಮನ್ನವರ ಇದ್ದರು.
ರಮೇಶ ನಾಯ್ಕ್ ಸ್ವಾಗತಿಸಿದರು, ದೇವೇಂದ್ರ ಪಾತ್ರೋಟ್ ನಿರೂಪಿಸಿದರು, ಬಿ.ಎಸ್. ಕಂಬಾರ ವಂದಿಸಿದರು.
ಐದು ತಂಡಗಳ ಮಧ್ಯದಲ್ಲಿ ಜರುಗಿದ ದೇಸಿ ಕ್ರೀಡೆ ಕಬಡ್ಡಿ ಟೂನರ್ಿಯು ಗಮನಸೆಳೆಯಿತು.