ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷರಾಗಿ ದೇಸಾಯಿ ಆಯ್ಕೆ

ಬಾಗಲಕೋಟೆ: ಕನರ್ಾಟಕ ರಾಜ್ಯ ಸಕರ್ಾರಿ ವೈದ್ಯಾಧಿಕಾರಿಗಳ ಸಂಘದ (ಕೆಜೆಎಂಇಎ) ರಾಜ್ಯ ಅಧ್ಯಕ್ಷರಾಗಿ ಬಾಗಲಕೋಟೆ ಜಿಲ್ಲೆಯ ಡಿಎಚ್ಇ ಡಾ.ಅನಂತ ದೇಸಾಯಿ ಆಯ್ಕೆಯಾಗಿದ್ದಾರೆ.

ಈಚೆಗೆ ನಡೆದ ರಾಜ್ಯ ಸಂಘಟನೆಯ ಚುನಾವಣೆಯಲ್ಲಿ ಡಾ.ಅನಂತ ದೇಸಾಯಿ ಅಧ್ಯಕ್ಷ ಸ್ಥಾನಕ್ಕೆ ಸ್ಪಧರ್ೆ ಮಾಡಿದ್ದರು. ಸಂಘದ ಇತಿಹಾಸದಲ್ಲಿಯೇ ಇದೇ ಮೊದಲು 359 ಮತಗಳ ದೊಡ್ಡ ಅಂತರದಿಂದ ಗೆಲವು ಸಾಸಿದ ಹೆಗ್ಗಳಿಕೆಗೆ ಮತ್ತು ಉತ್ತರ ಕನರ್ಾಟಕ ಭಾಗದಿಂದ ಅಧ್ಯಕ್ಷಸ್ಥಾನದ ಪಟ್ಟಕ್ಕೆ ಏರಿದ ಮೊದಲಿಗ ಎನ್ನುವ ಹಿರಿಮೆಗೆ ಡಾ.ದೇಸಾಯಿ ಪಾತ್ರರಾಗಿದ್ದಾರೆ.

ಗುತ್ತಿಗೆದಾರದ ಮೇಲೆ ಆರೋಗ್ಯ ಇಲಾಖೆಯಲ್ಲಿ ಸೇವೆ ಆರಂಭಿಸಿದ ಡಾ.ಅನಂತ ದೇಸಾಯಿ ಅವರು ನಂತರ ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರ. ರಾಜ್ಯಮಟ್ಟದ ಅತ್ತುತ್ತಮ ವಿಭಾಗೀಯ ವೈದ್ಯಾಧಿಕಾರಿ ಪ್ರಶಸ್ತಿ, ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿದ್ದಾಗ ಕಾಯ ಕಲ್ಪದಡಿಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.