ಫೆ.22ರಿಂದ ರನ್ನ ಉತ್ಸವಕ್ಕೆ ಸಹಕಾರ ನೀಡಲು ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮನವಿ

Deputy Divisional Officer Shweta Beedikar's request to cooperate with Runna Utsav from February 22

 ಫೆ.22ರಿಂದ ರನ್ನ ಉತ್ಸವಕ್ಕೆ ಸಹಕಾರ ನೀಡಲು ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮನವಿ  

ಮಹಾಲಿಂಗಪುರ 08: ಸಮೀಪದ ರನ್ನಬೆಳಗಲಿ ಪಟ್ಟಣದ ಬಂದ ಲಕ್ಷ್ಮಿ ದೇವಸ್ಥಾನ ಆವರಣದಲ್ಲಿ ಶುಕ್ರವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆವಹಿಸಿದ ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಫೆ.22ರಂದು ನಡೆಯುವ ರನ್ನ ಉತ್ಸವದ ಮೊದಲ ದಿನದ ಕಾರ್ಯಕ್ರಮದ ಯಶಸ್ಸಿಗೆ ರನ್ನಬೆಳಗಲಿ ಪಟ್ಟಣದ ಎಲ್ಲ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿ, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದಿಂದ ಉತ್ಸವದ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ.  

ಉತ್ಸವದ ಯಶಸ್ಸಿಗೆ ಪಟ್ಟಣದ ಸಾರ್ವಜನಿಕರು ಮತ್ತು ಸ್ಥಳೀಯ ಪ,ಪಂ ಸಹಕಾರ ಬಹಳ ಮುಖ್ಯ,ಉತ್ಸವದ ಯಶಸ್ಸಿಗೆ ಕೈಗೊಳ್ಳಬೇಕಾದ ಸಲಹೆ ಸೂಚನೆ ನೀಡಿದರೆ ಜಿಲ್ಲಾಧಿಕಾರಿ ಗಮನಕ್ಕೆ ತಂದು ಉತ್ಸವದ ಯಶಸ್ಸಿಗೆ ಶ್ರಮಿಸುತ್ತೇವೆ ಈಗಾಗಲೇ ರನ್ನ ವೈಭವದ ಶೇಕಡ 50 ರಷ್ಟು ಕೆಲಸ ಕಾರ್ಯಗಳು ಪೂರ್ಣಗೊಂಡಿವೆ ಫೆ 23 ಮತ್ತು 24 ಕ್ಕೆ ಮುಧೋಳದಲ್ಲಿ ಜರುಗುವುದು ಎಂದರು. 

ರಥಯಾತ್ರೆಗೆ ಚಾಲನೆ: ಫೆ.11ರಂದು ಮಹಾಕವಿಯ ರನ್ನನ ಜನ್ಮ ಸ್ಥಳವಾದ ರನ್ನಬೆಳಗಲಿಯಿಂದಲೇ ರನ್ನ ರಥಯಾತ್ರೆಗೆ ಚಾಲನೆ ನೀಡುತ್ತೇವೆ.11 ರಿಂದ ರನ್ನ ರಥಯಾತ್ರೆ ಮುಧೋಳ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಸಂಚರಿಸಿ ಫೆ.21ರಂದು ಸಂಜೆ ಮರಳಿ ರನ್ನಬೆಳಗಲಿ ಪಟ್ಟಣಕ್ಕೆ ಬರಲಿದೆ ಎಂದರು. 

ರನ್ನ ಪ್ರತಿಷ್ಠಾನದ ಸದಸ್ಯ ಸಿದ್ದರಾಮ ಶಿವಯೋಗಿಗಳು ಪ್ರಾಸ್ತಾವಿಕವಾಗಿ ಮಾತನಾಡಿ ಮುಧೋಳ ಮತ್ತು ರನ್ನಬೆಳಗಲಿ ರನ್ನ ವೈಭವ ಜರುಗುತ್ತಿದ್ದು.ಯಾವುದೇ ಭೇದ ಭಾವಗಳಲ್ಲಿದೆ ಎಲ್ಲಾ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ರನ್ನ ಬೆಳಗಲಿಯಲ್ಲಿ ಜರಗುವಂತಾಗಬೇಕು ಎಂದು ಹೇಳಿದ್ದರು.ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ಸಿಗುವಂತಾಗಬೇಕೆಂದು,ನಮ್ಮೂರ ಜಾತ್ರೆಯಂತೆ ಕುಂದು ಕೊರತೆಗಳಿಲ್ಲದಂತೆ ನಾವೆಲ್ಲ ಭೇದ ಭಾವ ಮರೆತು ಒಗ್ಗಟ್ಟಾಗಿ ರನ್ನ ವೈಭವ ಹಬ್ಬವನ್ನು ಯಶಸ್ವಿಗೊಳಿಸೋಣ ಈ ಬಾರಿ ರಾಜ್ಯ, ಜಿಲ್ಲಾ, ತಾಲೂಕ ಮಟ್ಟದಲ್ಲಿ ಮೂರು ರನ್ನ ರಥಗಳು ರನ್ನ ರಥ ಯಾತ್ರೆಗೆ ಸಿದ್ದುಗೊಳ್ಳುತ್ತೇವೆ ಎಂದು ತಿಳಿಸಿದರು. 

ಜಮಖಂಡಿ ಡಿವೈಎಸ್‌ಪಿ ಶಾಂತವೀರ ಮಾತನಾಡಿ, ಉತ್ಸವದ ಉದ್ಘಾಟನೆ ರನ್ನಬೆಳಗಲಿಯಲ್ಲಿ ಜರುಗುವುದರಿಂದ ಮಹಾಲಿಂಗಪುರ ಮತ್ತು ಮುಧೋಳ ರಸ್ತೆ ಭಾಗದಲ್ಲಿ ಪ್ರತ್ಯೇಕ ವಾಹನ ಪಾಕಿಂರ್ಗ್ ವ್ಯವಸ್ಥೆ ಮಾಡುತ್ತೇವೆ.ಜೊತೆಗೆ ಪ ಪಂಚಾಯಿತಿನವರು ಪಾಕಿಂರ್ಗ್ ಜಾಗೆಯಲ್ಲಿ ಬೆಳಕು ಮತ್ತು ಸಿ.ಸಿ ಕ್ಯಾಮೆರಾ ವ್ಯವಸ್ಥೆ ಮಾಡಬೇಕು.ಅಂದು ಬೆಳಗ್ಗೆಯಿಂದ ಸಂಚಾರ ಮಾರ್ಗ ಬದಲಿಸಿ ಉತ್ಸವಕ್ಕೆ ತೊಂದರೆಯಾಗದಂತೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್‌ ಏರಿ​‍್ಡಸುತ್ತೇವೆ. ಸಾರ್ವಜನಿಕರು,ಪಟ್ಟಣದ ನಾಗರಿಕರು ಪಾಕಿಂರ್ಗ್ ಜಾಗೆಯಲ್ಲಿಯೇ ತಮ್ಮ ವಾಹನ ನಿಲ್ಲಿಸಿ ಸಹಕಾರ ನೀಡಬೇಕು ಎಂದರು.  

ಈ ಸಂದರ್ಭದಲ್ಲಿ ಮುಧೋಳ ತಹಶೀಲ್ದಾರ್ ಮಹಾದೇವ ಸನಮೂರಿಮುಧೋಳ ಸಿಪಿಐ ಎಂ.ಎನ್‌. ಶಿರಹಟ್ಟಿ,ಪಿಎಸೈ ಅಜೀತ ಪಾಟೀಲ,ರಬಕವಿ-ಬನಹಟ್ಟಿ ತಹಶೀಲ್ದಾರ ಗೀರೀಶ ಸ್ವಾದಿ,ಸದಾಶಿವ ಗೂರೂಜಿ, ಪಟ್ಟಣದ ಹಿರಿಯರಾದ ಚಿಕ್ಕಪ್ಪ ನಾಯಕ,ಮಹಾಲಿಂಗಪ್ಪ ಕೊಣ್ಣೂರ,ಸದಾಶಿವ ಸಂಕ್ರಟ್ಟಿ,ರಾಚಯ್ಯ ಸಾಲಿಮಠ,ಮೋನಪ್ಪ ಲೋಹಾರ,ಶಿವಪ್ಪ ಮಂಟೂರ, ಮಹಾದೇವಪ್ಪ ಮುರನಾಳ,ಶಿವನಗೌಡ ಪಾಟೀಲ,ಪಂಡಿತ ಪೂಜಾರಿ,ಸಿದ್ದುಗೌಡ ಪಾಟೀಲ,ಪ್ರವೀಣ ಪಾಟೀಲ, ಸದಾಶಿವ ಸಂಕ್ರಟ್ಟಿ, ಸಂಗಪ್ಪ ಅಮಾತಿ,ಯಮನಪ್ಪ ದೊಡಮನಿ,ಮುತ್ತಪ್ಪ ನಾಯಕ,ಚನ್ನಪ್ಪ ಜಾಲೀಕಟ್ಟಿ,ಲಕ್ಕಪ್ಪ ಹಂಚಿನಾಳ,ಈರ​‍್ಪ ಕಿತ್ತೂರ, ಮಹಾದೇವ ಹಾದಿಮನಿ,ಕೆ ಎ ಧಡೂತಿ,ಸಿದ್ದು ಸಾಂಗ್ಲಿಕರ, ರವಿಕುಮಾರ ಮೇತ್ರಿ,ಭೀಮರಾವ ಕಾಳವ್ವಗೋಳ, ಪಂಡಿತ ಪೂಜೇರಿ,ರಾಘವೇಂದ್ರ ನೀಲನ್ನವರ ಸೇರಿದಂತೆ ಪ.ಪಂ ಸದಸ್ಯರು, ಮುಧೋಳ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.