ಲೋಕದರ್ಶನ ವರದಿ
ಬೈಲಹೊಂಗಲ ಜುಲೈ 11: ಪಟ್ಟಣದ ಶ್ರೀರಾಮ ಸೇನಾ ಹಿಂದೂಸ್ತಾನ ಘಟಕದ ವತಿಯಿಂದ ಪಟ್ಟಣದ ಇಂದಿರಾ ನಗರ, ಗೊಲ್ಲರ ಕಾಲನಿಯಲ್ಲಿ ಡೆಂಗ್ಯೂ, ಮಲೇರಿಯಾ ಮುನ್ನೆಚ್ಚರಿಕೆಯ ಕ್ರಮವಾಗಿ ಉಚಿತ ಲಸಿಕೆ ನೀಡಲಾಯಿತು.
ಇಂದಿರಾ ನಗರದ ವಿಠ್ಠಲ ದೇವ ಮಂದಿರದಲ್ಲಿ ಪುರಸಭೆ ಸದಸ್ಯ ವಿಜಯ ಬೋಳಣ್ಣವರ, ಮಾಜಿ ಸದಸ್ಯ ಬಸವರಾಜ ಕಲಾದಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜನರ ಆರೋಗ್ಯದ ಹಿತದೃಷ್ಠಿಯಿಂದ ಸಂಘಟಣೆ ಮಾಡುತ್ತಿರುವ ಕಾರ್ಯ ಶ್ಲಾಘಣೀಯ ಎಂದರು.
ಪುರಸಭೆ ಸದಸ್ಯ ಉಳವಪ್ಪ ಬಡ್ಡಿಮನಿ, ಪಾಂಡಪ್ಪ ಇಂಚಲ, ರಾಜು ಬಡಿಗೇರ, ಬೋವಿ ಸಮಾಜದ ಮುಖಂಡ ಪ್ರಕಾಶ ಕೋಟಬಾಗಿ, ಎಸ್ಡಿಎಂಸಿ ಅಧ್ಯಕ್ಷ ಸುರೇಶ ಮದಲಬಾಂವಿ, ಕೆಂಪಣ್ಣ ಯರಮಳ್ಳಿ, ಸಂಘಟಣೆ ತಾಲೂಕ ಅಧ್ಯಕ್ಷ ಸಾಯಿರಾಮ ಜಂಬಗಿ, ನಗರ ಘಟಕ ಅಧ್ಯಕ್ಷ ವಿಜಯ ಪೂಜೇರಿ, ವಿಠ್ಠಲ ಬೆಳ್ಳಿಕಟ್ಟಿ, ರವಿ ಸವಟಗಿ, ಸಾಗರ ಹುಲಕುಂದ, ರಮೇಶ್ ನೀಲಗಾರ, ಸೊಮು ಪೂಜೇರಿ, ಪ್ರವೀಣ್ ಗೊಲ್ಲರ, ಉಮೇಶ ಗೊಲ್ಲರ ಹಾಗ ನೂರಾರು ಕಾರ್ಯಕರ್ತರು ಇದ್ದರು. 5 ವರ್ಷದ ಮೆಲ್ಪಟ್ಟವರಿಗೆ ಮನೆ, ಮನೆ ತೆರಳಿ ಲಸಿಕೆ ನೀಡಲಾಯಿತು.