ಸರಕಾರಕ್ಕೆ ತೆರಿಗೆ ಪಾವತಿಸದೇ ಸರಕಾರಕ್ಕೆ ಮೋಸವೆಸಗಿದ್ದು ಕಾರಣ ಕಾನೂನು ರಿತ್ಯ ಸೂಕ್ತ ಕ್ರಮಗೋಳ್ಳಬೇಕು ಎಂದು ಆಗ್ರಹಿಸಿ

Demand that appropriate legal action should be taken as the government has cheated the government b

ಸರಕಾರಕ್ಕೆ ತೆರಿಗೆ ಪಾವತಿಸದೇ ಸರಕಾರಕ್ಕೆ ಮೋಸವೆಸಗಿದ್ದು ಕಾರಣ ಕಾನೂನು ರಿತ್ಯ ಸೂಕ್ತ ಕ್ರಮಗೋಳ್ಳಬೇಕು ಎಂದು ಆಗ್ರಹಿಸಿ  

ಮುದ್ದೇಬಿಹಾಳ  14 :  ತಾಲೂಕಿನ ನಾಗಬೇನಾಳ ಗ್ರಮದ ವ್ಯಾಪ್ತಿಯ ಮುರುಡೇಶ್ವರ ಪವರ ಹೌಸ ಲಿಮಿಟೆಡ. ಇದು ಸರಕಾರಕ್ಕೆ ತೆರಿಗೆ ಪಾವತಿಸದೇ ಸರಕಾರಕ್ಕೆ ಮೋಸವೆಸಗಿದ್ದು ಕಾರಣ ಆ ಪವರ ಹೌಸ್ ಬಗ್ಗೆ ಸಮಗ್ರ ತಮಿಖೆ ನಡೆಸಿ ಕಂಪನಿಯ ಮೇಲೆ ಕಾನೂನು ರಿತ್ಯ ಸೂಕ್ತ ಕ್ರಮಗೋಳ್ಳಬೇಕು ಎಂದು ಆಗ್ರಹಿಸಿ ಯುವ ಜನಸೇನೆ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ನೇತೃತ್ವದಲ್ಲಿ ಪಟ್ಟಣದ ತಾಲೂಕು ಪಂಚಾಯತ್ ಕಾರ್ಯಾಲಯದ ಎದುರಿಗೆ  ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಮೂರನೇ ಮುಕ್ತಾಯಗೊಂಡು ನಾಲ್ಕನೆ ದಿನಕ್ಕೆ ಮುಂದುವರೆದಿದೆ. ಈ ವೇಳೆ  ಯುವ ಜನ ಸೇನೆ ರಾಜ್ಯಾಧ್ಯಕ್ಷ  ಶಿವಾನಂದ ವಾಲಿ ಅವರು ಮಾಯನಾಡಿ ನಾಗಬೇನಾಳ. ಮುರುಡೇಶ್ವರ  ಪವರ.ಹೌಸ್ ಕಂಪನಿಯು  ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುತ್ತಿದ್ದು ವಿದ್ಯುತ ಉತ್ಪಾದನೆಯ ವಾಣಿಜ್ಯ ರಿಗೆಯನ್ನು ಸುಮಾರು 24 ವರ್ಷಗಳಿಂದ ತುಂಬದೆ ಸರಕಾರಕ್ಕೆ ಮೋಸ ಎಸಗಿರುವುದು ದಾಖಲೆಗಳಿಂದ ತಿಳಿದು ಬಂದಿದೆ ಆದರೇ ಈ ಬಗ್ಗೆ ಸರಕಾರಕ್ಕೆ ತೆರಿಗೆ ಪಾವತಿಸದೇ ಸರಕಾರಕ್ಕೆ ಮೋಸ ಮಾಡಿರುವ ಮುರುಡೇಶ್ವರ ಪವರ ಹೌಸ ಕಂಪನಿಯ ಮೇಲೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಾನೂನು ಕ್ರಮ ಕೈಗೊಳ್ಳೊವರೆಗೂ ಧರಣಿ ಸತ್ಯಾಗ್ರಹ ಹಿಂಪಡೆಯುವ ಪ್ರಶ್ನೇಯೇ ಇಲ್ಲ. ಈ ಬಗ್ಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎನ್ ಎಸ್ ಮಸಳಿಯವರು ಧರಣಿ ನಿರತ ಸ್ಥಳಕ್ಕೆ ಬೇಟಿ ನೀಡಿದ್ದು ಕೇವಲ ಸಾಂಕೇತಿಕವಾಗಿ ವಿನಃ ಯಾವೂದೇ ರೀತಿಯ ತನಿಖೆ ನಡೆಸುವಇಚ್ಚಾಸಕ್ತಿ ಅವರಲ್ಲಿ ಕಂಡುಬರುತ್ತಿಲ್ಲ. ಯಾವೂದೇ ತನಿಖೆಗೆ ಅರ್ಹರದಲ್ಲದವರನ್ನು ತನಿಖಾ ತಂಡ ನಿರ್ಮಿಸಿ ತನಿಖೆ ನಡೆಸುವುದರಿಂದ ಪ್ರಕರಣ ಮುಚ್ಚಿಹಾಕುವ ಹುನ್ನಾರ ನಡೆಯಬಹುದು ಕಾರಣ ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಓ) ಅವರ ನೇತೃತ್ವದ  ತನಿಖಾ ತಂಡ ತಯಾರಿಸಿ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷಗೊಳಪಡಿಸಬೇಕು ಎಂಬುದು ನಮ್ಮ ಮನವಿವಾಗಿದೆ ಕಾರಣ ನಮಗೆ ಸೂಕ್ತ ಭರವಸೆ ನ್ಯಾಯ ಸಿಗುವವರೆ ಹೋರಾಟ ಕೈಬಿಡುವ ಪ್ರಶ್ನೇಯೆ ಇಲ್ಲ ಎಂದರು. ಈ ವೇಳೆ  ಶಿವು ವನಕಿಹಾಳ, ರಾಜು ಮನಸಬಿನಾಳ ಮೌನೇಶ ನಾಗಬೇನಾಳ ರಫೀಕ ತೆಗ್ಗಿನಮನಿ, ಗುರು ತಂಗಡಗಿ ವಿರೇಶ ವಡ್ಡರ ಶೇಕಪ್ಪ ಚಲವಾದಿ, ಹಣಮಂತ ಗೌಂಡಿ, ಗಂಗು ಗಂಗನಗೌಡರ ಅಮರೇಶ ಯಂಕಂಚಿ, ಗಿರಿಯಪ್ಪ ತಳವಾರ ಸೇರಿದಂತೆ ಹಲವರು ಇದ್ದರು