ಹಳಿಯಾಳ: ಸ್ಥಳೀಯ ಸಕ್ಕರೆ ಕಾಖರ್ಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಮರ್ಿಕರು ಶುಕ್ರವಾರ ತಾಲೂಕಾ ಕಚೇರಿಗೆ ಹಾಗೂ ಪೊಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿದರು.
ತಹಶೀಲ್ದಾರ ವಿದ್ಯಾಧರ ಗುಳಗುಳಿ ಹಾಗೂ ಡಿವೈಎಸ್ಪಿ ಮೋಹನ ಪ್ರಸಾದ ಅವರಿಗೆ ಭೇಟಿ ನೀಡಿ ಮನವಿ ಪತ್ರ ನೀಡಿದ್ದಾರೆ.
ಕಾಖರ್ಾನೆಯಲ್ಲಿ ತಾವು ತುಂಬಾ ತೊಂದರೆಯೊಂದಿಗೆ ಕಷ್ಟದಾಯಕವಾಗಿ ಕೆಲಸ ಮಾಡುತ್ತಿದ್ದು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದ್ದಾರೆ. ಕಂಪನಿಯ ಒಳಗಡೆ ಕಾಮರ್ಿಕರಿಂದ ಒಂದೇ ಏಜೆನ್ಸಿಯಿಂದ ಕೆಲಸ ಮಾಡಿಸಿಕೊಳ್ಳಬೇಕು. ಕಾಮರ್ಿಕರ ಕನಿಷ್ಠ ವೇತನ ಪಾಲಿಸತಕ್ಕದ್ದು. ಅವರ ಅವರ ಹುದ್ದೆಗೆ ಅನುಸಾರವಾಗಿ ಕೆಲಸ ನಿರ್ವಹಿಸಲು ಅನುಮತಿ ನೀಡಬೇಕು. ವಯಸ್ಸು ಮತ್ತು ಕೆಲಸದ ಅನುಭವದ ಮೇಲೆ ವೇತನ ನಿಗದಿ ಪಡಿಸುವದು. ಗುತ್ತಿಗೆದಾರರಿಗೆ ಕೊಡುವ ಕೆಲಸಗಳನ್ನು ಕಂಪನಿಯ ಕಾಮರ್ಿಕರಿಗೆ ನೀಡಕೂಡದು.
5 ರಿಂದ 6 ಜನರು ಮಾಡುವ ಗುಂಪು ಕೆಲಸವನ್ನು ಕೇವಲ 2 ರಿಂದ 3 ಜನರಿಗೆ ಕೆಲಸ ನಿರ್ವಹಿಸಲು ಒತ್ತಾಯಿಸುತ್ತಿದ್ದಾರೆ. ಕಂಪನಿಯ ಮಷನರಿಯನ್ನು ಹೆಚ್ಚು ಮಾಡುತ್ತಿದ್ದಾರೆ. ಹೊರತು ಹೆಚ್ಚಿನ ಕಾಮರ್ಿಕರನ್ನು ಭತರ್ಿ ಮಾಡುತ್ತಿಲ್ಲಾ.
ಅನಾಹುತಕ್ಕೀಡಾದ ವ್ಯಕ್ತಿಗೆ ಅಥವಾ ಆತನ ಕುಟುಂಬಕ್ಕೆ ಆಥರ್ಿಕ ಭದ್ರತೆ ಒದಗಿಸಬೇಕು. ಮೇಲಾಧಿಕಾರಿ ಹೆಚ್ಚುವರಿ ಕೆಲಸವನ್ನು ಮಾಡಿಸುತ್ತಾರೆ.
ಇದರಿಂದ ಅಪಘಾತವಾದಲ್ಲಿ ನಿಭಾಯಿಸಲು ಕೆಲವೇ ಕೆಲವು ಕಾಮರ್ಿಕರು ಇರುತ್ತಾರೆ. ಈಎಸ್ಐ ಸೌಲಭ್ಯ ಎಲ್ಲಾ ಕಾಮರ್ಿಕರಿಗೆ ನೀಡತಕ್ಕದ್ದು ಎಂದು ವಿನಂತಿಸಲಾಗಿದೆ.