ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅನಿಧರ್ಿಷ್ಟಾವಧಿಯ ಧರಣಿಗೆ ಚಾಲನೆ

ಲೋಕದರ್ಶನ ವರದಿ

ಮುದ್ದೇಬಿಹಾಳ 18:ಪ್ರಮುಖ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮತ್ತು ಪುರಸಭೆಯವರ ಕಿರುಕುಳ ತಪ್ಪಿಸುವಂತೆ ಒತ್ತಾಯಿಸಿ ಪುರಸಭೆ ಡಬ್ಬಾ ಅಂಗಡಿಕಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಇಲ್ಲಿನ ಬಸವೇಶ್ವರ ವೃತ್ತದ ಹತ್ತಿರ ಶುಕ್ರವಾರದಿಂದ ಅನಿಧರ್ಿಷ್ಟಾವಧಿಯ ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಿದ್ದಾರೆ.

ಈಗಿರುವ ಡಬ್ಬಾ ಅಂಗಡಿ ಮಳಿಗೆ 10ನೇ ಹಣಕಾಸು ಯೋಜನೆ ಅಡಿ ಪುರಸಭೆಯವರೇ ನಿಮರ್ಿಸಿದ್ದು ಇದರಲ್ಲಿರುವ ಅಂಗಡಿಕಾರರಿಗೆ ಪಯರ್ಾಯ ವ್ಯವಸ್ಥೆ ಕಲ್ಪಿಸದೆ ಮಳಿಗೆ ನೆಲಸಮಕ್ಕೆ ಮುಂದಾಗಿರುವುದನ್ನು ಕೈಬಿಡಬೇಕು. ಪಟ್ಟಣದಲ್ಲಿ ನಡೆಯುತ್ತಿರುವ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಅಂದಾಜು ಪತ್ರಿಕೆಯಲ್ಲಿ ಅನುಮೋದಿಸಿದಂತೆ ನಡೆಸಬೇಕು. ರಸ್ತೆ ಅಗಲೀಕರಣಕ್ಕಾಗಿ ಪುರಸಭೆಗೆ ಹೊಂದಿಕೊಂಡಿದ್ದ ಪುರಸಭೆ ಮಳಿಗೆಯನ್ನು ಏಕಾಏಕಿ ನೆಲಸಮಗೊಳಿಸಿ ಅದರಲ್ಲಿದ್ದ ಬಾಡಿಗೆದಾರರನ್ನು ಬೀದಿಪಾಲು ಮಾಡಿದ್ದು ಅವರಿಗೆ ಸಕರ್ಾರದ ನಿಯಮದಂತೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು. ರಸ್ತೆಯ ಒಂದು ಬದಿಯ ಕಾಮಗಾರಿ ಪೂರ್ಣಗೊಳ್ಳುವವರೆಗೂ ಇನ್ನೊಂದು ಬದಿಯ ಕಾಮಗಾರಿ ಕೈಗೆತ್ತಿಕೊಳ್ಳಬಾರದು. ಅಂಬೇಡ್ಕರ್ ವೃತ್ತದಿಂದ ಹಡಲಗೇರಿ ಕ್ರಾಸ್ವರೆಗೆ ರಸ್ತೆ ಅಗಲೀಕರಣಗೊಳಿಸುವಾಗ ಆಸ್ತಿ ಕಳೆದುಕೊಂಡ ಎಲ್ಲ ಅಧಿಕೃತ, ಅನಧಿಕೃತ ಅಂಗಡಿಕಾರರಿಗೆ ಪರಿಹಾರ ಒದಗಿಸಿಕೊಡಬೇಕು. ಡಬ್ಬಾ ಅಂಗಡಿಕಾರರ ಮೇಲೆ ದೌರ್ಜನ್ಯ ನಡೆಸುತ್ತಿರುವ ಪುರಸಭೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ರಸ್ತೆ ನಿಮರ್ಾಣ ಯೋಜನೆಗೆ ಮೂಲ ಯೋಜನೆಯಲ್ಲಿರುವಷ್ಟು ಅಳತೆಯ ಜಾಗ ಲಭ್ಯವಿದ್ದರೂ ಹೆಚ್ಚುವರಿ ಜಾಗಕ್ಕೋಸ್ಕರ ಡಬ್ಬಾ ಅಂಗಡಿಕಾರರಿಗೆ ಮಾನಸಿಕ ಕಿರುಕುಳ ನೀಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು ಎನ್ನುವ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗಿದೆ.

ಅಮೀನಸಾಬ ಮುಲ್ಲಾ, ಈರಣ್ಣ ಮಾಡಗಿ, ನಿಂಗಯ್ಯ ಪತ್ರಿ, ಸಿದ್ದಯ್ಯ ಪತ್ರಿ, ಮುನ್ನಾ ಬಾಗವಾನ, ಬಾಬು ಹೂಗಾರ, ಹುಸೇನ ಮುಲ್ಲಾ, ಬಸವರಾಜ ಮಡಿವಾಳರ, ಚಂದ್ರಶೇಖರ ಹಡಪದ, ಶ್ರೀಧರ ಮಡಿವಾಳರ, ಅಶೋಕ ಇರಕಲ್ಲ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಬೆಂಬಲ: ಧರಣಿಗೆ ಜೆಡಿಎಸ್ನ ಜಿಲ್ಲಾ ಮತ್ತು ತಾಲೂಕು ಮಹಿಳಾ ಘಟಕ ಹಾಗೂ ಎಸ್ಸಿ ಘಟಕಗಳ ಘಟಕಗಳ ಪದಾಧಿಕಾರಿಗಳು, ಸದಸ್ಯರು ಬೆಂಬಲ ನೀಡಿ ಕೆಲ ಹೊತ್ತು ಪಾಲ್ಗೊಂಡಿದ್ದರು. ಜಿಲ್ಲಾ ಮಹಿಳಾ ಜೆಡಿಎಸ್ ಅಧ್ಯಕ್ಷೆ ವಿದ್ಯಾ ಪಾಟೀಲ ಮಾತನಾಡಿ  ಡಬ್ಬಾ ಅಂಗಡಿಕಾರರ ಬೇಡಿಕೆ ನ್ಯಾಯಯುತವಾಗಿದ್ದು ಅವರು ಉಪಜೀವನ ನಡೆಸಲು ಪಯರ್ಾಯ ವ್ಯವಸ್ಥೆ ಕಲ್ಪಿಸಬೇಕು ಇಲ್ಲವೇ ಇಲ್ಲೇ ವ್ಯಾಪಾರ ನಡೆಸಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು. ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಕೌಸರಬಾನು ಬಿದರಕುಂದಿ, ಪ್ರಮುಖರಾದ ಜಿಲಾನಿ ಮುದ್ನಾಳ, ಈರಣ್ಣ ತಾರನಾಳ, ಮುತ್ತು ಮಾದಿನಾಳ ಮತ್ತಿತರರು ಪಾಲ್ಗೊಂಡಿದ್ದರು.

ನಾಡಗೌಡರು ಮಾತು ಉಳಿಸಿಕೊಳ್ಳುವರೆ?: ಈಚೆಗೆ ಡಬ್ಬಾ ಅಂಗಡಿಕಾರರು ಮಾಜಿ ಸಚಿವ ಸಿ.ಎಸ್.ನಾಡಗೌಡರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡು ರಕ್ಷಣೆಗೆ ಬರುವಂತೆ ಮನವಿ ಮಾಡಿದ್ದರು. ಇವರ ಬೇಡಿಕೆ ಪರಿಗಣಿಸಿ ನಾಡಗೌಡರು ಜ.9ರಂದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ರಾಜ್ಯ ಹೆದ್ದಾರಿ ನಿಮರ್ಾಣ ವೇಳೆ ಯಾರೇ ಸಂತ್ರಸ್ತರಾದರೂ ಅವರಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಕಾಮಗಾರಿ ಒಪ್ಪಂದದಲ್ಲಿ ಶರತ್ತು ಇದೆ. ಇದನ್ನು ಅಧಿಕಾರಿಗಳು, ಗುತ್ತಿಗೆದಾರರು ಪಾಲಿಸಿಲ್ಲ. ಇವರಿಗೆ 10 ದಿನಗಳ ಗಡುವು ನೀಡುತ್ತಿದ್ದು ಅಷ್ಟರೊಳಗೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಬೇಕು. ಇಲ್ಲವಾದಲ್ಲಿ ನಾನೇ ಬಸವೇಶ್ವರ ವೃತ್ತದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ. ಯಾರು ನನ್ನ ಬಂದರೂ, ಬರದಿದ್ದರೂ ನಾನಂತೂ ಸತ್ಯಾಗ್ರಹ ನಡೆಸುತ್ತೇನೆ ಎಂದು ಹೇಳಿದ್ದರು. ಅವರು ಕೊಟ್ಟ ಗಡುವು ಮುಗಿಯಲು ಒಂದೇ ದಿನ ಬಾಕಿ ಇದೆ (ಶನಿವಾರ ಸಂಜೆ). ನಾಡಗೌಡರ ಬೇಡಿಕೆ ಈಡೇರದಿದ್ದರೆ ಅವರೂ ಸಹಿತ ಸತ್ಯಾಗ್ರಹ ಕೂಡುವ ಮೂಲಕ ನಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತಾರೆ ಎನ್ನುವ ವಿಶ್ವಾಸ, ನಿರೀಕ್ಷೆ ಡಬ್ಬಾ ಅಂಗಡಿಕಾರರಲ್ಲಿ ಇರುವುದು ಕಂಡುಬಂದಿದೆ. ಹೀಗಾಗಿ ನಾಡಗೌಡರು ಕೊಟ್ಟ ಮಾತು ಉಳಿಸಿಕೊಳ್ಳುವರೇ ಎನ್ನುವ ನಿರೀಕ್ಷೆ ಎಲ್ಲರಲ್ಲಿ ಇದೆ.