ಬೇಡಿಕೆ ಈಡೇರಿಕೆ ಭರವಸೆ: ಕಬ್ಬು ಕಟಾವಣಿ ಆರಂಭ


ಕಾಗವಾಡ 23: ಕಳೆದ 15 ದಿನಗಳಿಂದ ಕಾಗವಾಡ ತಾಲೂಕಿನ ರೈತರು ಕಬ್ಬಿನದರ ನಿಗದಿ ಪಡಿಸಲು ಹೋರಾಟ ಪ್ರಾರಂಭಿಸಿದ್ದರು. ಇದರಿಂದ ಕಬ್ಬು ಕಟಾವಣಿಗಾಗಿ ಆಗಮಿಸಿದ ಮಹಾರಾಷ್ಟ್ರ ರಾಜ್ಯದ ಬೀಡ ಜಿಲ್ಲೆಯ ಕೂಲಿಗಾರರ ದನಕರುಗಳಿಗೆ ಮೇವು ಹಾಗೂ ಅವರ ಹೊಟ್ಟೆ ಪಾಡಿನ ಸಮಸ್ಯೆ ನಿಮರ್ಾಣಗೊಂಡಿತ್ತು. ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಇವರು ಇಲ್ಲಿಯ ರೈತ ಹೋರಾಟಗಾರರಿಗೆ ಬೇಡಿಕೆ ಈಡೇರಿಸುವದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆ ಸ್ಥಗಿತಗೊಳಿಸಿ, ಕಬ್ಬು ಕಟಾವಣಿ ಪ್ರಾರಂಭಿಸಿದ್ದಾರೆ. ಇದರಿಂದ ಕೂಲಿಗಾರರಲ್ಲಿ ಸಂತಸ ಮನೆ ಮಾಡಿದೆ.

ಗುರುವಾರರಂದು ಕಾಗವಾಡದ ಶಿರಗುಪ್ಪಿ ಸಕ್ಕರೆ ಕಾಖರ್ಾನೆಯಲ್ಲಿ ಕಬ್ಬು ಕಟಾವಣಿ ಕೂಲಿಗಾರರು ಎತ್ತಿನಗಾಡಿ, ಟ್ರ್ಯಾಕ್ಟರ್ಗಳ ಮುಖಾಂತರ ಕಬ್ಬು ಕಟಾವಣಿ ಮಾಡಿ ಸಾಗಾಟ ಪ್ರಾರಂಭಿಸಿದ್ದಾರೆ. 15 ದಿನಗಳಿಂದ ಕೆಲಸ ಇಲ್ಲದೆ, ಖಾಲಿ ಉಳಿದ ಕೂಲಿ ಕಾಮರ್ಿಕರು ಮತ್ತೆ ತಮ್ಮ ಕೆಲಸದಲ್ಲಿ ತೊಡಗಿದ್ದರಿಂದ ಸಂತಸ ಹಂಚಿಕೊಂಡಿದ್ದಾರೆ.

ಎತ್ತಿನ ಗಾಡಿಗೆ ತಲಾ 20 ಸಾವಿರ ಹಾನಿ:

ಕಳೆದ 15 ದಿನಗಳಿಂದ ಕಬ್ಬು ಸಾಗಾಟ ಸ್ಥಗಿತಗೊಳಿಸಿದ್ದರಿಂದ, ನಮ್ಮ ದಿನ ನಿತ್ಯದ ಕೂಲಿ ಮತ್ತು ಕಬ್ಬು ಸಾಗಾಟ ಬಾಡಿಗೆ ಹೀಗೆ ಸುಮಾರು ತಲಾ ಒಂದು ಎತ್ತಿನ ಗಾಡಿಗೆ 20 ಸಾವಿರದಷ್ಟು ಹಾನಿಯಾಗಿದೆ. ಅಲ್ಲದೆ ದನಕರಗಳಿಗೆ ಮೇವು, ಇನ್ನಿತರ ತೊಂದರೆ ಅನುಭವಿಸಿದ್ದೇವೆ. ಕಾಗವಾಡ ಸಕ್ಕರೆ ಕಾಖರ್ಾನೆಗೆ ಬೀಡ ಜಿಲ್ಲೆಯ 150 ಎತ್ತಿನ ಗಾಡಿಗಳು ಕಬ್ಬು ಸಾಗಾಟ ಮಾಡುತ್ತಿವೆ ಎಂದು ಎತ್ತಿನಗಾಡಿಯ ಮಾಲೀಕ ಶೇಖರ ಗಾಯಕವಾಡ ಹೇಳಿದರು.

ಕಬ್ಬು ಬೆಳೆಗಾರರಲ್ಲಿ ಸಂತಸ:

15 ದಿನಗಳಿಂದ ಕಬ್ಬು ಕಟಾವಣಿ ಸ್ಥಗಿತಗೊಳಿಸಿದ್ದರಿಂದ ಕಬ್ಬು ಬೆಳೆಗಾರ ರೈತರು ಸಮಸ್ಯೆಯಲ್ಲಿದ್ದರು. ಪ್ರಸಕ್ತ ಹಂಗಾಮಿನಲ್ಲಿ ಸಮರ್ಪಕವಾಗಿ ಮಳೆ ಆಗದೆ ಇದಿದ್ದರಿಂದ, ಭಾವಿ ಕೊಳವೆ ಭಾವಿಗಳು ಬತ್ತಿ ಹೋಗಿದ್ದು, ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಕಬ್ಬುಕಟಾವಣಿ ಮಾಡಿ ಜಮೀನಗಳು ಖಾಲಿ ಮಾಡುವುದು ರೈತರ ಗುರಿಯಾಗಿದೆ. ಇದರಲ್ಲಿ ವಿಳಂಬವಾಗಿದ್ದರಿಂದ ಚಿಂತೆಯಲ್ಲಿದ್ದರು. ಆದರೆ, ನಿನ್ನೆಯಿಂದ ಮತ್ತೇ ಹಂಗಾಮು ಪ್ರಾರಂಭಿಸಿದ್ದರಿಂದ ರೈತರಲ್ಲಿ ಒಂದು ರೀತಿ ಸಂತಸ ಮೂಡಿದ್ದು ಚಟುವಟಿಕೆಗಳು ಉತ್ಸಾಹದಿಂದ ಆರಂಭಗೊಂಡಿವೆ.

ತಾಲೂಕಿನಲ್ಲಿ 5 ಸಕ್ಕರೆ ಕಾಖರ್ಾನೆಗಳಿದ್ದು, ಕಬ್ಬು ಕಟಾವಣಿ ಪ್ರಾರಂಭಿಸಿ, ಹಂಗಾಮು ಯಶಸ್ವಿಗೊಳಿಸಲಿ. ಅದರಲ್ಲಿ ಕಬ್ಬಿಗೆ ಕೇಂದ್ರ ಸರಕಾರ ಘೋಷಣೆ ಮಾಡಿದ ದರ ನೀಡಿ, ಕಳೆದ ವರ್ಷದ ಪ್ರತಿಟನ್ 400 ರೂಪಾಯಿ ವ್ಯತ್ಯಾಸದ ಹಣ ನೀಡಲಿ ಎಂಬುದು ರೈತರ ಬೇಡಿಕೆಯಾಗಿದೆ.