ಲೋಕದರ್ಶನ ವರದಿ
ಮಾಂಜರಿ 24: ಕೃಷ್ಣಾ ನದಿಯ ಪ್ರವಾಹಕ್ಕೆ ತತ್ತರಿಸಿ ಆಸ್ತಿ-ಪಾಸಿ ಕಳೆದುಕೊಂಡು ಸಂಕಷ್ಟಕ್ಕೆ ಸುಕ್ಷೇತ್ರ ಯಡೂರ ಗ್ರಾಮದ ಸಂತ್ರಸ್ಥರಿಗೆ ಆರ,ಎಸ್.ಎಸ್ ಸಂಘಟಣೆಯ ಚಿಕ್ಕೋಡಿ ಜಿಲ್ಲಾ ಘಟಕದ ವತಿಯಿಂದ ಶನಿವಾರ ವಾರ ಮನೆ-ಮನೆಗೆ ತೆರಳಿ ಅಗತ್ಯ ಪದಾರ್ಥ ಮತ್ತು ಸಾಮಗ್ರಿಗಳನ್ನು ತರಿಸಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಅಮೃತ ಕುಲಕಣರ್ಿಯವರು ಮಾತನಾಡಿ ಪ್ರಸಕ್ತವರ್ಷ ಮಹಾ ಪ್ರವಾಹದಿಂದ ನದಿ ತೀರದ ಜನತೆ ತತ್ತರಿಸಿ ಹೋಗಿದ್ದು, ಪ್ರತಿಯೊಂದು ಮನೆಯಲ್ಲಿ ನೀರು ನುಗ್ಗಿ, ತಮ್ಮ ಅಗತ್ಯವಾದ ವಸ್ತುಗಳನ್ನು ಕಳೆದು ಕೊಂಡಿದ್ದಾರೆ. ಅವರಿಗೆ ತಾತ್ಕಾಲಿಕವಾಗಿ ಜೀವನ ರೋಪಿಸಿಕೊಳ್ಳುವುದರಗೊಸ್ಕರ ಆರ್,ಎಸ್.ಎಸ್ ಸಂಘಟಣೆ ಸಹಾಯಮಾಡಲು ಮುಂದಾಗಿದೆ ಎಂದರು. ಸುರೇಶ ಮೋಹಿತೆ ಮಾತನಾಡಿ ಹಲವು ನದಿ ತೀರದ ಜನರ ಮನೆಯಲ್ಲಿ ನಿರಿಕ್ಷೆಗೂ ಮೀರಿ ನೀರು ಹೋಗಿದ್ದರಿಂದ ಸದ್ಯ ಅವರು ಜೀಎವ ನಡೆಸುವುದು ಕಷ್ಟವಾಗಿದೆ ಅದಕ್ಕಾಗಿ ನಮ್ಮ ಸಂಘಟಣೆ ಅಗತ್ಯ ವಸ್ತುಗಳನ್ನು ವಿತರಿಸುತ್ತಿದ್ದೆವೆ ಎಂದು ಹೇಳಿದರು. ರಮೇಶ ಮೋಹಿತೆ, ಅಜೀತ ವಝೆ, ದೀಲಿಪ ವಝೆ, ಸುಭೋದ ವಝೆ, ವೃಷಭ ಪೂಜಾರಿ, ಸುಧೀರ ಗುರವ, ಸೋಮು ಜಡೆ, ದಾದು ಮಾನೆ ಓಂಕಾರ ಪೋತದಾರ ಮುಂತಾದವರಿದ್ದರು.