ಯೋಗದಿಂದ ದ್ವಂದ್ವ-ಗೊಂದಲಗಳಿಗೆ ಮುಕ್ತಿ: ಹಿರೇಮಠ

ಧಾರವಾಡ, 24: ನಿರಂತರ ಯೋಗ ಸಾಧನೆಯಿಂದ ಮನಸ್ಸಿನಲ್ಲಿರಬಹುದಾದ ಎಲ್ಲ ದ್ವಂದ್ವ-ಗೊಂದಲಗಳಿಗೆ ಮುಕ್ತಿಯಾಗಿ ಮನುಷ್ಯ ಅದರಲ್ಲೂ ಮುಖ್ಯವಾಗಿ ವಿದ್ಯಾಥರ್ಿಗಳು ಮುಕ್ತ ನೆಲೆಯಲ್ಲಿ ಏಕಾಗ್ರತೆಯನ್ನು ಸಾಧಿಸಿ ಉನ್ನತ ಕಲಿವಿನ ಫಲವನ್ನು ಹೊಂದುತ್ತಾರೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಪ್ರತಿಪಾದಿಸಿದರು.

                ಅವರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯರ್ಾಲಯ ಹಾಗೂ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಂಟಿ ಆಶ್ರಯದಲ್ಲಿ ಇಲ್ಲಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳ ಬೆಳಗಾವಿ ವಿಭಾಗ ಮಟ್ಟದ ಯೋಗ ಸ್ಪಧರ್ೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

                ಭಾರತೀಯ ಹಿಂದೂ ಪರಂಪರೆಯ ವೇದಪ್ರಣೀತ ದರ್ಶನಗಳಾದ ನ್ಯಾಯ, ಮೀಮಾಂಸ, ವೇದಾಂತ, ಸಾಂಖ್ಯ, ವೈಶೇಷಿಕ ಹಾಗೂ ಯೋಗ ತಮ್ಮದೇ ಆದ ಮಹತ್ವವನ್ನು ಪಡೆದುಕೊಂಡಿವೆ. ಕಳೆದ 2016 ರಿಂದ 'ಯುನೆಸ್ಕೋ' ಸಹ ಯೋಗವನ್ನು ಸ್ವೀಕರಿಸಿ ಜಾಗತಿಕವಾಗಿ ಅದಕ್ಕೆ ಮಾನ್ಯತೆ ನೀಡಿದ್ದು, ಇಂದು ವಿಶ್ವದೆಲ್ಲೆಡೆ ಯೋಗ ಸಾಧನೆಯ ಮೂಲಕ ಭಾರತಕ್ಕೆ ವಿಶಿಷ್ಟ ಘನತೆ ಪ್ರಾಪ್ತವಾಗಿದೆ. ಬಹಳ ಅದ್ಭುತವಾದ ವಿದ್ಯೆಯಾಗಿರುವ ಯೋಗದಿಂದ ವಿಶೇಷವಾಗಿ ವಿದ್ಯಾಥರ್ಿಗಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಶಕ್ತರಾಗುವುವದರೊಂದಿಗೆ ಅವರು ಉತ್ಕೃಷ್ಟ ಜ್ಞಾನಾರ್ಜನೆಯ ಜೊತೆಗೆ ಉನ್ನತ ವ್ಯಕ್ತಿತ್ವವನ್ನು ಹೊಂದಲು ಸಾಧ್ಯವಾಗುತ್ತದೆ ಎಂದರು.

ಪಾರದರ್ಶಕ ಸ್ಪಧರ್ೆ : ಬೆಳಗಾವಿ ವಿಭಾಗದ ಎಲ್ಲ 9 ಜಿಲ್ಲೆಗಳ ವಿದ್ಯಾಥರ್ಿಗಳು ಸ್ಪಧರ್ೆಗಳಲ್ಲಿ ಪಾಲ್ಗೊಂಡು ತಮ್ಮದೇ ಆದ ವೈಶಿಷ್ಟ್ಯಪೂರ್ಣ ಯೋಗ ಪ್ರದರ್ಶನಗಳನ್ನು ನೀಡಲಿದ್ದು, ನಮ್ಮ ನಿಣರ್ಾಯಕರು ಎಲ್ಲ ಸ್ಪಧರ್ೆಗಳನ್ನು ಸಂಪೂರ್ಣ ಪಾರದರ್ಶಕ ನೆಲೆಯಲ್ಲಿ ಮೌಲ್ಯಮಾಪನ ಮಾಡಿ ಯೋಗಸಾಧನೆಯ ಶ್ರೇಷ್ಠ ಪ್ರದರ್ಶನವನ್ನು ಗುರುತಿಸಿ ವಿದ್ಯಾಥರ್ಿಗಳನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಬೇಕೆಂದು ಹೇಳಿದ ಮೇಜರ್ ಸಿದ್ದಲಿಂಗಯ್ಯ, ಸುಮಾರು 200 ಸರಕಾರಿ ಶಾಲೆಗಳ ಮಕ್ಕಳು ಸ್ಪಧರ್ೆಯಲ್ಲಿ ಪಾಲ್ಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

                ಡಿಡಿಪಿಐ ಆರ್. ಎಸ್. ಮುಳ್ಳೂರ ಮಾತನಾಡಿ, ಯೋಗ ಸಾಧನೆಯು ಇತರೇ ಎಲ್ಲ ಕ್ರೀಡಾ ಚಟುವಟಿಕೆಗಳಿಗಿಂತ ಭಿನ್ನವಾಗಿದ್ದು, ಇಂದು ಪಠ್ಯಕ್ರಮದ ಭಾಗವಾಗಿ ಯೋಗವು ವಿದ್ಯಾಥರ್ಿಗಳ ಗಮನಸೆಳೆದಿದೆ. ಯೋಗ ಸಾಧನೆಯು ಕೇವಲ ಸ್ಪಧರ್ೆಗಳಿಗೆ ಮಾತ್ರ ಸೀಮಿತವಾಗಿ ಉಳಿಯದೇ, ಅದು ವಿದ್ಯಾಥರ್ಿಗಳ ಬದುಕಿನುದ್ದಕ್ಕೂ ನಿಯಮಿತ ನೆಲೆಯಲ್ಲಿ ನಡೆದಾಗ ಆರೋಗ್ಯಪೂರ್ಣ ಸಮಾಜ ನಿಮರ್ಾಣವಾಗಲು ಸಾಧ್ಯವಾಗುತ್ತದೆ ಎಂದರು.

                ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯ ಜಿ.ಎಂ. ವೃಷಭೇಂದ್ರಯ್ಯಶಿಕ್ಷಣಾಧಿಕಾರಿ ಮೋಹನಕುಮಾರ ಹಂಚಾಟೆ, ಹುಬ್ಬಳ್ಳಿ ಗ್ರಾಮೀಣ ಬಿಇಓ ಎಸ್.ಎಂ. ಹುಡೇದಮನಿ, ಧಾರವಾಡ ಶಹರ ಬಿಇಓ .. ಖಾಜಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಎಲ್. ಸಂಗಣ್ಣವರಯೋಗಪಟು ಕಾಶಿನಾಥ ಹಂದ್ರಾಳ, ದೈಹಿಕ ಶಿಕ್ಷಣಾಧಿಕಾರಿಗಳಾದ .ಎಸ್. ಮಠ, ಎಸ್.ಬಿ. ಬಸಾಪೂರ, ಎಸ್.ಎಸ್. ತೋಟಿಗೇರ, ಕಾಪಸೆ ಯಲ್ಲಾಪೂರ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಹುಬ್ಬಳ್ಳಿ ಗ್ರಾಮೀಣ ಅಧ್ಯಕ್ಷೆ ಆಶಾಬೇಗಂ ಮುನವಳ್ಳಿ, ಕಾರ್ಯದಶರ್ಿ ಎಸ್.ಪಿ. ಪಾಟೀಲ, ಜಿ.ಎಲ್. ಶಿಂಥಪತ್ಯಾ, ರಮಾಮಣಿ, ಸ್ಮಿತಾ ಮಹಾಪುರುಷ, ಡಿ.ಜಿ.ರಡ್ಡೇರ, ಎಸ್.ಬಿ. ಕುರಿ ಇದ್ದರು.

                ವಿಜಯಪೂರ, ಬಾಗಲಕೋಟ, ಬೆಳಗಾವಿ, ಉತ್ತರಕನ್ನಡ, ಧಾರವಾಡ, ಗದಗ, ಹಾವೇರಿ, ಶಿರಸಿ ಹಾಗೂ ಚಿಕ್ಕೋಡಿ ಜಿಲ್ಲೆಗಳ 126 ಪ್ರಾಥಮಿಕ ಶಾಲಾ ಮಕ್ಕಳು ಹಾಗೂ 126 ಪ್ರೌಢ ಶಾಲಾ ಮಕ್ಕಳು ಸ್ಪಧರ್ೆಗಳಲ್ಲಿ ಪಾಲ್ಗೊಂಡಿದ್ದರು. ಸುಮಾರು 45 ದೈಹಿಕ ಶಿಕ್ಷಣ ಶಿಕ್ಷಕರು ಸ್ಪಧರ್ೆಗಳ ಸಂಘಟನೆಗೆ ನೆರವಾದರು.