ಕಾನೂನಾತ್ಮಕ ಹೋರಾಟಕ್ಕೆ ನಿರ್ಧಾರ

ಮೂಡಲಗಿ 18:  ಐದು ವಾಷರ್ಿಕ ಸಭೆಗಳಿಗೆ ಹಾಜರಾಗದೇ ಇರುವ ಸದಸ್ಯರ ಹೆಸರು ಚುನಾವಣೆಯ ಮತದಾರ ಪಟ್ಟಿಯಿಂದ ಕೈ ಬಿಟ್ಟಿರುವುದನ್ನು  ಸಾರ್ವಜನಿಕರು ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಂಘದ ಸದಸ್ಯರ ಪ್ರತಿಭಟನೆಯೂ ಶನಿವಾರವು ಮುಂದುವರೆದಿದ್ದು  ಮುಂಜಾನೆಯಿಂದ ಸಂಘದ ಕಛೇರಿಯ ಮುಂದೆ ಪ್ರತಿಭಟನೆಯಲ್ಲಿ ತೊಡಗಿದರು. 

ಎರಡು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದರು ಪ್ರತಿಭಟನಾ ಸ್ಥಳಕ್ಕೆ ಯಾವೂದೇ ಅಧಿಕಾರಿಗಳು ಬರದೇ ಇರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಸಂಘದ ವಾಷರ್ಿಕ ಸಭೆಗಳಿಗೆ ಸದಸ್ಯರು ಹಾಜರಾದರೂ ಸಹ ಪ್ರಸ್ತುತ ಚುನಾವಣಾ ಅಂತಿಮ ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಕೈ ಬಿಟ್ಟು ಮತದಾನದಿಂದ ವಂಚಿತರಾಗುವಂತೆ ಮೋಸ ಮಾಡಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ದೂರವಾಣಿ ಮುಖಾಂತರ ಮಾತನಾಡಿ, ಜಿಲ್ಲಾ ರಿಜಿಸ್ಟಾರ ಅವರೊಂದಿಗೆ ಮುಖಂಡರ ನಿಯೋಗ ತೆರಳಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ತಿಳಿಸಿದ್ದಾರೆ. ಇದರಿಂದ ಈಗ ನಡೆಸಿರುವ ಪ್ರತಿಭಟನೆಯನ್ನು ತಾತ್ಕಲಿಕ ಸ್ಥಗಿತಗೊಳಿಸಲಾಗಿದೆ. ಅಲ್ಲಿಯೂ ಸಹ ಸಕಾರತ್ಮಕ ಸ್ಪಂದನೆ ದೊರೆಯದಿದ್ದಲ್ಲಿ ಸೋಮವಾರದಿಂದ ಹೋರಾಟ ತೀವ್ರಗೊಳಿಸಲು ನಿಧರ್ಾರಿಸಲಾಗಿದೆ. 

ಅಲ್ಲದೇ ನೂತನ ಕಟ್ಟಡ ನಿಮರ್ಾಣಕ್ಕೆ ಎಲ್ಲ ಸದಸ್ಯರು ತಮಗೆ ಬರುವ ಲಾಭಂಶವನ್ನು ನೀಡಿದ್ದು, ಕಟ್ಟಡ ನಿಮರ್ಾಣದಲ್ಲಿ ಸಹ ಭಾರಿ ಅವ್ಯವಹಾರ ನಡೆದಿದೆ.  ಈ ಅವ್ಯವಹಾರದ ಬಗ್ಗೆಯೂ ಲೋಕಯುಕ್ತರಿಗೆ ತಿಳಿಸಲಾಗಿದೆ. ಅವರು  ಸದ್ಯದಲ್ಲಿ ತನಿಖೆಗೆ ಆಗಮಿಸಲಿದ್ದಾರೆ.

ಇದು ಈಗಿನ ಆಡಳಿತ ಮಂಡಳಿಯ ವಿರುದ್ದ ಪಕ್ಷಾತೀತವಾಗಿ ನಡೆಯುತ್ತಿರುವ ಹೋರಾಟವಾಗಿದ್ದು ತಮಗೆ ಆಗಿರುವ ಅನ್ಯಾಯದ ವಿರುದ್ದ ಹೋರಾಡಲು ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವವರೆಗು ಹೋರಾಟ ಮುಂದುವರಿಸಲೂ ಎಲ್ಲರು ಸಹಕರಿಸಬೇಕೆಂದು ಕೇಳಿಕೊಂಡರು.

ಪ್ರತಿಭಟನೆಯಲ್ಲಿ ಬಿ,ಬಿ ಹಂದಿಗುಂದ, ವೀರಣ್ಣಾ  ಹೊಸೂರ, ಕೆ.ಟಿ ಗಾಣಿಗೇರ, ಬಿ.ಜಿ. ಜಕಾತಿ, ಎಸ್.ಎ. ಶಿಲವಂತ, ಸಿ.ಎಸ. ಅಂಗಡಿ, ಬಸವರಾಜ ತೇಲಿ, ಚಂದ್ರಶೇಖರ ತೇಲಿ, ಗಿರೀಶ ಡವಳೇಶ್ವರ, ಸತ್ಯಪ್ಪ ವಾಲಿ,  ರಾಜು ಅಂಗಡಿ, ಮಲ್ಲಪ್ಪ ಮದುಗುಣಕಿ, ಚನ್ನಪ್ಪ ಅಥಣಿ, ಮಲ್ಲಪ್ಪ ತೇರದಾಳ, ಶ್ರೀಕಾಂತ ಹಿರೇಮಠ, ಪ್ರದೀಪ ಲಂಕೆಪ್ಪನವರ, ಮೌನೇಶ ಪತ್ತಾರ ಮತ್ತಿತರು ಭಾಗವಹಿಸಿದ್ದರು.