ಸಾಲಬಾಧೆ: ವಿಷ ಸೇವಿಸಿ ರೈತ ಆತ್ಮಹತ್ಯೆ

ಬೈಲಹೊಂಗಲ 30: ತಾಲೂಕಿನ ತಿಗಡಿ ಗ್ರಾಮದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

    ರೇವಪ್ಪಾ ಮಲ್ಲಪ್ಪಾ ಒಡೆಯರ (50) ಮೃತ ರೈತ. ಶುಕ್ರವಾರ ರಾತ್ರಿ ಮನೆಯಿಂದ ಹೋಗಿದ್ದ ರೈತ ತನ್ನ ಜಮೀನ ಪಕ್ಕದಲ್ಲಿ ವಿಷದ ಬಾಟಲಿಯೊಂದಿಗೆ ಶವವಾಗಿ ಪತ್ತೆಯಾಗಿದ್ದಾನೆ.     

 ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಬೆಳೆ ಬಾರದೆ ಆಥರ್ಿಕವಾಗಿ ಜಜರ್ಿತನಾಗಿದ್ದ ರೈತ ಕೈತುಂಬ ಸಾಲ ಮಾಡಿಕೊಂಡಿದ್ದನೆಂದು ಗ್ರಾಮಸ್ಥರು ವಿಕಗೆ ತಿಳಿಸಿದ್ದಾರೆ. ಕೆವಿಜಿ ಬ್ಯಾಂಕ್ನಲ್ಲಿ 27ಸಾವಿರ ರೂ.ಸೇರಿದಂತೆ ಖಾಸಗಿ, ಕೈಗಡ ಆಗಿ ಒಟ್ಟು 2.5 ಲಕ್ಷ ರೂ.ಸಾಲ ಮಾಡಿದ್ದನೆಂದು ಗೊತ್ತಾಗಿದೆ. ಸಾಲ ಮಾಡಿ ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಿದ್ದ, ಇನ್ನೊಬ್ಬ ಮಗಳ ಮದುವೆ ಮಾಡಬೇಕಾಗಿತ್ತು. ಅಷ್ಟರಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ. 

     ತಿಗಡಿ ಗ್ರಾಮದ ಹದ್ದಿಯಲ್ಲಿ ಮೂವರು ಅಣ್ಣ ತಮ್ಮಂದಿರ ಮಧ್ಯೆ ಎರಡು ಎಕರೆ 20 ಗುಂಟೆ ಜಮೀನು ಹೊಂದಲಾಗಿದೆ. ಪ್ರಕರಣ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸ್ಥಳಕ್ಕೆ ಗ್ರಾ.ಪಂ.ಅಧ್ಯಕ್ಷ ಮುನ್ನಾ ಬಹದೂರಸಿ ಹಾಗೂ ಅಧಿಕಾರಿಗಳು ಭೇಟಿ ನೀಡಿದ್ದಾರೆ.