ಪ್ರಧಾನಿ ಮೋದಿ ಪರೀಕ್ಷೆ ಮೇಲೆ ಚರ್ಚೆ: ಲಾಭ ಪಡೆದ ಕೇಂದ್ರೀಯ ಶಾಲೆ ವಿದ್ಯಾರ್ಥಿಗಳು

Debate on PM Modi exam: Central school students benefited

ಪ್ರಧಾನಿ ಮೋದಿ ಪರೀಕ್ಷೆ ಮೇಲೆ ಚರ್ಚೆ: ಲಾಭ ಪಡೆದ ಕೇಂದ್ರೀಯ ಶಾಲೆ ವಿದ್ಯಾರ್ಥಿಗಳು 

ಬೆಳಗಾವಿ, 10: ಫೆ.10ರಂದು ಮುಂ. 11ಗಂಟೆಗೆ ಕಒ ಖಊಖಋ ಕೇಂದ್ರ ಶಾಲೆ ಸಂಖ್ಯೆ 2, ಬೆಳಗಾವಿ ಕ್ಯಾಂಪ್‌ನ 6ನೇ ತರಗತಿಯಿಂದ 12ನೇ ತರಗತಿವರೆಗೆ ಸಮ್ಮಿಲಿತವಾಗಿರುವ ಸುಮಾರು 1150 ವಿದ್ಯಾರ್ಥಿಗಳು ಪರೀಕ್ಷೆ ಮೇಲೆ ಚರ್ಚೆ 2025 ಕಾರ್ಯಕ್ರಮವನ್ನು ವೀಕ್ಷಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಿಂದ ಲಾಭ ಪಡೆದರು.  ಪ್ರಧಾನಿ ಮೋದಿ ಜಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಮೊದಲು ಒತ್ತಡ ಮುಕ್ತರಾರಲು, ಆತ್ಮವಿಶ್ವಾಸವನ್ನು ಉಳಿಸಿಕೊಳ್ಳಲು ಮತ್ತು ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಲು ಪ್ರೇರಣೆ ನೀಡಿದರು. ಪರೀಕ್ಷೆಯನ್ನು ಜೀವನದ ಪ್ರಮುಖ ಅವಶ್ಯಕ ಅವಕಾಶ ಎಂದು ಪರಿಗಣಿಸಿ, ಅದನ್ನು ಪೂರ್ಣ ಉತ್ಸಾಹ ಮತ್ತು ಆಸಕ್ತಿಯಿಂದ ಎದುರಿಸಬೇಕು ಎಂದು ಅವರು ಹೇಳಿದರು.  ಪ್ರಧಾನಿ ಮೋದಿ ಸಲಹೆ: ಮಕ್ಕಳನ್ನು ಇತರರೊಂದಿಗೆ ಹೋಲಿಸಬೇಡಿ, ಅವರ ವೈಯಕ್ತಿಕ ಸಾಮರ್ಥ್ಯಗಳನ್ನು ಗುರುತಿಸಿ ಅವರನ್ನು ಉತ್ತೇಜಿಸಲು ಮುಂದಾಗಿರಿ ಎಂದು ಪ್ರಧಾನ ಮಂತ್ರಿ ಮೋದಿ ಜಿ ಪೋಷಕ ಮತ್ತು ಶಿಕ್ಷಕರಿಗೆ ವಿನಂತಿಸಿದರು, ಪ್ರತಿ ವಿದ್ಯಾರ್ಥಿಯು ತನ್ನದೇ ಆದ ವಿಶೇಷತೆಗಳನ್ನು ಹೊಂದಿರುತ್ತಾರೆ. ಹೋಲಿಕೆ ಮಾಡುವುದರಿಂದ ಅವರ ಆತ್ಮವಿಶ್ವಾಸ ಕುಂದಬಹುದು. ನೀವು ನಿಮ್ಮ ಮಕ್ಕಳ ಸಾಮರ್ಥ್ಯಗಳ ಮೇಲೆ ನಂಬಿಕೆ ಇಟ್ಟುಕೊಂಡು ಅವರಿಗೆ ಅವರ ಆಸಕ್ತಿಯ ಪ್ರಕಾರ ಮುಂದುವರೆಯಲು ಪ್ರೋತ್ಸಾಹಿಸಿ ಎಂದು ಕರೆ ನೀಡಿದರು.  ಶಾಲೆಯ ಮುಖ್ಯಾಧ್ಯಾಪಕ ಮಹೇಂದ್ರ ಕಲ್ರಾ ಅವರು ಮಾತನಾಡಿ ಪರೀಕ್ಷೆಗಳು ಹಬ್ಬದಂತೆ ಇರುತ್ತವೆ, ಅಲ್ಲಿ ನಾವು ನಮ್ಮ ಸಾಮರ್ಥ್ಯವನ್ನು ಅತ್ಯುತ್ತಮವಾಗಿ ಪ್ರದರ್ಶಿಸುತ್ತೇವೆ. ಹಬ್ಬಗಳಲ್ಲಿ ನಾವು ಖುಷಿಯಿಂದ ಮತ್ತು ಉಲ್ಲಾಸದಿಂದ ತುಂಬಿರುತ್ತೇವೆ. ಹೀಗಾಗಿ ಪರೀಕ್ಷೆಗಳನ್ನು ಸಹ ಆತ್ಮವಿಶ್ವಾಸ ಮತ್ತು ಸಕಾರಾತ್ಮಕತೆ ಜೊತೆಗೆ ಸ್ವೀಕರಿಸಬೇಕು ಎಂದು ಕರೆ ನೀಡಿದರು.  ವಿದ್ಯಾರ್ಥಿಗಳು ಪ್ರಧಾನಿಯವರಿಂದ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿವಿಧ ಪ್ರಶ್ನೆಗಳನ್ನು ಕೇಳಿ, ಅವರ ಪ್ರೇರಣಾದಾಯಕ ಉತ್ತರಗಳಿಂದ ಲಾಭವನ್ನು ಪಡೆದು, ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದರು. ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆಗಳ ಕಡೆ ಮುನ್ನಡೆದರು.  ಶಾಲೆಯಲ್ಲಿ ಆಯೋಜಿಸಲಾದ ಈ ಸಮೂಹ ಕಾರ್ಯಕ್ರಮವನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ಆಯೋಜಿಸಿದರು. ಎಲ್ಲಾ ವಿದ್ಯಾರ್ಥಿಗಳು ಪ್ರಧಾನಿಯವರ ಸಂವಾದವನ್ನು ಗಮನವಿಟ್ಟು ಕೇಳಿ ಮತ್ತು ಜೀವನದಲ್ಲಿ ಪ್ರಮುಖ ಸಲಹೆಗಳನ್ನು ಅಳವಡಿಸಿಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡರು.  ಪರೀಕ್ಷೆಗಳನ್ನು ಒತ್ತಡವಾಗಿ ನೋಡಬೇಡಿ, ಅದನ್ನು ನಿಮ್ಮ ಜ್ಞಾನ ಮತ್ತು ಪರಿಶ್ರಮವನ್ನು ಪ್ರದರ್ಶಿಸಲು ಅವಕಾಶ ಎಂದು ಪರಿಗಣಿಸಿ ಎಂದು ಪ್ರಧಾನಿಯವರು ನೀಡಿದ ಸಂದೇಶವು ವಿದ್ಯಾರ್ಥಿಗಳ ಮನಸ್ಸಿನಲ್ಲಿ ದೀರ್ಘಕಾಲಿಕ ಪರಿಣಾಮ ಮೂಡಿಸಿದೆ.  ಶಾಲೆಯ ಕುಟುಂಬವು ಈ ಪ್ರೇರಣಾದಾಯಕ ಕಾರ್ಯಕ್ರಮಕ್ಕಾಗಿ ಪ್ರಧಾನಿಯವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಮುಂದಿನ ಪರೀಕ್ಷೆಗಳಿಗೆ ಶುಭಾಶಯಗಳನ್ನು ಕೋರಿದೆ.