'ಸಾರ್ವಜನಿಕ, ಖಾಸಗಿ, ಸಹಕಾರಿ ಸಹಭಾಗಿತ್ವದ ನಿಮರ್ಾಣ ದಿನ'

ಲೋಕದರ್ಶನ ವರದಿ

ಹಳಿಯಾಳ,17: 'ಗ್ರಾಮೀಣ ಸಮೃದ್ಧಿಗಾಗಿ ಸಹಕಾರ ಸಂಸ್ಥೆಗಳ ಮೂಲಕ ಉತ್ತಮ ಆಡಳಿತ ಮತ್ತು ಸರ್ವರನ್ನೊಳಗೊಂಡ (ಅಂತರ್ಗತ) ಬೆಳವಣಿಗೆ' ಧ್ಯೇಯ ವಾಕ್ಯದೊಂದಿಗೆ ಅಖಿಲ ಭಾರತ 65ನೇ ಸಹಕಾರಿ ಸಪ್ತಾಹದ ಅಂಗವಾಗಿ ಕೆಡಿಸಿಸಿ ಬ್ಯಾಂಕ್ ಹಳಿಯಾಳ ಶಾಖೆಯ ಸಭಾಭವನದಲ್ಲಿ 'ಸಾರ್ವಜನಿಕ, ಖಾಸಗಿ, ಸಹಕಾರಿ ಸಹಭಾಗಿತ್ವದ ನಿಮರ್ಾಣ ದಿನ' ಆಚರಿಸಲಾಯಿತು.

ಕನರ್ಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಕುಮಟಾದಲ್ಲಿರುವ ಉತ್ತರಕನ್ನಡ ಜಿಲ್ಲಾ ಸಹಕಾರ ಯುನಿಯನ್, ಕೆಡಿಸಿಸಿ ಬ್ಯಾಂಕ್ ಲಿಮಿಟೆಡ್, ಸಹಕಾರ ಇಲಾಖೆ, ಹಳಿಯಾಳ ಮತ್ತು ಜೋಯಿಡಾ ತಾಲೂಕಿನ ಎಲ್ಲಾ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಮತ್ತು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಘೋಟ್ನೇಕರ ಮಾತನಾಡಿದರು.

ಸಹಕಾರಿ ರಂಗವು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಪರಿಣಾಮವಾಗಿ ಹೆಚ್ಚಿನ ಸಂಖ್ಯೆಯಲ್ಲಿರುವ ಕೃಷಿಕರಿಗೆ ತಮ್ಮ ಕೃಷಿ ಚಟುವಟಿಕೆಗಳನ್ನು ನಡೆಸಲು ಪ್ರೇರಣೆ ದೊರೆಯುತ್ತಿದೆ. ಎಲ್ಲಾ ಕಾರ್ಯಗಳಿಗೂ ಮೂಲವಾದ ಹಣಕಾಸಿನ ಸಾಲ, ಸೌಲಭ್ಯವನ್ನು ಕೃಷಿಕರಿಗೆ ಒದಗಿಸಿಕೊಡಲು ರೈತರ ಸೊಸೈಟಿಗಳು ಕೆಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ಕಾರ್ಯ ಮಾಡುತ್ತಿವೆ ಎಂದು ಅವರು ಹೇಳಿದರು.

ಹಿರಿಯ ಸಹಕಾರಿ ಚಿಂತಕ ಇಂದಿರಾಕಾಂತ ಕಾಮಕರ ಮಾತನಾಡುತ್ತಾ ಸಹಕಾರಿ ಸಂಘಗಳು ತಮ್ಮ ಜವಾಬ್ದಾರಿಯ ಒತ್ತಡಗಳ ನಡುವೆ ಕಾರ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಇದ್ದು ಸಾಲಮನ್ನಾ, ಬೆಳೆವಿಮೆ, ಸಕರ್ಾರದ ವಿವಿಧ ಯೋಜನೆಗಳು, ಕೆಡಿಸಿಸಿ ಬ್ಯಾಂಕ್ ಸಾಲ ಮೊದಲಾದ ವಿವಿಧ ಕಾರ್ಯಗಳನ್ನು ಮಾಡಬೇಕಾಗಿದೆ. ಉತ್ತಮ ಆಡಳಿತ ಮಂಡಳಿ, ಜವಾಬ್ದಾರಿಯುತ ಸಿಬ್ಬಂದಿಗಳ ಸಹಕಾರದಿಂದ ಈ ಕರ್ತವ್ಯವನ್ನು ಉತ್ತಮ ರೀತಿಯಿಂದ ನಿಭಾಯಿಸಬಹುದಾಗಿದೆ ಎಂದು ನುಡಿದರು.

ಜಿಲ್ಲಾ ಸಹಕಾರಿ ಯುನಿಯನ್ ಉಪಾಧ್ಯಕ್ಷ ಶಿವಪುತ್ರ ನುಚ್ಚಂಬ್ಲಿ ಅಧ್ಯಕ್ಷತೆ ವಹಿಸಿದ್ದರು. ಕನರ್ಾಟಕ ಇನ್ಸಟಿಟ್ಯೂಟ್ ಕೋ-ಆಪ್ ಮ್ಯಾನೇಜಮೆಂಟ್ನ ರಾಜೇಶ ಯಾವಗಲ್ 'ಸಾರ್ವಜನಿಕ, ಖಾಸಗಿ, ಸಹಕಾರಿ ಸಹಭಾಗಿತ್ವದ ನಿಮರ್ಾಣ ದಿನ' ವಿಷಯದ ಕುರಿತು ಉಪನ್ಯಾಸ ನೀಡಿದರು.

ಕೆಡಿಸಿಸಿ ಬ್ಯಾಂಕ್ ನಿದರ್ೇಶಕ ಕೃಷ್ಣಾ ದೇಸಾಯಿ, ಯುನಿಯನ್ ನಿದರ್ೇಶಕ ತಿಮ್ಮಣ್ಣಾ ಗಾಂವಕರ, ಮಾಕರ್ೆಟಿಂಗ್ ಸೊಸೈಟಿ ಅಧ್ಯಕ್ಷ ಮೇಘರಾಜ್ ಪಾಟೀಲ, ತೇರಗಾಂವ ಸೊಸೈಟಿ ಅಧ್ಯಕ್ಷ ಸುರೇಶ ಶಿವಣ್ಣವರ, ಕೆಡಿಸಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಧರಣೇಂದ್ರ ಆಚಾರಿ ವೇದಿಕೆಯಲ್ಲಿದ್ದರು.

ಯುನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಲಪ್ಪಾ ಕೋಡಿಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ತೇರಗಾಂವ ಸೊಸೈಟಿಯ ವ್ಯವಸ್ಥಾಪಕ ಈರಯ್ಯಾ ಹಿರೇಮಠ ಪ್ರಾರ್ಥನೆ ಹಾಡಿದರು.

ಸನ್ಮಾನ:- ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸಹಕಾರಿ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಹಲವರಿಗೆ ಸನ್ಮಾನಿಸಲಾಯಿತು. ನಾಗಶೆಟ್ಟಿಕೊಪ್ಪ ಸೊಸೈಟಿಯ ಅಧ್ಯಕ್ಷ ಕೇದಾರಿ ಸಾಂಬ್ರಾಣಿಕರ, ಮುಖ್ಯ ಕಾರ್ಯನಿವರ್ಾಹಕ ಗಂಗಾಧರ ನಾಯಕ, ಹಿರಿಯ ಸಹಕಾರಿ ವಾಮನ್ ಮಿರಾಶಿ, ಮದನಳ್ಳಿ ಸೊಸೈಟಿಯ ನಿವೃತ್ತ ಮುಖ್ಯ ಕಾರ್ಯನಿವರ್ಾಹಕ ವೆಂಕಟೇಶ ರೇಡೇಕರ, ಜೋಯಿಡಾ ತಾಲೂಕಿನ ಗುಂದ ಸೊಸೈಟಿಯ ಅಧ್ಯಕ್ಷ ಎನ್.ವಿ. ಹೆಗಡೆ, ಪ್ರಧಾನಿ ಸೊಸೈಟಿಯ ಅಧ್ಯಕ್ಷ ಕೃಷ್ಣಾ ದೇಸಾಯಿ, ಮುಖ್ಯ ಕಾರ್ಯನಿವರ್ಾಹಕ ಎಸ್.ಡಿ. ಬಾಂದೇಕರ, ಉಳವಿ ಸೊಸೈಟಿಯ ಮುಖ್ಯ ಕಾರ್ಯನಿವರ್ಾಹಕ ಜಾಹೀದ ಸೈಯದ್ ಇವರನ್ನು ಸತ್ಕರಿಸಿದರು.