ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ.ನ.27 : ಉತ್ತಮ ಆರೋಗ್ಯಕ್ಕೆ ನಿತ್ಯ ಯೋಗ ಹಾಗೂ ಮಿತಹಾರ, ಕ್ರಮಬದ್ದ ಜೀವನಶೈಲಿ ಸಹಕಾರಿಯಾಗಿದೆ ಎಂದು ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆಯ ಕಾಯರ್ಾಧ್ಯಕ್ಷ ಡಾ.ಎಚ್.ಎನ್.ಪಿ.ವಿಠಲ್ ಹೇಳಿದರು.
ಪಟ್ಟಣದಲ್ಲಿ ಪತಂಜಲಿ ಯೋಗ ಸಮಿತಿ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಚೇಂಬರ್ಸ್ ಆಫ್ ಕಾಮಸರ್್ ಹಾಗೂ ಜೇಸಿಐ ಸನ್ಫ್ಲವರ್ ಸಂಸ್ಥೆ ಸೇರಿದಂತೆ ವಿವಿಧ ಸಕರ್ಾರಿ ಇಲಾಖೆಗಳ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಯೋಗ ಮ್ಯಾರಥಾನ್ಗೆ ಚಾಲನೆ ನೀಡಿ ಮಾತನಾಡಿದರು. ಮನುಷ್ಯ ತನ್ನ ಒತ್ತಡದ ಜೀವನ ನಿರ್ವಹಣೆಯಲ್ಲಿ ಆರೋಗ್ಯದ ಕಡೆ ಗಮನ ಹರಿಸದೇ ಹಣ ಮಾಡುವ ಗೋಜಿನಲ್ಲಿ ತೊಡಗಿದ್ದಾನೆ. ಹಣ ಗಳಿಕೆಯಿಂದ ಉತ್ತಮ ಆರೋಗ್ಯವನ್ನು ಕೊಂಡೊಕೊಳ್ಳಲು ಸಾಧ್ಯವಿಲ್ಲ. ಭಾರತೀಯ ಪರಂಪರೆಯಲ್ಲಿ ಯೋಗ ಮತ್ತು ಆಯರ್ುವೇದಕ್ಕೆ ವಿಶೇಷವಾದ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ ಪರಿಸರವನ್ನು ಕಾಪಾಡಲು ಪ್ರತಿಯೊಬ್ಬರೂ ಸ್ವಇಚ್ಛೆಯಿಂದ ಮುಂದಾಗಬೇಕು. ಪ್ಲಾಸ್ಟಿಕ್ನ್ನು ತ್ಯಜಿಸಿ, ಕರಿದ ತಿಂಡಿಗಳಿಂದ ದೂರ ಉಳಿಯಬೇಕಿದೆ. ಪಟ್ಟಣದಲ್ಲಿ ಅತೀ ಹೆಚ್ಚು ಪಾಸ್ಟ್ಪುಡ್ ತಿನಿಸುಗಳಿಗೆ ಮನುಷ್ಯ ಮಾರ ಹೋಗುತ್ತಿದ್ದಾನೆ. ತಾಲೂಕಾಡಳಿತ ಸೂಕ್ತ ಕ್ರಮ ಒದಗಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದರು.
ಬಳಿಕ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಿಂದ ಮ್ಯಾರಥಾನ್ ಆರಂಭವಾಗಿ ಕೂಡ್ಲಿಗಿ ವೃತ್ತ, ನೇತಾಜಿ ರಸ್ತೆ, ಬಸವೇಶ್ವರ ವೃತ್ತದ ಮೂಲಕ ಹಗರಿ ಆಂಜನೇಯ ದೇಗುಲದವರೆಗೆ ನಡೆಸಲಾಯಿತು. ಮ್ಯಾರಥಾನ್ನಲ್ಲಿ ವಿದ್ಯಾಥರ್ಿಗಳು ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಸಕರ್ಾರಿ ನೌಕರರು ಭಾಗವಹಿಸಿದ್ದರು.
ಈ ವೇಳೆ ಪತಂಜಲಿ ಯೋಗ ಸಮಿತಿಯ ಷಣ್ಮುಖಪ್ಪ, ಚೇಂಬರ್ಸ್ ಆಫ್ ಕಾಮಸರ್್ ಅಧ್ಯಕ್ಷ ಎಸ್.ಎಂ.ಚಂದ್ರಯ್ಯ ಮಾತನಾಡಿದರು. ಪುರಸಭೆ ಸದಸ್ಯ ಮೃತ್ಯುಂಜಯ ಬಾದಾಮಿ, ಪತಂಜಲಿ ಯೋಗ ಸಮಿತಿಯ ಎಸ್.ಬಿ.ಶಂಭುಲಿಂಗ, ಪ್ರಭು ಬಾದಾಮಿ, ವಕೀಲ ರಮೇಶ್, ಯೋಗ ಗುರುಗಳಾದ ಡಿ.ದುರ್ಗಣ್ಣ, ಮಹಾಂತೇಶ್ ಪಾಟೀಲ್, ಡಾ.ವಿನಯಸಿಂಹ, ಜೇಸಿಐನ ನಿಯೋಜಿತ ಅಧ್ಯಕ್ಷ ಅಶೋಕ ಉಪ್ಪಾರ, ಕಾರ್ಯದಶರ್ಿ ವಿಶಾಲ್ ಮೇಹರ್ವಾಡೆ, ಅನಿಲ್ ಚಿದ್ರಿ, ಶ್ರೀಶೈಲ, ಹೆಗ್ಡಾಳ್ ಶ್ರೀನಿವಾಸ ಇತರರಿದ್ದರು.