ಲೋಕದರ್ಶನವರದಿ
ರಾಣೇಬೆನ್ನೂರು 25 : ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗುವುದರ ಮೂಲಕ ರಾಜಕೀಯ, ಎಪಿಎಂಸಿ, ಪಂಚಾಯತ್ ರಾಜ್, ಸಹಕಾರಿ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ ನನ್ನನ್ನು ಸಂಸದನನ್ನಾಗಿ ಆಯ್ಕೆ ಮಾಡಲು ಮತದಾರರು ಮುಂದಾಗುತ್ತಾರೆ ಎಂದು ಶಾಸಕ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯಥರ್ಿ ಡಿ.ಆರ್.ಪಾಟೀಲ ಹೇಳಿದರು.
ಸೋಮವಾರ ನಗರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಕೃಷಿ ಮನೆತನದಲ್ಲಿ ಹುಟ್ಟಿದ ನನಗೆ ಸಾಮಾಜಿಕ ರಂಗದಲ್ಲಿ ಸೇವೆ ಸಲ್ಲಿಸಲು ಅನುಕೂಲವಾಗಿದೆ. 50 ವರ್ಷಗಳ ರಾಜಕೀಯ ಜೀವನದಲ್ಲಿ ಅನೇಕ ಏಳು ಬೀಳು ಗಳನ್ನು ಕಂಡರೂ ಸಹ ಸಮಾಜಮುಖಿ ಕಾರ್ಯ ನಿರಂತರವಾಗಿ ಮುನ್ನಡೆಸಿಕೊಂಡು ಬಂದಿರುವೆ ಎಂದರು.
ಈ ನನ್ನ ಸಮಾಜಿಕ ಕಳಕಳಿಯ ಸೇವೆಯನ್ನು ಗುರುತಿಸಿ ಕೈ ಕಮಾಂಡ್ ನನಗೆ ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪಧರ್ಿಸಲು ಈಗಾಗಲೇ ಅಧಿಕೃತ ಘೋಷಣೆ ಮಾಡಿ, ಬಿ.ಫಾಮರ್್ ಸಹ ನೀಡಿದೆ. ಹಾವೇರಿ, ಗದಗ ಈ ಕ್ಷೇತ್ರದಿಂದ ಪ್ರಥಮ ಬಾರಿಗೆ ಕಾಂಗ್ರೆಸ್ ಪಕ್ಷವು ಗದಗ ಮತ ಕ್ಷೇತ್ರಕ್ಕೆ ಕೈ ಟಿಕೇಟ್ ಘೋಷಣೆ ಮಾಡಿರುವುದು ಹೆಚ್ಚಿನ ಸಂತಸವನ್ನುಂಟು ಮಾಡಿದೆ ಎಂದರು.
ಈ ಬಾರಿ ನನಗೆ ಟಿಕೆಟ್ ದೊರೆಯುತ್ತದೆ ಎಂಬ ಆತ್ಮವಿಶ್ವಾಸ ಮೊದಲಿನಿಂದಲೂ ಇತ್ತು ಅದೂ ಸಹ ನನ್ನ ನಿರೀಕ್ಷೆಯಂತೆ ಟಿಕೆಟ್ ದೊರೆತಿದೆ. ಉತ್ತರ ಕನರ್ಾಟಕದ ಅನೇಕ ಸಮಸ್ಯೆಗಳಲ್ಲಿ ಒಂದಾಗಿರುವ ಕಳಸಾ ಬಂಡೂರಿ ಯೋಜನೆ ಮತ್ತು ನಂಜುಂಡಪ್ಪ ವರದಿ ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದರ ಜೊತೆಗೆ ಉತ್ತಮ ಸೇವೆ ಮಾಡಬೇಕೆಂಬ ಹೆಬ್ಬಯಕೆ ನನಗಿದೆ ಎಂದರು.
ಕೇಂದ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿಗಾಗಿ ಹಣವಿದೆ. ಆದರೆ ಅದನ್ನು ಸದ್ಬಳಕೆ ಮಾಡುವ ಪ್ರಯತ್ನವಾಗಬೇಕು. ಕೇಂದ್ರ ಸರಕಾರವು ದೇಶದ ಹಾಗೂ ಗ್ರಾಮಗಳ ಅಭಿವೃದ್ಧಿಗಾಗಿ ಎಷ್ಟೇ ಯೋಜನೆಗಳನ್ನು ಜಾರಿಗೊಳಿಸಿದರೂ ಸಹ ರಾಜ್ಯ ಸರಕಾರದ ಪಾತ್ರ ಬಹಳಷ್ಟಿದೆ. ರಾಜ್ಯ ಸರಕಾರವು ಈ ದಿಶೆಯಲ್ಲಿ ಸಮಾಜದ ಏಳ್ಗೆಗೆ ಮುಂದಾಗಬೇಕೆಂದರು.
ಕೇಂದ್ರ ಸರಕಾರದ ಸಜರ್ಿಕಲ್ ಸ್ಟ್ರೈಕ್ ಬಗ್ಗೆ ಮಾತನಾಡುವ ಮೋದಿ ಮತ್ತು ಅವರ ಬಂಬಲಿಗರು ಅದೇನ ಅಂತಹ ಮಹಾ ಕಾರ್ಯವಲ್ಲ ಎಂಬುದನ್ನು ಅರಿಯಬೇಕಿದೆ. ಬಿಜೆಪಿಯವರು ಇದನ್ನೇ ಪ್ರಚಾರದ ರೂಪದಲ್ಲಿ ಬಿಂಬಿಸುತ್ತ ಸಾಗುತ್ತಿದ್ದಾರೆ. ಆದರೆ ಇದು ಯಾವುದೂ ಕಾರ್ಯರೂಪಕ್ಕೆ ಬರುವುದಿಲ್ಲ ಎಂದರು. ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ, ಸಣ್ಣತಮ್ಮಪ್ಪ ಬಾಕರ್ಿ, ಶೇರುಖಾನ್ ಕಾಬೂಲಿ, ಮಂಜನಗೌಡ ಪಾಟೀಲ, ಸಿದ್ದಲಿಂಗಪ್ಪ ಕುಡಗೊಲು ಮತ್ತಿತರರು ಇದ್ದರು