ಬೈಲಹೊಂಗಲ 22: ಸಮಾಜಮುಖಿ ಕಾರ್ಯಗಳಿಗೆ ಹೆಸರಾಗಿರುವ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರತಿನಿಧಿಗಳು ನಾಗರಿಕರಿಗೆ ಉತ್ತಮ ಸೇವೆ ಕೊಡುವ ಮೂಲಕ ಮಾದರಿಯಾಗಬೇಕೆಂದು ಬೈಲಹೊಂಗಲ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಪುರಷೋತ್ತಮ ಹೇಳಿದರು.
ತಾಲೂಕಿನ ನೇಸರಗಿ ವೀರಭದ್ರೇಶ್ವರ ದೇವಸ್ಥಾನ ಸಭಾಭವನದಲ್ಲಿ ಮಂಗಳವಾರ ನಡೆದ ಬೈಲಹೊಂಗಲ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ನೇಸರಗಿ ಮೇಲ್ವಿಚಾರಕ ಭೀಮಾ ಮರಾಠೆ ಚಿಕ್ಕಬಾಗೇವಾಡಿ ಕಚೇರಿಗೆ ವಗರ್ಾವಣೆಗೊಂಡ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಯೋಜನೆಯ ಸಮಸ್ಯೆ ಪರಿಹಾರಕ್ಕೆ ಪ್ರತಿಯೊಬ್ಬ ಸೇವಾಪ್ರತಿನಿಧಿಗಳು ಗಮನಹರಿಸಬೇಕು. ಯಾವುದೇ ಅಹಂ ಇಟ್ಟುಕೊಳ್ಳದೆ ಯೋಜನೆಯ ಉದ್ದೇಶಗಳನ್ನು ಇಡೇರಿಸಲು ಪ್ರಯತ್ನಿಸಿದಲ್ಲಿ ಕಾರ್ಯಗಳು ಫಲಪ್ರದವಾಗಲು ಸಾಧ್ಯವೆಂದರು.
ನಿವೃತ್ತ ಶಿಕ್ಷಕ ಮಲ್ಲಿಕಾಜರ್ುನ ಮದನಬಾಂವಿ ಮಾತನಾಡಿ, ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಉತ್ತಮ ಕಾರ್ಯಗಳು ಆಗುತ್ತಿವೆ. ವಗರ್ಾವಣೆಗೊಂಡ ಮೇಲ್ವಿಚಾರಕರು ಉತ್ತಮ ಕಾರ್ಯಕ್ರಮ ರೂಪಿಸುವ ಮೂಲಕ ಯೋಜನೆಗೆ ಹೆಸರು ತಂದು ಕೊಟ್ಟಿದ್ದರು. ಹೊಸದಾಗಿ ಬಂದಿರುವ ಮೇಲ್ವಿಚಾರಕರು ಸಹ ಉತ್ತಮ ಸೇವೆ ಕಾರ್ಯ ಮಾಡಲು ಪ್ರತಿನಿಧಿಗಳ, ನಾಗರಿಕರ ಸಹಕಾರ ಅಗತ್ಯವೆಂದರು. ಮೇಲ್ವಿಚಾರಕ ಭೀಮಾ ಮರಾಠೆ ವಗರ್ಾವಣೆಗೊಂಡ ಪ್ರಯುಕ್ತ ಸನ್ಮಾನಿಸಲಾಯಿತು.
ನೂತನ ಮೇಲ್ವಿಚಾರಕಿ ಸರೋಜಿನಿ, ಕೆ.ಎಸ್.ಮೂಲಿಮನಿ, ಪ್ರಕಾಶ ತೋಟಗಿ, ಬಸಪ್ಪ ಕಗ್ಗಣಗಿ, ಹೇಮಾ ಪಾಟೀಲ, ರತ್ನವ್ವಾ ಹಂಚಿನಮನಿ, ಇನ್ನಿತರರು ಪಾಲ್ಗೊಂಡಿದ್ದರು. ಸೇವಾ ಪ್ರತಿನಿಧಿ ಮಹಾದೇವಿ ಹೂಗಾರ ವಂದಿಸಿದರು.