20 ರಿಂದ ಭಗತ್ಸಿಂಗ್ ಹುಟ್ಟೂರಿನಿಂದ ಜಿಲ್ಲೆಗೆ ಆಗಮಿಸುತ್ತಿರುವ ಸೈಕಲ್ ಯಾತ್ರಿಗಳು

ಲೋಕದರ್ಶನ ವರದಿ

ಕೊಪ್ಪಳ 17: ಜಿಲ್ಲೆಯ ಅಳವಂಡಿ ಗ್ರಾಮದ ಯುವಕರಾದ ಮಲ್ಲಿಕಾಜರ್ುನ ಮೇಟಿ, ವೆಂಕಟೇಶ  ಆವಿನ್, ಗೋಣೇಶ ಗೋಣಿಸ್ವಾಮಿ ಇವರುಗಳು ದಿ. 14ರಂದು ಅಳವಂಡಿ ಗ್ರಾಮದಿಂದ ಭಗತ್ಸಿಂಗ್ರ ಹುಟ್ಟೂರಾದ ಪಂಜಾಬ್ದ ಭಂಗಾ ಎಂಬ ಪ್ರದೇಶಕ್ಕೆ ಸೈಕಲ್ ಮೂಲಕ ತೆರಳಿ ದೇಶಪ್ರೇಮ ಹಾಗೂ ಕ್ರಾಂತಿಕಾರಕ ವಿಚಾರಗಳನ್ನು ಸಾರಲು ದೇಶವ್ಯಾಪಿ ಪ್ರಯಾಣಿಸುತ್ತಿರುವ ಯುವಕರು ಅಲ್ಲಿನ ಪವಿತ್ರ ಮಣ್ಣಿನೊಂದಿಗೆ ಇದೇ ಅಕ್ಟೋಬರ 20ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾಧಿಕಾರಿ ಕಛೇರಿಯ ಮುಂಭಾಗದಿಂದ ಕೊಪ್ಪಳ ಜಿಲ್ಲಾ ಕೇಂದ್ರಕ್ಕೆ ಆಗಮಿಸುತ್ತಿದ್ದು ಅವರುಗಳನ್ನು ಅದ್ದೂರಿಯಾಗಿ ಸ್ವಾಗತಿಸಲು ಕೊಪ್ಪಳ ನಗರದ ಸಂಘ ಸಂಸ್ಥೆಗಳು, ಯುವಕರು ಬೃಹತ ಬೈಕ್ ರ್ಯಾಲಿ ಮೂಲಕ ಸ್ವಾಗತಿಸಲು ನಿರ್ಧರಿಸಿದ್ದಾರೆ ಎಂದು ಸುರೇಶ ದಾಸರಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

       ಸೈಕಲ್ ಮೂಲಕ ಒಟ್ಟು 5550 ಕಿ.ಮೀ ಪ್ರಯಾಣಿಸಿದ ಯುವಕರು ದೇಶದ ಒಟ್ಟು ಹದಿನಾಲ್ಕು ರಾಜ್ಯಗಳನ್ನು ಪ್ರಯಾಣಿಸಿ ಭಗತ್ಸಿಂಗ್ರ ಹುಟ್ಟೂರು ಭಂಗಾ ಅಲ್ಲದೇ ಹರಿದ್ವಾರ, ಭದ್ರಿನಾಥ, ನಾಗೂರಾನ್, ಮಧುರಾ, ಜಾನ್ಸಿ, ಗಜಿಯಾಬಾದ್ ಸೇರಿದಂತೆ ಪುಣ್ಯಕ್ಷೇತ್ರಗಳಿಗೆ ಪ್ರಯಾಣಿಸಿ ಇವರು ಸ್ವಗ್ರಾಮ ಅಳವಂಡಿಗೆ ಅಕ್ಟೋಬರ 21 ರಂದು ಆಗಮಿಸಲಿದ್ದು ಸಂಕಲ್ಪವೀರರನ್ನು ಸ್ವಾಗತಿಸಲು ಅಂದು ಬೆಳಿಗ್ಗೆ 9 ಗಂಟೆಗೆ ಗ್ರಾಮದಲ್ಲಿ ಮೆರವಣಿಗೆಯ ಮೂಲಕ ಸ್ವಾಗತಿಸಲು ಭಗತ್ಸೇನೆಯ ಜಿಲ್ಲಾ ಘಟಕ, ಅಳವಂಡಿ ಘಟಕ ಹಾಗೂ ಅಳವಂಡಿ ಗ್ರಾಮದ ಸಮಸ್ತ ಯುವಕರು, ಹಿರಿಯರು, ಅಭಿಮಾನದಿಂದ ತಯಾರಿಯನ್ನು ನಡೆಸಿದ್ದಾರೆ ಎಂದು ಗ್ರಾಮ ಘಟಕ್ ಅಧ್ಯಕ್ಷ ಗಂಗಾಧರ ತಿಳಿಸಿದ್ದಾರೆ.

ಫೋಟೊ-4