ಲೋಕದರ್ಶನ ವರದಿ
ಬೈಲಹೊಂಗಲ,16:- ಬೈಲಹೊಂಗಲದಿಂದ ಶಬರಿ ಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನದವರೆಗೆ ಸೈಕಲ್ ಯಾತ್ರೆ ಕೈಕೊಂಡಿರುವ ನಾಗರಾಜ ಆಗಾಸಿ ಅವರನ್ನು ಪಟ್ಟಣದ ಸಮಗಾರ ಹರಳಯ್ಯಾ ಸಮಾಜ ಬಾಂಧವರು ಸತ್ಕರಿಸಿ, ಬೀಳ್ಕೋಟ್ಟರು.
ಇದೇ ವೇಳೆ ನಾಗರಾಜ ಆಗಾಸಿಯವರು ಇರು ಮುಡಿ ಕಟ್ಟಿ, ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶೇಖರ ಕಟ್ಟಿಮನಿ, ಸಂತೋಷ ದೊಡಮನಿ, ಅಜರ್ುನ ರಾಯಭಾಗ, ರಾಜೇಶ ತೋರಗಲ್ಲ, ಪರಶುರಾಮ ರಾಯಭಾಗ, ಬಸವರಾಜ ಕಿತ್ತೂರ, ತಿಪ್ಪಣ್ಣ ಸವದತ್ತಿ, ಮೋಹನ ಮುರಗೋಡ, ಪರಶುರಾಮ ಬನ್ನಿಗಿಡದ, ಕೃಷ್ಣ ಕಟ್ಟಿಮನಿ ಉಪಸ್ಥಿತರಿದ್ದರು.