ಲೋಕದರ್ಶನ ವರದಿ
ರಾಣೇಬೆನ್ನೂರು 26:ಸಮಾಜದಲ್ಲಿ ಎಡರು-ತೊಡರು ಸಾಮಾನ್ಯ ಅದನ್ನು ಮೆಟ್ಟಿನಿಂತು ಒಗ್ಗಟ್ಟಿನಿಂದ ಎಲ್ಲರೂ ಸಂಘಟಿತರಾದರೆ ಪರಿವರ್ತನೆ ಸಾಧ್ಯ. ಪುರಾತನ ಸಂಸ್ಕೃತಿ, ಆಚಾರ, ವಿಚಾರವನ್ನು ಎತ್ತಿ ಹಿಡಿದು ಮುನ್ನಡೆಯುವುದು ಪ್ರತಿಯೊಬ್ಬರ ಜವಾಬ್ಧಾರಿಯಾಗಿದ್ದು ಅದು ಚಿಂತನ-ಮಂಥನದ ಮೂಲಕ ಕಾರ್ಯರೂಪಕ್ಕೆ ಬರಬೇಕಾದರೆ ನೇಕಾರರ ಸಮಾಜ ಒಂದಾಗಬೇಕು ಎಂದು ಹಂಪಿ ಹೇಮಕೂಟದ ಪೀಠಾಧ್ಯಕ್ಷ ದಯಾನಂದಪುರಿ ಸ್ವಾಮಿಗಳು ಹೇಳಿದರು.
ದೇವ ಮಾನವರಿಗೆ ಬಟ್ಟೆ ಕೊಟ್ಟ ಕುಲ ನೇಕಾರ ಸಮಾಜವಾಗಿದ್ದು ಬಿಟ್ಟು ಹೋದ ಸಂಸ್ಕೃತಿಯನ್ನು ಪುನ:ಶ್ಚೇತನಗೊಳಿಸಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕೆಂದು ನಗರದ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ದೇವಾಂಗ ಸಮಾಜದ ಸಂಘಟನಾ ಸಭೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಇತಿಹಾಸ ಪರಂಪರೆಯಲ್ಲಿ ಪರಂಪರಾಗತವಾಗಿ ಬಂದ ಸಕ್ರಿಯವರ ಕುಟುಂಬದವರಿಂದ ಕುಲದೇವತೆ ಬನಶಂಕರಿದೇವಿಗೆ ಪಾದಯಾತ್ರೆ ಮೂಲಕ ಅಡ್ಡಪಲ್ಲಕಿಯಲ್ಲಿ ರೇಷ್ಮೆ ಸೀರೆಯನ್ನು ಸಮಪರ್ಿಸುವ ಕಾರ್ಯ ಜಾತ್ರೆಗೆ ಮೆರಗು ತರಲಿದ್ದು ಸರ್ವ ಕುಲಬಾಂಧವರ ಸಹಕಾರ ಅಗತ್ಯವಾಗಿದೆ ಎಂದರು.
ದೇವಾಂಗ ಸಮಾಜದ ರಾಜ್ಯಾಧ್ಯಕ್ಷ ಜಿ. ರಮೇಶ ಮಾತನಾಡಿ, ಸಮಾಜವು ಆಥರ್ಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಬೇಕಾದರೆ ಸಂಘಟನಾ ಶಕ್ತಿ ಹೆಚ್ಚಬೇಕು ಜೊತೆಗೆ ಪ್ರತಿಯೊಬ್ಬರಲ್ಲಿಯೂ ಹೋರಾಟದ ಮನೋಭಾವ ಬೆಳೆಯಬೇಕು. ಸಮಾಜದಲ್ಲಿ ರೈತರಿಗೆ ನೀಡುವ ಸವಲತ್ತು ನೇಕಾರರಿಗೆ ಸಿಗುತ್ತಿಲ್ಲ. ನೇಕಾರರ ಸಾಲಮನ್ನಾ, ಉಚಿತ ವಿದ್ಯುತ್, ಮೂದನೂರಿನಲ್ಲಿ ಪ್ರಾಧಿಕಾರ ರಚನೆ ಸೇರಿದಂತೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾದ ನೇಕಾರ ಸಮಾಜವು ಮುಂದಿನ ದಿನಗಳಲ್ಲಿ ರಸ್ತೆಗಿಳಿದು ಹೋರಾಟ ಮಾಡಲಾಗುವುದು ಎಂದರು.
ನೇಕಾರ ಒಕ್ಕೂಟದ ಗೌರವಾಧ್ಯಕ್ಷ ಡಾ. ಬಸವರಾಜ ಕೇಲಗಾರ ಮಾತನಾಡಿ, ಮಠಗಳು ಅಭಿವೃದ್ಧಿಯಾದರೆ ಸಮಾಜದಲ್ಲಿ ಗಟ್ಟಿತನ ಬರಲು ಸಾಧ್ಯ. ರಾಜ್ಯದಲ್ಲಿ 60 ಲಕ್ಷ ಜನಸಂಖ್ಯೆ ಹೊಂದಿರುವ ನೇಕಾರ ಸಮುದಾಯವು ರಾಜಕೀಯದಲ್ಲಿ ಉನ್ನತಿ ಸಾಧಿಸದೇ ಯಾರೊಬ್ಬರೂ ವಿಧಾನಸಭೆ ಸದಸ್ಯರಾಗದಿರುವುದು ಬೇಸರದ ಸಂಗತಿ. ಆದ್ದರಿಂದ ಕುಲಬಾಂಧವರು ಇತರೆ ಸಮಾಜದವರೊಡನೆ ಉತ್ತಮ ಬಾಂಧವ್ಯ ಹೊಂದಿ ಹೋರಾಟದ ಕೂಗನ್ನು ಮೊಳಗಿಸಿದರೆ ಆಥರ್ಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಬಲರಾಗಲು ಸಾಧ್ಯ ಎಂದರು.
ಗಾಯತ್ರಿ ಹಂಪಿ ಹೇಮಕೂಟದ ಪ್ರಧಾನ ಸಂಚಾಲಕ ರವೀಂದ್ರ ಕಲಬುಗರ್ಿ, ದೇವಾಂಗ ಸಮಾಜದ ತಾಲೂಕ ಅಧ್ಯಕ್ಷ ಕರಬಸಪ್ಪ ನೀಲಗುಂದ, ರಾಜಶೇಖರ ಮಾತನಾಡಿದರು. ಜಿಲ್ಲಾಧ್ಯಕ್ಷ ಸಂಕಪ್ಪ ಮಾರನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಲಕ್ಷ್ಮಿಕಾಂತ ಹುಲಗೂರ, ಶಿವಪ್ಪ ಹೆದ್ದೇರಿ, ಅಶೋಕ ದುರ್ಗದಶೀಮಿ, ಪಟ್ಟಸಾಲಿ ಸಮಾಜದ ಅಧ್ಯಕ್ಷ ಈಶ್ವರ ಚಿನ್ನಿಕಟ್ಟಿ, ಯುವಕ ಸಂಘದ ಬಸವರಾಜ ಮೈಲಾರ, ಮಹಿಳಾ ಸಂಘದ ಅಧ್ಯಕ್ಷೆ ಭಾಗ್ಯಶ್ರೀ ಕುಸನೂರ ಸೇರಿದಂತೆ ಮತ್ತಿತರರು ಇದ್ದರು.