ಲೋಕದರ್ಶನ ವರದಿ
ರಾಣೇಬೆನ್ನೂರ 24: ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆಯಿಂದಾಗಿ ಬಹುತೇಕ ಮಕ್ಕಳು ಉತ್ಸಾಹದ ಕೊರತೆಯನ್ನು ಅನುಭವಿಸುವಂತಾಗಿದೆ. ಮಕ್ಕಳಿಗೆ ಆಟ, ಪಾಠ ಮತ್ತು ನೋಟ ಇದಕ್ಕೆ ಅನುಗುಣವಾಗಿ ಸಾಂಸ್ಕೃತಿಕತೆ ಪ್ರತಿಬಿಂಬಿಸಲು ಶಿಕ್ಷಣಕ್ಕೆ ಪೂರಕವಾಗಿ ಸಮಗ್ರ ಸಾಂಸ್ಕೃತಿಕ ಚಟುವಟಿಕೆಗಳು ಅವರಲ್ಲಿ ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ಗೌರಿಶಂಕರ ನಗರದ ದೇವಸ್ಥಾನ ಆವರಣದಲ್ಲಿ ಜೆಸಿಐ ಸಂಸ್ಥೆ ಮತ್ತು ನಂದಿ ವಿದ್ಯಾರ್ಧಕ ಗ್ರಾಮೀಣಾಭಿವೃದ್ದಿ ಸಂಸ್ಥೆ ಆಯೋಜಿಸಿದ್ದ ಮಕ್ಕಳ ರಜಾ ಅವಧಿಯ ಬೇಸಿಗೆ ಶಿಬಿರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿಜ ಜೆಸಿಐ ಸಂಸ್ಥೆಯ ಅಧ್ಯಕ್ಷೆ ಪುಷ್ಪಾ ಬದಾಮಿ ಹೇಳಿದರು.
ಮಕ್ಕಳಲ್ಲಿ ಅಡಗಿರುವ ಸಾಂಸ್ಕೃತಿಕ ಆಂತರಿಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾರು ಕಸಿದುಕೊಳ್ಳಲು ಸಾಧ್ಯವಾಗಲಾರದು. ಅವರಲ್ಲಿರುವ ಪ್ರತಿಭೆಯನ್ನು ಸಾರ್ವಜನಿಕವಾಗಿ ಹೊರಸೂಸಲು ವೇದಿಕೆಗಳ ಅವಶ್ಯಕತೆ ಇದೆ ಎಂದ ಅವರು ಜೆಸಿಐ ಸಂಸ್ಥೆಯು ತನ್ನ ಪಾಲಿನ ಉದ್ದೇಶಿತ ಯೋಜನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಮಕ್ಕಳ ರಜೆಯ ಈ ಸಂದರ್ಭವನ್ನು ಸೂಕ್ತವಾಗಿ ಬಳಕೆಯಾಗಬೇಕು ಎನ್ನುವ ಸದುದ್ದೇಶದಿಂದ ಶಿಬಿರವನ್ನು ಆಯೋಜಿಸಿರುವುದಾಗಿ ಹೇಳಿದರು.
ಡಾ: ನಾರಾಯಣ ಪವಾರ, ನಾಟಕ ನಿದರ್ೇಶಕಿ ನಂದಿನಿ ಮಲ್ಲಿಕಾಜರ್ುನ, ಚಿತ್ರಕಲಾ ಶಿಕ್ಷಕ ನಾಮದೇವ ಕಾಗದಗಾರ, ಸಚ್ಚಿದಾನಂದ, ಸರೋಜಾ, ಲೀಲಾ ಗುಡಿಹಾಳ, ನಾಗರಾಜ ಚಕ್ಕಿ, ಮಂಜುಳಾ ಸೊಪ್ಪಿನ್ ಸೇರಿದಂತೆ ಮತ್ತಿತರರ ಗಣ್ಯರು ಶಿಬಿರ ಸಂಚಾಲಕರು, ನೂರಾರು ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು. ವಾರಗಳ ಕಾಲ ನಡೆದ ಶಿಬಿರದಲ್ಲಿ ಜನಪದ, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಕೋಲಾಟ, ಕರಕುಶಲ ಕಲೆ ಸೇರಿದಂತೆ ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳ ಸ್ಪಧರ್ೆಯಲ್ಲಿ ಪಾಲ್ಗೊಂಡ ಮಕ್ಕಳಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು. ನಂತರ ನಡೆದ ಶಿಬಿರಾಥರ್ಿಗಳ ವೈವಿದ್ಯಮಯ ಸಾಂಸ್ಕೃತಿಕ ಕಲಾ ಪ್ರದರ್ಶನಗಳು ಸಾರ್ವಜನಿಕರ ಗಮನ ಸೆಳೆದವು.