ಕೃಷಿಪರಿಕರ ವಿತರಕರಿಗೆ ಬಿಳ್ಕೋಡುವ ಸಮಾರಂಭ

ಲೋಕದರ್ಶನ ವರದಿ

ಬೆಳಗಾವಿ 25:  ಐಸಿಎಆರ್-ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿಪರಿಕರ ವಿತರಕರಿಗೆ ನಡೆಸಲಾದ ಕೃಷಿ ಡಿಪ್ಲೋಮಾ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ವಿತರಕರಿಗೆ ಬಿಳ್ಕೋಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದ ಕಾಯರ್ಾಧ್ಯಕ್ಷ ಬಿ.ಆರ್. ಪಾಟೀಲ ರೈತರ ಹಾಗೂ ಕೃಷಿ ವಿಜ್ಞಾನಿಗಳ ಮಧ್ಯೆ ಸೇತುವೆಯಂತೆ ಕೆಲಸ ಮಾಡುವ ಇನ್ಪುಟ್ ಡೀಲರುಗಳು ಈ ತರಬೇತಿಯಿಂದ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳುವಂತಾಗಿದ್ದು ಇದರಿಂದ ರೈತರಿಗೆ ಹೆಚ್ಚಿನ ಮತ್ತು ಮೌಲ್ಯಯುತ ಸೇವೆಯನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಗೋವಾದ ಐಸಿಎಆರ್-ಕೇಂದ್ರಿಯ ಕರಾವಳಿ ಕೃಷಿ ಸಂಶೋಧನಾ ಸಂಸ್ಥೆಯ ನಿವೃತ್ತ ನಿದರ್ೆಶಕರಾದ ಡಾ. ವ್ಹಿ.ಎಸ್. ಕೋರಿಕಂಥಿಮಠ, ರೈತರ ಸಮಸ್ಯೆಗಳಿಗೆ ಡೀಲರುಗಳು ವಿಜ್ಞಾನಿಗಳೊಂದಿಗೆ ಚಚರ್ಿಸಿ ಸೂಕ್ತ ರೀತಿಯಲ್ಲಿ ಮತ್ತು ವೈಜ್ಞಾನಿಕವಾಗಿ ಪರಾಮರ್ಶಸಿ ರೈತರಿಗೆ ಸ್ಪಂದಿಸುವಂತೆ ತಿಳಿಸಿದರು.

ತರಬೇತಿಯಲ್ಲಿ ಭಾಗವಹಿಸಿದ ವಿತರಕರಾದ ನಾಗರಾಜ ಕರಿಲಿಂಗಯ್ಯನವರ, ಜಿ.ಎಸ್. ಕಿತ್ತೂರಮಠ ಹಾಗೂ ಸದಾನಂದ ಶೆಟ್ಟಿ ಇವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ, 48 ವಾರಗಳ ತರಬೇತಿಯಲ್ಲಿ ಕೃಷಿಯ ಆಧುನಿಕ ತಂತ್ರಜ್ಞಾನಗಳ ಕುರಿತು ಜ್ಞಾನ ಸಂಪಾದಿಸಲು ಹಾಗೂ ರೈತರೊಂದಿಗೆ ವೈಜ್ಞಾನಿಕ ವಿಸ್ತರಣಾ ಪದ್ಧತಿಯನ್ನು ಅನುಷ್ಠಾನಗೊಳಿಸಲು ಉತ್ತೇಜನ ಪಡೆಯಲು ಅನುಕೂಲವಾಗಿದೆ ಎಂದರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಎಸ್. ಎಸ್. ಹಿರೇಮಠ ಅವರು ಕಾರ್ಯಕ್ರಮ ನಿರೂಪಿಸಿದರು ಮತ್ತು ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿಗಳಾದ ಶ್ರೀದೇವಿ ಅಂಗಡಿಯವರು ವಂದಿಸಿದರು.