ಗುಲರ್ಾಪೂರ 06: ಮೂಡಲಗಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಗುಲರ್ಾಪೂರ ಕ್ರಾಸದಲ್ಲಿ ಪೋಲೀಸ್ ಠಾಣೆಯ ಆಶ್ರಯದಲ್ಲಿ ಅಪರಾಧ ತಡೆ ಮಾಸಾಚರಣೆಯನ್ನು ದಿ. 4ರಂದು ನಡೆಸಲಾಯಿತು.
ಎ.ಎಸ್.ಆಯ್. ಐ.ಬಿ. ಮುಚ್ಚಂಡಿ ಹಿರೇಮಠರವರು ಮಾತನಾಡಿ ಸಾರ್ವಜನಿಕರು ಅಪರಾಧಗಳನ್ನು ನಡೆಯದಂತೆ ನೋಡಿಕೊಳ್ಳಬೇಕು. ದ್ವಿ-ಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕಾರು ಸವಾರರು ಬೆಲ್ಟ ಧರಿಸಬೇಕು. ತಮ್ಮ ಅಮೂಲ್ಯ ಜೀವ ಉಳಿಸಿ ಕುಟುಂಬಕ್ಕೆ ಆಗುವ ತೊಂದರೆಯಿಂದ ತಮ್ಮ ಕುಟುಂಬ ಕಾಪಾಡಬೇಕು. ಟ್ರ್ಯಾಕ್ಟರ ಚಾಲಕರು ಸಾರ್ವಜನಿಕರಿಗೆ ಕಿರಿಕಿರಿ ಆಗುವ ಹಾಗೆ ಟೇಪ್ ಹಚ್ಚಬಾರದು. ಟ್ರ್ಯಾಕ್ಟರಗಳನ್ನು ರಸ್ತೆ ಬಿಟ್ಟು ನಿಲ್ಲಿಸಬೇಕು. ಕೆಲವು ಟ್ರ್ಯಾಕ್ಟರ ಹಾಗೂ ಲಾರಿಯವರು ಹಿಂದುಗಡೆ ಡಿಂಪಲ್ ಸ್ಟೀಕರಿಂಗ್ ಹಾಗೂ ಡಿಂಪಲ್ ಲೈಟ್ ಇರದೇ ಇರುವುದರಿಂದ ಹೆಚ್ಚಿನ ಅಪಘಾತಗಳು ಆಗುತ್ತವೆ. ಈ ತಪ್ಪನ್ನು ಸರಿಪಡಿಸಿಕೊಳ್ಳಬೇಕು. ಸಾರ್ವಜನಿಕರು ರಸ್ತೆ ನಿಯಮ ಮತ್ತು ಯಾವುದೇ ಅಪರಾಧ ಆಗದ ಹಾಗೆ ನಡೆದುಕೊಳ್ಳಬೇಕು ಎಂದು ಹೇಳಿದರು.
ಮೂಡಲಗಿ ಪೋಲಿಸ್ ಸಿಬ್ಬಂದಿ ಹಾಗೂ ರೇವಪ್ಪ ಸತ್ತಿಗೇರಿ, ಈರಯ್ಯಾ ಜಡಿ, ಪುಟ್ಟ್ಯಾ ನೇಮಗೌಡರ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.