ಮೂಡಲಗಿ 02: ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಸಾಧ್ಯವಿದೆ ಎಂದು ಮೂಡಲಗಿ ದಿವಾಣಿ ಹಾಗೂ ಜೆಎಮ್ಎಫ್ಸಿ ನ್ಯಾಯಲಯದ ನ್ಯಾಯಧೀಶ ಪಿ.ಎಸ್. ಸಂತೋಷ ಕುಮಾರ ಹೇಳಿದರು.
ಅವರು ಭಾನುವಾರ ಪಟ್ಟಣದ ಎಸ್.ಎಸ್. ಆರ್ ಮೈದಾನದಲ್ಲಿ ವಕೀಲರ ದಿನಾಚರಣೆಯ ಅಂಗವಾಗಿ ನ್ಯಾಯವಾದಿಗಳ ಮತ್ತು ಪೋಲಿಸ್ ತಂಡಗಳ ನಡುವೆ ಹಮ್ಮಿಕೊಂಡಿದ್ದ ಸೌಹರ್ದತಾ ಕ್ರಿಕೆಟ್ ಪಂದ್ಯವನ್ನು ಉದ್ಘಾಟಿಸಿ ಮಾತನಾಡುತ್ತ, ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಹಗಲು ರಾತ್ರಿ ಎನ್ನದೆ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಇವರು ಎಂತಹ ತುತರ್ು ಸಂದರ್ಭದಲ್ಲಿಯೂ ಕರ್ತವ್ಯನಿಷ್ಠರಾಗಿ ಕಾರ್ಯ ನಿರ್ವಹಿಸುತ್ತಾರೆ. ಅವರ ದೈಹಿಕ ಮತ್ತು ಮಾನಸಿಕ ಸಾಮಥ್ರ್ಯ ಹೆಚ್ಚಿಸಲೂ ಹಾಗೂ ಒತ್ತಡ ನಿವಾರಿಸಲೂ ಇಂತಹ ಕ್ರೀಡಾಕೂಟಗಳು ಸಹಕಾರಿಯಾಗುತ್ತದೆ ಎಂದರು.
ಮೂಡಲಗಿ ವೃತ್ತನೀರಿಕ್ಷಕ ವೆಂಕಟೇಶ ಮುರನಾಳ ಮಾತನಾಡಿ, ಈ ರೀತಿಯ ಕ್ರೀಡಕೂಟ, ಸ್ನೇಹಕೂಟಗಳನ್ನು ಏರ್ಪಡಿಸುವುದರಿಂದ ಇಲಾಖೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಸಾಧ್ಯವಿದೆ. ಪ್ರತಿಯೊಬ್ಬರು ಕ್ರೀಡೆಗಳಲ್ಲಿ ಭಾಗವಹಿಸುವ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಮೂಡಲಗಿ ಪಿಎಸ್ಐ ಶರಣೇಶ ಜಾಲಿಹಾಳ, ಕುಲಗೋಡ ಪಿಎಸ್ಐ ಆರ್.ವಾಯ್ ಬೀಳಗಿ, ಘಟಪ್ರಭಾ ಪಿಎಸ್ಐ ರಮೇಶ ಪಾಟೀಲ, ಮೂಡಲಗಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಎಲ್ ಹುಣಶ್ಯಾಳ, ನ್ಯಾಯವಾದಿಗಳು ಮತ್ತು ಮೂಡಲಗಿ, ಕುಲಗೋಡ, ಹಾಗೂ ಘಟಪ್ರಭಾ ಪೋಲಿಸ್ ಸಿಬ್ಬಂದಿಗಳು ಭಾಗವಹಿಸಿದ್ದರು. ಕ್ರೀಕೆಟ್ ಪಂದ್ಯದಲ್ಲಿ ಮೂಡಲಗಿ ನ್ಯಾಯವಾದಿಗಳ ತಂಡ ಪ್ರಥಮ ಸ್ಥಾನ, ಪೋಲಿಸರ ತಂಡ ದ್ವಿತೀಯ ಸ್ಥಾನ ಗಳಿಸಿತು.