ಲೋಕದರ್ಶನ ವರದಿ
ಮೂಡಲಗಿ 08: ಕರ್ತವ್ಯ ನಿರತ ನವದೆಹಲಿ ಪತ್ರಕರ್ತರೊಬ್ಬರಿಗೆ ಕೊರೋನಾ ಸೊಂಕು ತಗುಲಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಮೂಡಲಗಿ ತಾಲೂಕಾ ಪತ್ರಕರ್ತರ ಬಳಗವು ಶ್ರದ್ಧಾಂಜಲಿ ಅಪರ್ಿಸಿದರು.
ಮಂಗಳವಾರ ಪತ್ರಕರ್ತರು ಒಂದು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಿದ ಸಮಯದಲ್ಲಿ ಹಿರಿಯ ಪತ್ರಕರ್ತ ಯ.ಯ.ಸುಲ್ತಾನಪೂರ ಮಾತನಾಡಿ,ಕೊರೋನಾ ಚಿಕಿತ್ಸೆ ಕ್ರಮದಲ್ಲಿ ಲೋಪ ದೋಷಗಳು ಆಗುತ್ತಿದ್ದು ಇದು ಸಾಮಾನ್ಯ ಜನತೆಗೆ ಅಷ್ಟೆ ಅಲ್ಲದೆ ಪತ್ರಕರ್ತರಿಗೂ ಅನ್ವಯಿಸುತ್ತಿದ್ದು ಇದರಿಂದ ಚಿಕಿತ್ಸೆ ಫಲಕಾರಿ ಆಗುವುದಿಲ್ಲ ಎಂದು ತಿಳಿದು ಮನನೊಂದು ಜಿಗುಪ್ಸೆಗೊಂಡು ನವದೆಹಲಿ ಪತ್ರಕರ್ತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಈ ಘಟನೆಯಿಂದ ಪತ್ರಕರ್ತರಿಗೆ ಸರಕಾರದಿಂದ ಯಾವ ಬದ್ರತೆಯೂ ಇಲ್ಲದಂತಾಗಿದೆ. ಮೃತ ಕುಟುಂಬಕ್ಕೆ 50ಲಕ್ಷ ಪರಿಹಾರವನ್ನು ಸರಕಾರ ನೀಡಬೇಕು ಅಂದಾಗ ಮಾತ್ರ ಇನ್ನುಳಿದ ಪತ್ರಕರ್ತರು ಕರ್ತವ್ಯಕ್ಕೆ ಚುತಿ ಬರದಂತೆ ಕಾರ್ಯನಿರ್ವಹಿಸಲು ಪ್ರೊತ್ಸಾಹ ಸಿಗುತ್ತದೆ ಎಂದು ಹೇಳಿದರು.
ಸುಬಾಸ ಗೊಡ್ಯಾಗೋಳ,ಸುರೇಶ ಪಾಟೀಲ,ಸುಧೀರ ನಾಯರ,ಮಲ್ಲು ಬೋಳನವರ,ಅಲ್ತಾಫ್ ಹವಾಲ್ದಾರ,ಭೀಮಶಿ ತಳವಾರ,ರಾಜಶೇಖರ ಮಗದುಮ್,ಈಶ್ವರ ಢವಳೇಶ್ವರ,ಯಾಕೋಬ ಸಣ್ಣಕ್ಕಿ ಇದ್ದರು.