ಲೋಕದರ್ಶನವರದಿ
ಶಿಗ್ಗಾವಿ03: ಲೋಕಸಭಾ ಚುನಾವಣೆ ಹಿನ್ನೆಲೆ ಮಾರ್ಚ 9 ರಂದು ನಡೆಯಲಿರುವ ಕಾಂಗ್ರೆಸ್ ಪರಿವರ್ತನೆ ಯಾತ್ರೆ ಬೃಹತ್ ಸಮಾವೇಶಕ್ಕಾಗಿ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರು ಆಗಮಿಸಲಿರುವ ಹಿನ್ನಲೆಯಲ್ಲಿ ಗುರುವಾರ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ದಿನೇಶ ಗುಂಡೂರಾವ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಾಲೂಕಿನ ಬಂಕಾಪುರ ಟೋಲ್ನಾಕಾದ ರಾಷ್ಟ್ರೀಯ ಹೆದ್ದಾರಿ ಹತ್ತಿರವಿರುವ ಖಾಲಿ ಜಾಗೆಯನ್ನು ಪರಿಶೀಲನೆ ನಡೆಸಿದರು.
ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ದಿನೇಶ ಗುಂಡೂರಾವ್ ಮಾತನಾಡಿ, ರಾಹುಲ್ ಗಾಂಧಿ ಯವರ ನೇತೃತ್ವದಲ್ಲಿ ನಡೆಯಲಿರುವ ಕಾಂಗ್ರೆಸ್ ಪರಿವರ್ತನೆ ಯಾತ್ರೆ ಬೃಹತ್ ಸಮಾವೇಶಕ್ಕಾಗಿ ತಾಲೂಕಿನ ಬಿಸನಳ್ಳಿ ಹಾಗೂ ಬಂಕಾಪುರದ ಹತ್ತಿರದಲ್ಲಿ ಸುಮಾರು ಮೂರು ಕಡೆಗಳಲ್ಲಿ ಖಾಲಿ ಜಾಗೆ ಪರಿಶೀಲನೆ ನಡೆಸಿದ್ದು, ಬಂಕಾಪುರ ಟೋಲ ನಾಕಾ ಹತ್ತಿರದ ಜಾಗೆ ಕಾರ್ಯಕ್ರಮ ನಡೆಸಲು ಸೂಕ್ತ ಎನ್ನಿಸಿದೆ ಎಂದು ಹೇಳಿದರು.
. ಲೋಕಸಭಾ ಚುನಾವಣೆಗೆ ಈ ವರೆಗೆ ಯಾವುದೇ ಅಭ್ಯಥರ್ಿಗಳ ಘೋಷಣೆ ಮಾಡಿಲ್ಲ. ಎಲ್ಲ ಜಾತಿಗಳ ಜನಾಂಗದವರು ಬೇಕು. ಇಲ್ಲಿ ಜಾತಿ,ಮತಗಳಿಗಿಂತ ಮುಖ್ಯವಾಗಿ ಸ್ಥಳೀಯ ಯೋಗ್ಯ ಅಭ್ಯಥರ್ಿ ಗುರುತಿಸಿ ಗೆಲ್ಲುವ ಅಭ್ಯಥರ್ಿಗೆ ಟಿಕೆಟ್ ನೀಡಲಾಗುತ್ತಿದೆ. ಇದು ಪಕ್ಷದ ತಿಮರ್ಾಣವಾಗಿದೆ. ಕಾಂಗ್ರೇಸ್ ಪರಿವರ್ತನಾ ಯಾತ್ರೆ ಕಾರ್ಯಕ್ರಮಕ್ಕೆ ಧಾರವಾಡ,ಹಾವೇರಿ ಹಾಗೂ ಗದಗ ಮೂರು ಜಿಲ್ಲೆ ಎರಡು ಲೋಕಸಭಾ ಮತಕ್ಷೇತ್ರದಿಂದ ಸುಮಾರ 3 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಹೊಂದಿದ್ದು, ವಾಹನ ಸಂಚಾರ, ರೈತರಿಗೆ, ಸಾರ್ವಜನಿಕರಿಗೆ ಬಂದು ಹೋಗಲು ಅನುಕೂಲ ಆಗುವಂತೆ ಸ್ಥಳ ನಿಗದಿ ಮಾಡಲಾಗುವದು. ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಕಾಂಗ್ರೆಸ್ನಲ್ಲಿ ಬಹುದೊಡ್ಡದಿದೆ.
ಆದರೆ ಸ್ಥಳೀಯ ಜನಪ್ರೀಯತೆ ಗಳಿಸಿರುವ ವ್ಯಕ್ತಿಗೆ ಟಿಕೆಟ್ ನೀಡಲಾಗುವುದು ಎಂದು ಹೇಳಿದರು.
ಪ್ರಚಾರ ಸಮಿತಿ ಅಧ್ಯಕ್ಷ, ಸಚಿವ, ಎಚ್.ಕೆ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದಖಾನ್, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಸಚಿವ ರುದ್ರಪ್ಪ ಲಮಾಣಿ, ಮಾಜಿ ಶಾಸಕರಾದ ಅಜ್ಜಂಪೀರ್ ಖಾದ್ರಿ, ಬಸವರಾಜ ಶಿವಣ್ಣವರ, ಜಿಲ್ಲಾ ಪಂಚಾಯ್ತಿ ಸದಸ್ಯ ಬಸನಗೌಡ ದೇಸಾಯಿ, ಎಪಿಎಂಸಿ ಅಧ್ಯಕ್ಷೆ ಪ್ರೇಮಾ ಪಾಟೀಲ, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್.ವೆಂಕೋಜಿ, ಕಾಯರ್ಾದ್ಯಕ್ಷ ವಿರೇಶ ಆಜೂರ ಉಪಸ್ಥಿತರಿದ್ದರು.